Sunday, March 3, 2024

Latest Posts

ಒಡಿಶಾಗೆ ₹1 ಕೋಟಿ ನೆರವು ನೀಡಿದ ನಟ ಅಕ್ಷಯ್ ಕುಮಾರ್

- Advertisement -

ಭುವನೇಶ್ವರ: ಯಮಸ್ವರೂಪಿ ಫೋನಿ ಚಂದಮಾರುತಕ್ಕೆ ಸಿಲುಕಿ ನಲುಕಿಹೋಗಿರೋ ಒಡಿಶಾ ರಾಜ್ಯಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ₹1 ಕೋಟಿ ಆರ್ಥಿಕ ನೆರವು ನೀಡಿದ್ದಾರೆ. ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ರ ಪರಿಹಾರ ನಿಧಿಗೆ ಹಣವನ್ನು ವರ್ಗಾಯಿಸಿದ್ದಾರೆ. ನಟ ಅಕ್ಷಯ್​ ಕುಮಾರ್​ ಈ ರೀತಿ ನೆರವಾಗ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಪ್ರವಾಹಕ್ಕೆ ತುತ್ತಾಗಿದ್ದ ಕೇರಳ ಹಾಗೂ ಚೆನ್ನೈ ಸಂತ್ರಸ್ತರಿಗೂ ಆರ್ಥಿಕ ನೆರವು ನೀಡಿದ್ದರು. ಸದ್ಯ, ಅಪಾರ ಹಾನಿಗೊಳಗಾಗಿರೋ ಒಡಿಶಾಕ್ಕೆ  ನಾನಾ ರಾಜ್ಯಗಳು ಆರ್ಥಿಕ ನೆರವು ನೀಡುತ್ತಿವೆ. ಅತ್ತ ಕೇಂದ್ರ ಸರ್ಕಾರ ಕೂಡ ತುರ್ತು ನೆರವಿಗೆ ಧಾವಿಸಿದ್ದು, ಸಾವಿರ ಕೋಟಿ ಪರಿಹಾರ ನೀಡಿದೆ.

- Advertisement -

Latest Posts

Don't Miss