Wednesday, November 12, 2025

Belagavi

ಇಳುವರಿಗೂ ದರ ನಿಗದಿಗೂ ಏನ್ ಸಂಬಂಧ..?

ರಾಜ್ಯದ ಕಬ್ಬು ಬೆಳೆಗಾರರು ಬೀದಿಗೆ ಇಳಿದು ಕ್ರಾಂತಿಗೆ ಮುಂದಾಗಿದ್ದಾರೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,500 ದರ ನೀಡಬೇಕು ಎಂದು ಆಗ್ರಹಿಸಿ, ಹೋರಾಟ ಮಾಡ್ತಿದ್ದಾರೆ. ಬೆಳಗಾವಿಯಲ್ಲಿ 1 ವಾರದಿಂದ ಅಹೋರಾತ್ರಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಪ್ರತಿಭಟನೆನಿರತ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ರಾಜ್ಯದ ಕಬ್ಬು ಬೆಳೆಗಾರರು, ಸರ್ಕಾರ, ಸಕ್ಕರೆ ಕಾರ್ಖಾನೆಗಳ ನಡುವಿನ ಸಂಘರ್ಷಕ್ಕೆ ದೊಡ್ಡ...

ಬೆಳಗಾವಿಯಲ್ಲಿ ಕುದಿಯುತ್ತಿದೆ ಕಬ್ಬಿನ ಜ್ವಾಲೆ

ಕಬ್ಬಿಗೆ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ, 7ನೇ ದಿನಕ್ಕೆ ಕಾಲಿಟ್ಟಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ, ಅಹೋರಾತ್ರಿ ಹೋರಾಟ ಮುಂದುವರೆದಿದೆ. ರಾಜ್ಯ ಬಿಜೆಪಿ ನಾಯಕರೂ ಕೂಡ ಪ್ರತಿಭಟನೆಗೆ ಸಾಥ್‌ ಕೊಟ್ಟಿದ್ದು, ನಿನ್ನೆಯಿಂದ ಹೋರಾಟ ತೀವ್ರಗೊಂಡಿದೆ. ಅಹೋರಾತ್ರಿ ಹೋರಾಟದ ಸ್ಥಳದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊಕ್ಕಾಂ ಹೂಡಿದ್ದಾರೆ. ನಿನ್ನೆ...

ಬೆಂಗಳೂರು – ಮುಂಬೈ ಸೂಪರ್ ಪಾಸ್ಟ್ ರೈಲಿಗೆ ಅನುಮೋದನೆ, ಅಭಿನಂದನೆ ಸಲ್ಲಿಸಿದ ಸಚಿವ ಜೋಶಿ!

ಹುಬ್ಬಳ್ಳಿ - ಧಾರವಾಡ ಮೂಲಕ ಸಂಚರಿಸುವ ಬೆಂಗಳೂರು - ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಅನುಮೋದನೆ ಪತ್ರ ನೀಡಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಬಹುದಿನದ ಬೇಡಿಕೆಯಾಗಿದ್ದಈ ರೈಲಿಗಾಗಿ ಕೇಂದ್ರ ರೇಲ್ವೆ ಸಚಿವರಿಗೆ ವಿನಂತಿಸಿದ್ದು, ಈ ಸೂಪರ್ ಫಾಸ್ಟ್ ರೈಲು ಕರ್ನಾಟಕದ ಮಧ್ಯಭಾಗ ತುಮಕೂರು, ದಾವಣಗೆರೆ,...

ನೆಕ್ಸ್ಟ್ ಸಿಎಂ ‘ಸಾಹುಕಾರ’ ಡಿಕೆಶಿ ರಿಯಾಕ್ಷನ್ ಏನು!?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಸತೀಶ್ ಜಾರಕಿಹೊಳಿ ಅವರು ಪ್ರಗತಿಪರ ಹಾಗೂ ಸೈದ್ಧಾಂತಿಕ ನಾಯಕತ್ವ ನೀಡಬಲ್ಲ ವ್ಯಕ್ತಿ ಎಂದು ಯತೀಂದ್ರ ಹೇಳಿದ್ದಾರೆ. ಅವರ ಮಾತುಗಳು ಮುಂದಿನ ಮುಖ್ಯಮಂತ್ರಿ ಕುರಿತು ಊಹಾಪೋಹಗಳಿಗೆ ಕಾರಣವಾಗಿವೆ. ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಕಪ್ಪಲ್ಗುರಿ ಗ್ರಾಮದಲ್ಲಿ ನಡೆದ ಸಂತ...

