Thursday, May 16, 2024

Latest Posts

ವಿದೇಶಿ ಲೀಗ್‍ಗಳಲ್ಲಿ ಆಡಲು ಆಟಗಾರರಿಗೆ ಬಿಸಿಸಿಐ ಅನುಮತಿ ?

- Advertisement -

https://www.youtube.com/results?search_query=karnataka+tv

ಹೊಸದಿಲ್ಲಿ: ಭವಿಷ್ಯದಲ್ಲಿ  ಭಾರತೀಯ ಆಟಗಾರರು  ವಿದೇಶಿ ಲೀಗ್‍ಗಳಲ್ಲಿ ಆಡಲು ಬಿಸಿಸಿಐ ಅನುಮತಿ ಕೊಡುವ ಸಾಧ್ಯತೆ ಹೆಚ್ಚಿದೆ.

ವರಿದಿಗಳ ಪ್ರಕಾರ  ಹಲವಾರು ವರ್ಷಗಳ ನಿರ್ಬಂಧದ ನಂತರ ದೇಶದ ಅಗ್ರ ಕ್ರಿಕೆಟ್ ಸಂಸ್ಥೆ ತನ್ನ ಆಟಗಾರರನ್ನು  ಬೇರೆ ಲೀಗ್‍ಗಳಲ್ಲಿ ಆಡಲು ಅನುಮತಿ ನೀಡಲಿದೆ ಎಂದು ಹೇಳಲಾಗುತ್ತಿದೆ.

ಐಪಿಎಲ್‍ನಿಂದಾಗಿ  ಟೀಮ್ ಇಂಡಿಯಾ ಆಟಗಾರರಿಗೆ  ವಿದೇಶಿ ಲೀಗ್‍ಗಳಲ್ಲಿ ಭಾರೀ ಬೇಡಿಕೆ ಇದೆ.

ಇತ್ತಿಚೆಗೆ  ಕ್ರಿಕೆಟ್ ಸೌತ್ ಆಫ್ರಿಕಾ  ಲೀಗ್‍ಗಳಲ್ಲಿ ಐಪಿಎಲ್‍ನ 6 ಫ್ರಾಂಚೈಸಿಗಳು  ತಂಡಗಳನ್ನು ಖರೀದಿಸಿವೆ.

ಒತ್ತಡದಲ್ಲಿ ಸಿಲುಕಿರುವ ಬಿಸಿಸಿಐ ತನ್ನ ಆಟಗಾರರನ್ನು ವಿದೇಶಿ ಲೀಗ್‍ಗಳಲ್ಲಿ ಆಡಲು ಅನುಮತಿ ನೀಡದೇ ಬೇರೆ ದಾರಿ ಇಲ್ಲ.

ಸದ್ಯ ಭಾರತೀಯ ಮಹಿಳಾ ಆಟಗಾರ್ತಿಯರು ವಿದೇಶಿ ಲೀಗ್‍ಗಳಲ್ಲಿ ಆಡುತ್ತಿದ್ದಾರೆ.  ನಿವೃತ್ತಿ ಹೊಂದಿದ ಆಟಗಾರರು ಕೂಡ ವಿದೇಶಿ ಟೂರ್ನಿಗಳನ್ನು ಆಡುತ್ತಿದ್ದಾರೆ.

ಒಂದು ವೇಳೆ ಬಿಸಿಸಿಐ ಅನುಮತಿ ನೀಡಿದರೂ ಕೇಂದ್ರ ಒಪ್ಪಂದ ಮಾಡಿಕೊಂಡಿರುವ ಆಟಗಾರರು ಆಡುವುದು ಅನುಮಾನದಿಂದ ಕೂಡಿದೆ.

 

- Advertisement -

Latest Posts

Don't Miss