ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ನ 220ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದು ಅದ್ಧೂರಿಯಾಗಿ ಚಾಲನೆ ದೊರೆಯಿತು. ಈ ಬಾರಿ ಗಂಗರ ಸಾಮ್ರಾಜ್ಯದ ವೈಭವವನ್ನು ಕೇಂದ್ರವಾಗಿಟ್ಟುಕೊಂಡು ಪ್ರದರ್ಶನವನ್ನು ರೂಪಿಸಲಾಗಿದ್ದು, ಲಕ್ಷಾಂತರ ಹೂಗಳಿಂದ ನಿರ್ಮಿಸಲಾದ ಕಲಾಕೃತಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ಆಗಸ್ಟ್ 6ರಿಂದ 17ರವರೆಗೆ ನಡೆಯಲಿರುವ ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು 12 ದಿನಗಳ ಕಾಲ...
ಬಾಂಗ್ಲಾದೇಶ ವೇಗಿ ಮುಸ್ತಾಫಿಜರ್ ರಹ್ಮಾನ್‌ರನ್ನು ಐಪಿಎಲ್‌ನಿಂದ ಹೊರಗಿಟ್ಟ ಬಳಿಕ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡಲ್ಲ ಎಂದು ಪಟ್ಟು ಹಿಡಿದಿರುವ ಬಾಂಗ್ಲಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈಗ ಖಡಕ್ ಸೂಚನೆ ಜೊತೆಗೆ ಎಚ್ಚರಿಕೆಯನ್ನೂ ಕೊಟ್ಟಿದೆ.
ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲೇ ಆಡಬೇಕೆಂದು ಬಾಂಗ್ಲಾಗೆ ತಾಕೀತು ಮಾಡಿರುವ ಐಸಿಸಿ, ಇದರ ಬಗ್ಗೆ ಜನವರಿ 21ಕ್ಕೂ ಮುನ್ನ ತಿಳಿಸುವಂತೆ ಸೂಚಿಸಿದೆ....
ದಿತ್ವಾಹ್ ಚಂಡಮಾರುತದಿಂದ ತೀವ್ರವಾಗಿ ತತ್ತರಿಸಿರುವ ಶ್ರೀಲಂಕೆಗೆ ಭಾರತ ಸರ್ಕಾರವು 450 ದಶಲಕ್ಷ ಅಮೆರಿಕನ್ ಡಾಲರ್ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಶ್ರೀಲಂಕಾದ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯಗಳಿಗೆ ಸಂಪೂರ್ಣ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ರಾಯಭಾರಿಯಾಗಿ ಕೊಲಂಬೊಗೆ...
ಇತ್ತೀಚಿಗೆ ಶಾಲಾ ಮಕ್ಕಳಲ್ಲಿ ನಡೆಸಿದ ಸಂಶೋಧನೆಯೊಂದು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿದೆ. ಮಾದಕ ವಸ್ತು ಬಳಕೆಗೆ ಕಡಿವಾಣ ಹಾಕಲು ಸರ್ಕಾರಗಳ ನಿರಂತರ ಪ್ರಯತ್ನಗಳ ನಡುವೆಯೇ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 11 ವರ್ಷದೊಳಗಿನ ಮಕ್ಕಳು ಕೂಡಾ ಮಾದಕ ವಸ್ತು ವ್ಯಸನಿಗಳಾಗಿದ್ದಾರೆ.
ಇದು ಈ ಹಿಂದೆ ಅಂದುಕೊಂಡಿದ್ದಕ್ಕಿಂತ ಕಡಿಮೆ ವಯೋಮಾನದಲ್ಲೇ ಮಕ್ಕಳು ಮಾದಕ...
ಭಾರತದ ಬೆಳಕಿನ ಹಬ್ಬ ದೀಪಾವಳಿಗೆ ಜಾಗತಿಕ ಮನ್ನಣೆ ದೊರೆತಿದೆ. ದೀಪಾವಳಿಯನ್ನು ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಅಧಿಕೃತವಾಗಿ ಸೇರಿಸಲಾಗಿದೆ. ಡಿಸೆಂಬರ್ 10 ರಂದು ದೆಹಲಿಯ ಕೆಂಪು ಕೋಟೆಯಲ್ಲಿನಡೆದ ಯುನೆಸ್ಕೋದ ಅಂತರರಾಷ್ಟ್ರೀಯ ಸಮಿತಿಯ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು. ಭಾರತ ಮೊದಲ ಬಾರಿಗೆ ಈ ಸಮಿತಿಯ ಸಭೆಯನ್ನು ಆಯೋಜಿಸಿದ್ದು, ದೀಪಾವಳಿಯ ಸೇರ್ಪಡೆಯು ದೇಶದ...
ಭಾರತ-ಅಮೆರಿಕ ಮಧ್ಯೆ ಸದ್ಯದಲ್ಲೇ ವ್ಯಾಪಾರ ಒಪ್ಪಂದ ಕುದುರುವ ನಿರೀಕ್ಷೆ ಇದೆ. ಈ ಒಪ್ಪಂದ ಈ ಹಿಂದೆ ನಾವು ಮಾಡಲು ಉದ್ದೇಶಿಸಿದ್ದ ಒಪ್ಪಂದಕ್ಕಿಂತ ಭಿನ್ನವಾಗಿರಲಿದೆ. ಬಳಿಕ ಭಾರತದ ಮೇಲಿನ ಭಾರಿ ತೆರಿಗೆ ತೆಗೆದುಹಾಕಲಿದ್ದೇವೆ ಎಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದಾರೆ.
ಭಾರತಕ್ಕೆ ಅಮೆರಿಕದ ನೂತನ ರಾಯಭಾರಿ ಸೆರ್ಗಿಯೋ ಗೋರ್, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಟ್ರಂಪ್ ಮಾತನಾಡಿದ್ದಾರೆ....
ಇಂದಿಗೆ ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿದೆ. ಇದು ಅಸಂಖ್ಯಾತ ತಲೆಮಾರುಗಳ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರ ನಿರ್ಮಾಣಕಾರರಿಗೆ ಸ್ಪೂರ್ತಿ ನೀಡಿದ ಸಂಯೋಜನೆ ಎಂದೇ ಹೇಳಬಹುದು. ವಂದೇ ಮಾತರಂ ಅನ್ನು ಬಂಕಿಮ್ ಚಂದ್ರ ಚಟರ್ಜಿ ರಚಿಸಿದ್ದಾರೆ. ಇದು ಮೊದಲು ನವೆಂಬರ್ 7, 1875ರಂದು ಸಾಹಿತ್ಯ ನಿಯತಕಾಲಿಕೆ ಬಂಗದರ್ಶನ್‌ನಲ್ಲಿ ಪ್ರಕಟವಾಯಿತು. ನಂತರ ಬಂಕಿಮ್ ಚಂದ್ರ...
ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಾಧೀಶ, ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ. ನವೆಂಬರ್ 24, 2025ರಂದು 53ನೇ ಮುಖ್ಯ ನ್ಯಾಯಮೂರ್ತಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕಳೆದ ವಾರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಹಾಲಿ ಸಿಜೆಐಗೆ ಪತ್ರ ಬರೆದು, ಮುಂದಿನ...
ಬಿಹಾರ: ಬಿಹಾರ ವಿಧಾನಸಭೆ ಚುನಾವಣೆಯ ತಯಾರಿಗಳು ತಾರಕಕ್ಕೇರುತ್ತಿವೆ. ಈ ವೇಳೆ, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ವಿವಿಧ ಭಾಗಗಳಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರು ಸಮಷ್ಟಿಪುರ್ ಮತ್ತು ಬೇಗುಸರಾಯ್ ಜಿಲ್ಲೆಗಳಲ್ಲಿ ಆಯೋಜಿಸಲಾದ ಎರಡು ಪ್ರಮುಖ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಸಭೆಗೂ ಮುನ್ನ ಸಮಾಜವಾದಿ...
ಅಮೆಜಾನ್ ಕಂಪನಿಯು 2033ರ ವೇಳೆಗೆ ಸುಮಾರು 6 ಲಕ್ಷ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಿದೆಯಂತೆ. ಈ ಜಾಗಕ್ಕೆ ಉದ್ಯೋಗಿಗಳ ಬದಲಿಗೆ ರೋಬೋಟ್‌ಗಳನ್ನು ನಿಯೋಜಿಸಲು ಪ್ಲಾನ್ ಮಾಡಲಾಗಿದೆ ಎಂದು, ಹಲವು ವರದಿಗಳಿಂದ ತಿಳಿದುಬಂದಿದೆ. 2027ರ ವೇಳೆಗೆ ರೋಬೋಟ್‌ಗಳ ಬಳಕೆಯಿಂದ, ಬರೋಬ್ಬರಿ 1 ಲಕ್ಷದ 60 ಸಾವಿರ ಉದ್ಯೋಗ ಕಡಿತವಾಗುವ ನಿರೀಕ್ಷೆ ಇದೆ ಎಂದು ಅಮೆಜಾನ್ ಕಂಪನಿ...