Saturday, July 27, 2024

Latest Posts

ಶಿವಸೇನ ಪುಂಡರಿಗೆ ಖಡಕ ಎಚ್ಚರಿಕೆ ನೀಡಿದ ಕರ್ನಾಟಕ ಪೊಲೀಸ್

- Advertisement -

ಬೆಳಗಾವಿ : ಗಡಿ ಭಾಗ ಬೆಳಗಾವಿಯಲ್ಲಿ ಒಂದಿಲ್ಲೊಂದು ಖ್ಯಾತೆ ತೆಗೆಯುತ್ತಲೆ ಬಂದಿರುವ ಶಿವಸೇನೆ ಪುಂಡರು ಗಡಿಯಲ್ಲಿ ಮತ್ತೆ ಪುಂಡಾಟೀಕೆ ಮುಂದುವರೆಸಿದ್ದಾರೆ.

ರಾಜ್ಯಕ್ಕೆ ಕೋವಿಡ್ ಮೂರನೆ ಅಲೆಯ ಭೀತಿ ಇರುವ ಹಿನ್ನೆಲೆಯಲ್ಲಿ ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಬರುವ ವಾಹನಗಳ ತಪಾಸಣೆಯನ್ನು ರಾಜ್ಯದ ಪೊಲೀಸರಿಂದ ಮಾಡಲಾಗುತ್ತಿದೆ.‌ಹಾಗಾಗಿ ವಾಹನ ತಪಾಸಣೆ ನಿಲ್ಲಿಸುವಂತೆ ಶಿವಸೇನೆಯ ಪುಂಡರು ಖ್ಯಾತೆ ತೆಗೆದಿದ್ದಾರೆ. ‌

ಮಹಾರಾಷ್ಟ್ರ ಕೆಲ ಹಳ್ಳಿಗಳಿಗೆ ಕರ್ನಾಟಕದ ಎನ್ ಎಚ್4 ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದು ಹೋಗಬೇಕು. ಅಂತವರನ್ನು ತಡೆದು RTPCR ವರದಿ ಕೇಳಬಾರದು ಎಂದು ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿಯಲ್ಲಿ ನಿಂತು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಿದ್ದಾರೆ.‌

ಆದರೆ ನಮ್ಮ ಕರ್ನಾಟಕ ಪೊಲೀಸರು ಶಿವಸೇನೆ ಪುಂಡರ ಪುಂಡಾಟೀಕೆಗೆ ಕ್ಯಾರೆ ಎಂದಿಲ್ಲ.‌ ಸರ್ಕಾರದ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯ ನಾವು ಅದನ್ನ ಪಾಲನೆ ಮಾಡ್ತಾ ಇದಿವಿ ಎಂದು ಖಡಕ ಉತ್ತರ ನೀಡಿದ್ದಾರೆ.

ಶಿವಸೇನೆಯ ಪುಂಡರು ಪುಂಡಾಟಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲೆ ಹಚ್ಚಿನ ಬಿಗಿ ಭದ್ರತೆ ಹಾಗೂ  ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ನಿನ್ನೆ ಕರ್ನಾಟಕಕ್ಕೆ ನುಗ್ಗಿ ಕರ್ನಾಟಕದ ಚೆಕ್ ಪೋಸ್ಟ್ ಧ್ವಂಸ ಮಾಡುವುದಾಗಿ ಗೊಡ್ಡು ಬೆದರಿಕೆ ಒಡ್ಡಿದ್ದ ಶಿವಸೇನೆಯ ವಿಜಯ ದೇವನೆ ಎಂಬ ಪುಂಡ ಇಂದು ಗಡಿಯಲ್ಲಿ ನಿಂತು ಸಮಾಧಾನ ದಿಂದಲೆ ಪೋಲೀಸರ ಬಳಿ ಮನವಿ ಮಾಡಿದ್ದಾನೆ.

ಹಾಗಾಗಿ ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಆರಂಭ ಆಗಿದ್ದು ಕರ್ನಾಟಕದಲ್ಲಿ ಮೂರನೇ ಅಲೆ ಬರದಂತೆ ಮುನ್ನೆಚ್ಚರಿಕೆ ಕ್ರಮದಿಂದ ಸರಕಾರ ಕಟ್ಟುನಿಟ್ಟಿನ ಆದೇಶ ಪಾಲಿಸಲು ಸೂಚಿಸಿದೆ ಅದರಂತೆ ಕರ್ನಾಟಕ ಪೋಲಿಸರು ಆದೇಶ ಪಾಲನೆ ಮುಖಾಂತರ ವಾಹನಗಳ ಆರ್ ಟಿಪಿಸಿಆರ್ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ ಇದರಿಂದ ಎಂಇಎಸ್ ಪುಂಡರು ನೆಪ ಕಟ್ಟಿಕೊಂಡು ಗಡಿಯಲ್ಲಿ ಖ್ಯಾತೆ ತೆಗೆಯುತ್ತಿದೆ. ಇದರಿಂದ ಕರ್ನಾಟಕ ಪೋಲಿಸರು ಎಂಇಎಸ್ ನವರಿಗೆ ತಕ್ಕ ಪಾಠ ಕಲಿಸಿದ್ದಾರೆ.

ನಾಗೇಶ್, ಕರ್ನಾಟಕ ಟಿವಿ, ಬೆಳಗಾವಿ

- Advertisement -

Latest Posts

Don't Miss