ಸವದಿ BJP ಸೇರಲು ನಾ ಬಿಡಲ್ಲ – ರಮೇಶ್‌ ಜಾರಕಿಹೊಳಿ ಶಪಥ

ಬೆಳಗಾವಿ ರಾಜಕಾರಣದಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಲಕ್ಷ್ಮಣ್‌ ಸವದಿ ವಾಕ್ಸಮರ ಜೋರಾಗಿದೆ. ನಾವು ಯಾವುದೋ ಒಂದು ಕಾರಣಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಲಕ್ಷ್ಮಣ್ ಸವದಿಗೆ ಹೆಚ್ಚಿನ ಲಾಭವಾಯ್ತು. ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ, ಬಿಜೆಪಿಯಿಂದ ಪೀಡೆ ಹೋಗಿ ಕಾಂಗ್ರೆಸ್ ಪಾಲಾಗಿದೆ ಎಂದು, ರಮೇಶ್‌ ಜಾರಕಿಹೊಳಿ ಕುಟಿಕಿದ್ದಾರೆ. ಅಥಣಿ ಪಟ್ಟಣದಲ್ಲಿ ರಮೇಶ್‌ ಜಾರಕಿಹೊಳಿ...

ರಮೇಶ್ ಕತ್ತಿಯನ್ನ ಬಂಧಿಸದಿದ್ದರೆ ಅಕ್ಟೊಬರ್ 24ಕ್ಕೆ ಬೆಳಗಾವಿ ಬಂದ್!

ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾಜಿ ಸಂಸದ ರಮೇಶ್ ಕತ್ತಿಯ ವಿರುದ್ಧ ವಾಲ್ಮೀಕಿ ಸಮುದಾಯದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕತ್ತಿಯವರು ಸಮುದಾಯದ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಗೆ ಆಕ್ರೋಶಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿದರೆ ಮಾತ್ರವಲ್ಲದೇ, ಟೈರ್‌ಗೆ ಬೆಂಕಿ ಹಚ್ಚಿ, ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ತಮ್ಮ ವಿರೋಧ ವ್ಯಕ್ತಪಡಿಸಿದರು. ಕೇವಲ ಬೆಳಗಾವಿ...

ಸಿದ್ದರಾಮಯ್ಯ ಬರ್ತಾರೆ ಬಿರಿಯಾನಿ ತಿಂದು ಹೋಗ್ತಾರೆ – ಆರ್. ಅಶೋಕ್ ಕಿಡಿ!

ರಾಜ್ಯದ ಮಳೆ ಹಾನಿಗೆ ಕೇಂದ್ರ ಸರ್ಕಾರ ಈಗಾಗಲೇ NDRF ಅನುದಾನ ಬಿಡುಗಡೆ ಮಾಡಿದೆ. ಆದರೆ ಆ ಹಣವನ್ನು ರೈತರ ಪರಿಹಾರಕ್ಕೆ ಬಳಸದೆ, ರಾಜ್ಯ ಸರ್ಕಾರ ತನ್ನ ಉಚಿತ ಯೋಜನೆಗಳಿಗೆ ವರ್ಗಾಯಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಬೆಳಗಾವಿ ಜಿಲ್ಲೆ ನಾಗನೂರಿನಲ್ಲಿ ಬೆಳೆ ಹಾನಿಗೊಳಗಾದ ರೈತರೊಂದಿಗೆ ನಡೆದ ಸಭೆಯಲ್ಲಿ ಆರ್. ಅಶೋಕ್...

