ಯಾವ್ದಾದ್ರೂ ಬ್ಯಾಂಕ್ ಗೆ , ಅಥವಾ ಮತ್ತ್ಯಾವುದೋ ಅಫೀಸ್ ಗೆ ಹೋಗಿದ್ದಾಗ ಅಲ್ಲಿನ ಸಿಬ್ಬಂದಿ ನಿಮ್ ಜೊತೆ ಕನ್ನಡ ಬಿಟ್ಟು ಬೇರೆಲ್ಲಾ ಭಾಷೆ ಮಾತನಾಡೋದನ್ನ ನೋಡೆ ಇರ್ತೀರಾ… ಕೆಲವೊಮ್ಮೆ ನಿಮ್ಗೆ ಅವ್ರು ಮಾತಾಡೋ ಭಾಷೆಗೆ ರಿಪ್ಲೈ ಕೊಡ್ಲೇಬೇಕಾದ ಪರಿಸ್ಥಿ, ಆದ್ರೆ ಇನ್ನು ತುಂಬಾ ಜನಕ್ಕೆ ಕನ್ನಡ ಬಿಟ್ಟು ಬೇರೆ ಭಾಷೆ ಬರೋದೇ ಇಲ್ಲ. ಪಾಪ.. ಅಂಥಾವ್ರ ಪಜೀತಿ ಯಾರಿಗೂ ಬೇಡ. ಅವ್ರು ಹೇಳಿದ್ರೆ ಇವ್ರಿಗೆ ಅರ್ಥ ಆಗಲ್ಲ, ಇವ್ರು ಹೇಳಿದ್ರೆ ಅವ್ರಿಗೆ ಅರ್ಥವಾಗೋಲ್ಲ. ಹೀಗಿರೋವಾಗ, ನಮ್ಮ ಕನ್ಮಡ್ದೋರು ಇಲ್ಯಾಕ್ಕಪ್ಪಾ ಇಲ್ಲ ಅನ್ನೋ ಒಂದ್ ಪ್ರಶ್ನೆ ನಮ್ ತಲೇಲಿ ಬರುತ್ತೆ.
ಇದೇ ವಿಷಯವಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಕರ್ನಾಟಕ ಜಾಬ್ಸ್ ಫಾರ್ ಕನ್ನಡಿಗಾಸ್ #KarnatakaJobsForKannadigas ಅನ್ನೋ ಅಭಿಯಾನ ಸ್ಟಾರ್ಟ್ ಆಗಿದೆ. ಇದಕ್ಕೆ ಕನ್ನಡಿಗರಿಂದ ಭಾರಿ ಬೆಂಬಲ ಸಿಕ್ತಿದೆ. ಇದು ಸಕ್ಸೆಸ್ ಪುಲ್ ಆಗೋ ಎಲ್ಲಾ ಲಕ್ಷಣ ಕಾಣ್ತಿದೆ . ಕರ್ನಾಟಕದಲ್ಲಿ ಕನ್ನಡಿಗರಿಗೇ ಕೆಲ್ಸ ಬೇಕು ಅನ್ನೋ ಈ ಅಭಿಯಾನಕ್ಕೆ ನಮ್ಮ ಕನ್ನಡಿಗ, ಸಿಎಂ ಕುಮಾರಸ್ವಾಮಿ ಕೂಡ ಸಪೋರ್ಟ್ ಮಾಡಿದ್ದಾರೆ. ಈ ಅಭಿಯಾನವನ್ನ ಹೇಗೆ ಕಾರ್ಯರೂಪಕ್ಕೆ ತರಬೇಕು ಅನ್ನೋ ಬಗ್ಗೆ ಸಲಹೆ ಪಡೀತೀನಿ ಅಂತ ಸಿಎಂ ಎಚ್ಜಿಕೆ ಟ್ವೀಟ್ ಮಾಡಿದ್ದಾರೆ. ನಾಡ ದೊರೇನೆ ಈ ಅಭಿಯಾನಕ್ಕೆ ಸಾಥ್ ನೀಡಿದ್ದು ಆನೆ ಬಲ ಸಿಕ್ಕಂತಾಗಿದೆ. ಕನ್ನಡಿಗರಿಗೆ ಇದಕ್ಕಿಂತ ಸಂತೋಷ ಬೇರೇನಿದೆ ಹೇಳಿ. ಒಟ್ನಲ್ಲಿ ಈ ಅಭಿಯಾನ ಹೀಗೆ ಮುಂದುವರೆದು ಯಶಸ್ಸು ಕಾಣ್ಲಿ, ಹಾಗೇ ನಮ್ಮ ವಿದ್ಯಾವಂತ ಕನ್ನಡಿಗರಿಗೆ ಇಲ್ಲೇ ಕೆಲ್ಸ ಸಿಗಲಿ ಅನ್ನೋದೇ ನಮ್ಮ ಆಶಯ ಕೂಡ.