Monday, December 11, 2023

Latest Posts

ಇಂದು ವಿರಾಟ್ ಪಡೆಗೆ ಬಾಂಗ್ಲಾ ಟೈಗರ್ಸ್ ಸವಾಲು..!

- Advertisement -

ಕ್ರೀಡೆ : ಪ್ರತಿಷ್ಠಿತ ವಿಶ್ವಕಪ್ ನ 40ನೇ ಪಂದ್ಯದಲ್ಲಿ ಇಂದು, ವಿರಾಟ್ ಪಡೆ ಬಾಂಗ್ಲಾ ವಿರುದ್ಧ ಸೆಣಸಲಿದೆ. ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದ ವಿರಾಟ್ ಪಡೆ, ಬ್ಯಾಕ್ ಟು ಬ್ಯಾಕ್ 5 ಗೆಲುವು ಸಾಧಿಸಿತ್ತು. ಈ ನಡುವೆ ಇಂಗ್ಲೆಂಡ್ ಎದುರಿನ ಕಳೆದ ಪಂದ್ಯದಲ್ಲಿ ಮುಗ್ಗರಿಸಿದ ಕೊಹ್ಲಿ ಬಳಗ, ಇಂದು ಎಚ್ಚರಿಕೆಯ ಆಟ ಪ್ರದರ್ಶಿಸಬೇಕಿದೆ. ಇಂದು ಕೂಡ ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬಸ್ಟಾನ್ ಕ್ರೀಡಾಂಗಣದಲ್ಲಿ, ಬಾಂಗ್ಲಾ ಹುಲಿಗಳ ಎದುರು ಹೋರಾಟ ನಡೆಸಲಿದೆ. ಇಂಗ್ಲೆಂಡ್ ಎದುರು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಎಡವಿರುವ ವಿರಾಟ್ ಪಡೆ, ಇಂದು ಯಾವ ರೀತಿಯ ತಂತ್ರಗಾರಿಕೆ ರೂಪಿಸಲಿದೆ ಅನ್ನೋದು, ತಂಡದ ಯಶಸ್ಸನ್ನ ನಿರ್ಧರಿಸಲಿದೆ.

ಇನ್ನೂ ಬಾಂಗ್ಲಾದೇಶಕ್ಕೆ ಹೋಲಿಸಿದ್ರೆ ಟೀಂ ಇಂಡಿಯಾ ಗೆಲ್ಲುವ ಫೇವರೇಟ್. ಆದ್ರೆ ಇತ್ತೀಚಿನ ದಿನಗಳಲ್ಲಿ ಬಲಾಢ್ಯರೆನ್ನಿಸಿಕೊಂಡಿರುವ ಬಾಂಗ್ಲಾದೇಶವನ್ನ, ಲಘುವಾಗಿ ಪರಿಗಣಿಸುವಂತಿಲ್ಲ. ಈಗಾಗಲೇ ಸೌತ್ ಆಫ್ರಿಕಾ ಹಾಗೂ ವೆಸ್ಟ್ಇಂಡೀಸ್ಗಳಂತ ಬಲಿಷ್ಠ ತಂಡಗಳನ್ನ ಬಗ್ಗು ಬಡಿದಿದ್ದು, ಭಾರತ ತಂಡವನ್ನೂ ಸೋಲಿಸುತ್ತೇವೆ ಅನ್ನೋ ಉತ್ಸಾಹದಲ್ಲಿದೆ. ಸದ್ಯ ಭಾರತದ ಪಾಲಿಗೆ ಉತ್ತಮ ಆರಂಭ ಸಿಗದಿರುವುದು ದೊಡ್ಡ ತಲೆನೋವಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ರೋಹಿತ್ ಮತ್ತು ರಾಹುಲ್ ಜೋಡಿ, ಒಂದೇ ಒಂದು ಅರ್ಧ ಶತಕದ ಜೊತೆಯಾಟ ವನ್ನು ನೀಡಿಲ್ಲ. ಇದು ಹೀಗೆ ಮುಂದುವರೆದಲ್ಲಿ, ಫಲಿತಾಂಶದ ಮೇಲೆ ಪ್ರಭಾವ ಬೀರುವುದು ಗ್ಯಾರಂಟಿ. ಕಳೆದ ಪಂದ್ಯದಲ್ಲಿ ತಂಡದ ಮಿಡಲ್ ಆರ್ಡರ್ ಉತ್ತಮ ಪ್ರದರ್ಶನ ನೀಡಿತ್ತಾದ್ರು, ಯಾವುದೇ ದೊಡ್ಡ ಇನಿಂಗ್ಸ್ ಮೂಡಿ ಬರಲಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಕೂಡ ಮಿಂಚಬೇಕಿದೆ. ಉಳಿದಂತೆ ಇಂಗ್ಲೆಂಡ್ ಎದುರು ಬೌಲಿಂಗ್ ವಿಭಾಗ ದುಬಾರಿ ಆಗಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು.

ಇನ್ನೂ ಬಾಂಗ್ಲಾ ಬಗ್ಗೆ ನೋಡುವುದಾದರೆ, ಅಚ್ಚರಿಯ ಫಲಿತಾಂಶ ನೀಡುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ.
ಆಲ್ ರೌಂಡ್ ಶಕೀಬ್ ಅಲ್ ಹಸನ್ ಉತ್ತಮ ಫಾರ್ಮ್ನಲ್ಲಿದ್ದು, ಭಾರತಕ್ಕೆ ಕಂಟಕವಾಗುವ ಮುನ್ಸೂಚನೆ ನೀಡಿದ್ದಾರೆ. ಅವರಿಗೆ ತಮೀಮ್ ಇಕ್ಬಾಲ್, ಹಾಗೂ ಲಿಟನ್ ಡಾಸ್ ಬ್ಯಾಟಿಂಗ್ ಸಾಥ್ ನೀಡಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಮುಸ್ತಫಿಸುರ್ ರೆಹಮಾನ್ ಹಾಗೂ ಮೊಹಮದ್ ಸೈಫುದ್ದಿನ್ ಕರಾರುವಕ್ಕಾದ ಬೌಲಿಂಗ್ ದಾಳಿ ನಡೆಸುತ್ತಿದ್ದು, ಟೀಂ ಇಂಡಿಯಾಕ್ಕೆ, ಮೊಶ್ರಫೆ ಮೊರ್ತಜಾ ಪಡೆ, ಕಠಿಣ ಸವಾಲೊಡ್ಡುವ ಸಾಮರ್ಥ್ಯ ಹೊಂದಿದೆ. ಆದ್ರೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲೂ ಬಲಿಷ್ಠ ಲೈನ್ಅಪ್ ಹೊಂದಿರುವ ಟೀಂ ಇಂಡಿಯಾ ಇಂದು ಮ್ಯಾಚ್ ಗೆಲ್ಲುವ ಫೇವರೇಟ್ ಎನ್ನಿಸಿಕೊಂಡಿದೆ.

ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss