ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ವಿಜಯ್ ನಟಿಸುತ್ತಿರುವ ಲಿಗರ್ ಚಿತ್ರವು ಆಗಸ್ಟ್ 25 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ತೆಲುಗಿನ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅಕ್ಡಿ ಪಡ್ಕಿ ಎಂಬ ಚಿತ್ರದ ಹಾಡಿನ ಹೊಸ ಪೋಸ್ಟರವೊಂದನ್ನು ಬಿಡುಗಡೆಗೊಳಿಸಿದ್ದಾರೆ. ಅನನ್ಯಾ ಅವರ ಟಾಲಿವುಡ್ ನ ಚೊಚ್ಚಲ ಚಿತ್ರ ಇದಾಗಿದೆ.
ಈ ಕುರಿತ ಫೋಟೋವೊಂದನ್ನು ವಿಜಯ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ವಿಜಯ್ ಹಾಗೂ ಅನನ್ಯ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ವಿಜಯ್ ಅನನ್ಯ ಅವರ ಸೊಂಟಕ್ಕೆ ಕೈ ಹಾಕಿ ಶಿಳ್ಳೆ ಹೊಡೆಯುವುದು ಹೇಗೆ ಎಂಬುದನ್ನು ಕಲಿಸಿಕೊಡುತ್ತಿದ್ದಾರೆ.
ಅರ್ಜುನ್ ರೆಡ್ಡಿಯನ್ನು ಹಾಡಿಹೊಗಳಿದ ಅನನ್ಯ :
ವಿಜಯ್ ದೇವರಕೊಂಡ ತುಂಬಾ ಒಳ್ಳೆಯವರು.ವಿಜಯ್ ದೇವರಕೊಂಡ ತುಂಬಾ ಕರುಣಾಮಯಿ. ನಾವು ಒಟ್ಟಿಗೆ ಅಮೇರಿಕಾದಲ್ಲಿ ಶೂಟಿಂಗ್ ಮಾಡುವಾಗ ತುಂಬಾ ಖುಷಿಪಟ್ಟೆವು. ನಾವು ಇನ್ನೇನು ಚಿತ್ರದ ಚಿತ್ರಿಕರಣವನ್ನು ಪೂರ್ಣಗೊಳಿಸಲಿದ್ದೇವೆ. ಚಿತ್ರ ಆಗಸ್ಟ್‌ನಲ್ಲಿ ತೆರೆಗೆ ಬರಲಿದ್ದು, ಇದು ಸಂಪೂರ್ಣ ಮಸಾಲಾ ಚಿತ್ರ. ಇದನ್ನು ನೋಡುವುದರಿಂದ ಜನರು ನಿಜವಾಗಿಯೂ ಸಂತೋಷಪಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.