“ಹುಕ್ಕೇರಿಯಲ್ಲೇ ಉತ್ತರ ಕೊಡ್ತೀನಿ”

ಇಡೀ ರಾಜ್ಯದ ರಾಜಕಾರಣ ಒಂದಾದ್ರೆ, ಬೆಳಗಾವಿ ರಾಜಕೀಯದ ಕಿಚ್ಚೇ ಬೇರೆ. ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಜಾರಕಿಹೊಳಿ, ಕತ್ತಿ ಫ್ಯಾಮಿಲಿ ನಡುವಿನ ಸಮರ ಜೋರಾಗಿದೆ. ಎಲ್ಲೇ ಹೋದ್ರೂ ಪರಸ್ಪರ ವಾಗ್ದಾಳಿ, ಟೀಕೆ-ಟಿಪ್ಪಣಿಗಳನ್ನ ನಡೆಸ್ತಿದ್ದಾರೆ. ಸದ್ಯ, ರಮೇಶ್‌ ಕತ್ತಿ ವಿರುದ್ಧ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಗುಡುಗಿದ್ದಾರೆ. ರಾಜಕಾರಣ ಎಂದ್ರೆ ತಂತ್ರಗಾರಿಕೆ ನಡೆಯುವುದು ಸಹಜ....

ಸಚಿವ ಸತೀಶ್ ಜಾರಕಿಹೊಳಿ ಎದುರೇ ಕೊರಳಪಟ್ಟಿ ಹಿಡಿದ ಪತ್ನಿ

ಸಚಿವ ಸತೀಶ್ ಜಾರಕಿಹೊಳಿಯನ್ನು ಬೆಂಬಲಿಸಿದ್ದಕ್ಕೆ, ಗಂಡನ ಕೊರಳಪಟ್ಟಿ ಹಿಡಿದು ಪತ್ನಿಯೇ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಸೆಪ್ಟೆಂಬರ್‌ 8ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಭಾರೀ ಹೈಡ್ರಾಮವೇ ನಡೆದಿತ್ತು. ಸೋಮವಾರ ಮಧ್ಯಾಹ್ನ ಮದಿಹಳ್ಳಿ ಗ್ರಾಮದಲ್ಲಿ, ಅಕ್ಷರಶಃ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ದೊಡ್ಡವರೇ ತೊಡೆ ತಟ್ಟಿ ಅಖಾಡಕ್ಕೆ ನಿಂತಿದ್ದು, ಇಡೀ ಜಿಲ್ಲೆಯ ಜನರನ್ನೇ...

Belagavi News: ಕಚೇರಿಯಲ್ಲಿ ಗಣಪನನ್ನು ಪ್ರತಿಷ್ಠಾಪಿಸಿದ ಡಿಸಿ ಮೊಹಮ್ಮದ್ ರೋಷನ್

Belagavi News: ಬೆಳಗಾವಿ: ಬುಧವಾರ ನಾಡಿನಾದ್ಯಂತ ಗಣೇಶನನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಾವೇ ಗಣಪತಿ ಮೂರ್ತಿಯನ್ನು ಎತ್ತಿಕೊಂಡು ತಮ್ಮ ಕಚೇರಿಯಲ್ಲಿ‌ ಪ್ರತಿಷ್ಠಾಪಿಸುವ ಮೂಲಕ ಮತ್ತೊಮ್ಮೆ ಭಾವೈಕ್ಯತೆ ಮೆರೆದಿದ್ದಾರೆ. ನಗರದ ರಾಣಿ ಚೆನ್ನಮ್ಮ ವೃತ್ತದ ಬಳಿಯ ಗಣೇಶ ಮಂದಿರದಲ್ಲಿ ಅವರು ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ...
- Advertisement -spot_img

Latest News

ಟೀ ಕುಡಿಯೋಕೆ ಕಾಸಿಲ್ಲ! ಅಪ್ಪು ಸರ್ ಕರ್ದಿದ್ರು!: Mahantesh Hiremath Podcast

Sandalwood: ಉತ್ತರಕರ್ನಾಟಕದ ಹಳ್ಳಿಯಲ್ಲಿದ್ದ ಮಹಾಂತೇಷ್ ಈಗ ಸ್ಯಾಂಡಲ್‌ವುಡ್ ಪ್ರಸಿದ್ಧ ಹಾಸ್ಯನಟರಲ್ಲಿ ಓರ್ವ. ಹಾಗಾದ್ರೆ ಈ ಜರ್ನಿ ಹೇಗಿತ್ತು ಅಂತಾ ಅವರ ಬಾಯಲ್ಲೇ ಕೇಳಿ. https://www.youtube.com/watch?v=LrBVXnJ-WGM ಈ ಬಗ್ಗೆ ಮಹಾಂತೇಷ್...
- Advertisement -spot_img