Sunday, May 26, 2024

Latest Posts

ಇಡೀ ಕಾಶ್ಮೀರವೇ ಭಾರತದ್ದಾಗುವ ವಿಶ್ವಾಸವಿದೆ; ಮಿತ್ ದೇವ್

- Advertisement -

www.karnatakatv.net: ಕಾಶ್ಮೀರವೇ ಭಾರತದ್ದಾಗುವ ವಿಶ್ವಾಸ ಇದೆ ಎಂದು ವೆಸ್ಟರ್ನ್ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿoಗ್ ಇನ್ ಚೀಫ್ ಏರ್ ಮಾರ್ಷಲ್ ಅಮಿತ್ ದೇವ್ ಹೇಳಿದ್ದಾರೆ.

ಮುಂದೊoದು ದಿನ ಪೂರ್ಣ ಕಾಶ್ಮೀರವು ಭಾರತದ್ದಾಗುವ ವಿಶ್ವಾಸವಿದ್ದು, ಸದ್ಯಕ್ಕೆ ಪಾಕಿಸ್ತಾನ ಅಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಸದ್ಯಕ್ಕೆ ಯಾವುದೇ ಯೋಜನೆ ಇಲ್ಲ, ಆದರೆ ಕಾಶ್ಮೀರ ಪೂರ್ಣ ಪ್ರಮಾಣದಲ್ಲಿ ಭಾರತದ್ದಾಗುವುದು ಖಚಿತವೆಂದು ಮಾರ್ಚಲ್ ಮಿತ್ ದೇವ್ ಹೇಳಿದ್ದಾರೆ. ಭಾರತೀಯ ಸೇನೆಯ ` ಬುದ್ಗಾಮ್ ಭೂಸ್ಪರ್ಶ’ ದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಪಿಒಕೆಯಲ್ಲಿರುವ ಜನರನ್ನು ಪಾಕಿಸ್ತಾನ ನ್ಯಾಯಯುತವಾಘಿ ನಡೆಸಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ. ತಂತ್ರಜ್ಞಾನದ ಬದಲಾವಣೆ ಇಂದು ಜಗತ್ತಿನಲ್ಲಿ ತುಂಬಾ ವೇಗವಾಗಿದ್ದು, ನವು ಕೂಡಾ ಅದರೊಂದಿಗೆ ಹೆಜ್ಜೆಹಾಕಬೇಕು. ಆರ್ಥಿಕವಾಘಿ ಬೆಳಯಬೇಕಾದ ಯಾವುದೇ ರಾಷ್ಟ್ರವು ಬಲಿಷ್ಠ ಮಿಲಿಟರಿಯನ್ನು ಹೊಂದಿರಬೇಕಾದರೆ, ಮುಂದಿನ ವರ್ಷಗಳಲ್ಲಿ ನಾವು ರಾಷ್ಟ್ರಕ್ಕೆ ನಮ್ಮ ಬಾಧ್ಯತೆಯನ್ನು ಪೂರೈಸಬೇಕಿದೆ. ನಾವು ಯಾವಾಗಲೂ ಸವಾಲಿಗೆ ಸಿದ್ಧರಿದ್ದೇವೆ. ಐಎಎಫ್ ಅತ್ಯಂತ ಸಮರ್ಥ ಶಕ್ತಿಯಾಗಿ ಮಾರ್ಪಟ್ಟಿದೆ. ಮುಂಬರುವ ವರ್ಷಗಳಲ್ಲಿ ನಾವು ಗೌರವದಿಂದ ರಾಷ್ಟ್ರದ ಸೇವೆಯನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ಬುದ್ಗಾಮ್ ಭೂಸ್ಪರ್ಶದ 75 ನೇ ವರ್ಷವನ್ನು ಆಚರಿಸುವುದು ಐತಿಹಾಸಿಕ ಸಂದರ್ಭವಾಗಿದೆ. ಸೇರ್ಪಡೆಯ ಪತ್ರಕ್ಕೆ ಸಹಿ ಹಾಕಿದ ನಂತರ, ನಾವು ನಮ್ಮ ಸೈನ್ಯವನ್ನು ತ್ವರಿತವಾಗಿ ಇಲ್ಲಿ ಇಳಿಸಿದ್ದೇವೆ. ಶ್ರೀನಗರದ ವಾಯುನೆಲೆಯನ್ನು ಉಳಿಸಿದ್ದೇವೆ. ಇದಾದ ಬಳಿಕ ನಾವು ಮತ್ತಷ್ಟು ಆಕ್ರಮಣ ಆರಂಭಿಸುವ ಮೂಲಕ ಕಬಾಲಿಸ್ ಎಂದು ಬಂದ ಪಾಕಿಸ್ತಾನಿ ಮಿಲಿಟರಿಯನ್ನು ಮತ್ತಷ್ಟು ಹಿಂದಕ್ಕೆ ತಳ್ಳಿದ್ದೇವೆ ಎಂದು ಏರ್ ಮಾರ್ಷಲ್ ಅಮಿತ್ ದೇವ್ ಹೇಳಿದ್ದಾರೆ.

- Advertisement -

Latest Posts

Don't Miss