Saturday, July 27, 2024

Latest Posts

ಮಗುವಿಗೆ ಜ್ವರ ಬಂದಿದ್ದಕ್ಕೆ, ಅವನ ಬದಲು ಶಾಲೆಗೆ ಹೋದ ರೊಬೋಟ್..!

- Advertisement -

ಜೋಶ್ವಾ ಎಂಬ ಜರ್ಮನ್ ಬಾಲಕನಿಗೆ ಜ್ವರ ಬಂದ ಕಾರಣ, ಅವನ ಬದಲು ಅವನ ರೊಬೋಟ್ ಶಾಲೆಗೆ ಹೋಗಿ, ಕ್ಲಾಸ್ ಅಟೆಂಡ್ ಮಾಡಿದೆ. ಆ ಬಾಲಕ ಮನೆಯಲ್ಲಿ ಕಂಪ್ಯೂಟರ್ ಮುಂದೆ ಕುಳಿತುಕೊಂಡು, ಆ ರೊಬೋಟ್ ಮೂಲಕ ಕ್ಲಾಸಿನಲ್ಲಿ ಹೇಳುತ್ತಿರುವ ಪಾಠವನ್ನೆಲ್ಲಾ ಕೇಳುತ್ತಿದ್ದಾನೆ ಮತ್ತು ತನಗೆ ಪಾಠದ ಬಗ್ಗೆ ಇರುವ ಡೌಟ್ಸನ್ನ ಕೇಳ್ತಾನೆ.

ಇನ್ನು ಕ್ಲಾಸಿನಲ್ಲಿರುವ ಮಕ್ಕಳು ಜೋಶ್ವಾ ಜೊತೆ ಆ ರೊಬೋಟ್‌ ಮೂಲಕ ಮಾತಾಡ್ತಾರಂತೆ. ಜೋಶ್ವಾ ಕ್ಲಾಸಿನಲ್ಲಿ ಇದ್ದಾಗ ಹೇಗೆ ಮಾತಾಡ್ತಿದ್ರೋ, ಅದೇ ರೀತಿ ಅವನ ಕ್ಲಾಸ್‌ಮೇಟ್ಸ್ ಈ ರೊಬೋಟ್ ಬಳಿ ಮಾತಾಡಿದ್ರೆ, ಅದಕ್ಕೆ ರಿಪ್ಲೈ ಮಾತ್ರಾ ಜೋಶ್ವಾ ಕೊಡ್ತಾನೆ. ಶ್ವಾಸಕೋಶದ ತೊಂದರೆಗೆ ಒಳಪಟ್ಟಿರುವ ಜೋಶ್ವಾ, ಮನೆಯಿಂದಲೇ ಕ್ಲಾಸ್ ಅಟೆಂಡ್ ಮಾಡ್ತಿದ್ದಾನೆ.

ಯಾಕಂದ್ರೆ ಜೋಶ್ವಾ ಕುತ್ತಿಗೆಗೆ ಟ್ಯೂಬ್ ಹಾಕಲಾಗಿದ್ದು, ಆತ ಮನೆಯಲ್ಲೇ ಇರಬೇಕಾಗಿದೆ. ಬೆರ್ಲಿನ್ ಜಿಲ್ಲೆಯ ಕೌನ್ಸಿಲ್‌ನಲ್ಲಿ ಈ ರೀತಿ 4 ಅವತಾರ್ ರೊಬೋಟ್ ತಯಾರಿಸಲಾಗಿದ್ದು, ಮಕ್ಕಳು ತೀವ್ರ ಜ್ವರಕ್ಕೀಡಾದಾಗ, ಶಾಲೆಗೆ ಬರಲಾಗದಿದ್ದರೂ, ಮನೆಯಲ್ಲೇ ಕುಳಿತು ಪಾಠ ಕೇಳುವ ಹಾಗೆ ಇದ್ದರೆ, ಅಂಥವರಿಗೆ ರೊಬೋಟ್ ವ್ಯವಸ್ಥೆ ಮಾಡಲಾಗತ್ತೆ.ಆ ಮಕ್ಕಳು ಅವತಾರ್ ಮೂಲಕ, ಪಾಠ ಕೇಳಬಹುದು. ಜೊತೆಗೆ ತಮಗೆ ಆ ಪಾಠದ ಬಗ್ಗೆ ಇರುವ ಪ್ರಶ್ನೆಯನ್ನೂ ಕೇಳಬಹುದು.

ಇಷ್ಟೇ ಅಲ್ಲದೇ, ರಾಜ್ಯ ಮಟ್ಟದ ಮೀಟಿಂಗ್‌ಗಳಿದ್ದರೆ, ಮಂತ್ರಿಗಳಿಗೆ ಆ ಮೀಟಿಂಗ್ ಅಟೆಂಡ್ ಮಾಡಲಾಗದಿದ್ದಲ್ಲಿ, ಆ ಅವವತಾರ್ ರೊಬೋಟ್‌ ಮೂಲಕ, ಮೀಟಿಂಗ್ ಅಟೆಂಡ್ ಮಾಡಬಹುದು.

- Advertisement -

Latest Posts

Don't Miss