Tuesday, November 18, 2025

Latest Posts

‘ಕಿಚ್ಚ’ ಸ್ಟೈಲ್‌ನಲ್ಲಿ ಗಿಲ್ಲಿ ನಟ : ನಕ್ಕು-ನಕ್ಕು ಸುಸ್ತಾದ ಕಿಚ್ಚ

- Advertisement -

ಕಿಚ್ಚ ಸುದೀಪ್(Kiccha Sudeep) ಅವ್ರನ್ನ ಇಮಿಟೇಟ್ ಮಾಡೋದು ಅಷ್ಟು ಸುಲಭದ ಮಾತಲ್ಲ, ಅವ್ರ ಬಾಡಿ ಲಾಂಗ್ವೆಜ್ ಕಾಪಿ ಮಾಡಿದ್ರೂ ಅವರ ಬೇಸ್ ವಾಯ್ಸ್ ವಿಥ್ ಸೇಮ್ ಔರ ಕಾಪಿ ಮಾಡೋದು ಇದುವರೆಗೂ ಯಾರ್ ಕೈಯ್ಯಲ್ಲೂ ಸಾಧ್ಯವಾಗಿಲ್ಲ, ಇಂತಾ ಒಂದು ಪ್ರಯತ್ನವನ್ನ ಬಿಗ್ ಬಾಸ್ ಮನೆಯಲ್ಲಿ , ಅದು ಕಿಚ್ಚನ ಎದುರೇ ಮಾಡೋದು ಅಂದ್ರೆ ಅದು ಡಬಲ್ ಕಷ್ಟದ ಕೆಲಸ, ಆದ್ರೂ ಆ ಟಾಸ್ಕ್ ಅನ್ನ ಕಾಕ್ರೋಚ್ ಹಾಗು ಗಿಲ್ಲಿಗೆ ಕಿಚ್ಚ ಕೊಟ್ರು, ಅದ್ರಲ್ಲಿ ಸಕ್ಕತ್ ಕಿಕ್ ಕೊಟ್ಟಿದ್ದು ಗಿಲ್ಲಿಯ ಇಮಿಟೇಷನ್, ಕಿಚ್ಚನೇ ಗಿಲ್ಲಿ ಎದುರು ಅಣ್ಣ ,ಅಣ್ಣ ಸುದೀಪಣ್ಣ , ಅಂತ ಗಿಲ್ಲಿಯಾಗಿ ನಟಿಸಿದ್ರು, ಈ ದೃಶ್ಯ ನೋಡೋಕೆ ತುಂಬಾ ಮಜವಾಗಿತ್ತು ….

ಕಿಚ್ಚ ಹೇಗೆ ಪ್ರತಿಯೊಬ್ಬ ಸ್ಪರ್ದಿಗೂ ಕ್ಲಾಸ್ ತಗೋತಾರೋ ಅದನ್ನ ಇಮಿಟೇಟ್ ಮಾಡಿದ್ರು ಗಿಲ್ಲಿ, ಅದ್ರಲ್ಲೂ ರಾಶಿಕಾ ಜೊತೆ ಕಿಚ್ಚನಾಗಿ ಗಿಲ್ಲಿ ಮಾತಾಡೋವಾಗ ಕಿಚ್ಚನಿಗೆ ನಗು ತಡಿಯೋಕೆ ಆಗ್ಲಿಲ್ಲ, ಇನ್ನು ಇಲ್ಲೂ ಕೂಡ ಗಿಲ್ಲಿ ತನ್ನ ‘ಕಾವೂ’ ಕತೆಯನ್ನ ಬಿಡ್ಲೇ ಇಲ್ಲ, ಕಿಚ್ಚ ಸುದೀಪ್ ಅವ್ರ ವಾಲೀ ಸಿನಿಮಾದ ‘ ಓ ಸೋನಾ ‘ ಹಾಡನ್ನ ‘ಓ ಕಾವು ‘ ಅಂತ ಮಾಡ್ಕೊಂಡು ತಮ್ಮದೇ ಲೈನ್ಸ್ಗಳನ್ನ ಕಾವ್ಯಗೆ ಹಾಡಿ ,ಎಲ್ಲರನ್ನ ನಕ್ಕು ನಗಿಸಿ, ಕೊನೆಗೆ ಕಿಚ್ಚ “ಇದು ನಾನ್ ಹೇಳಿಲ್ವೆ?” ಅಂತ ಕೇಳಿದ್ದಕ್ಕೆ, ಕಿಚ್ಚನ ಸಿಗ್ನೇಚರ್ ಡೈಲಾಗ್ ” ಹೇಳ್ಬೇಕು ಅನ್ನುಸ್ತು , ಹೇಳ್ದೆ ” ಅಂತ ಹೇಳ್ಬಿಟ್ರು ,ಬಿಗ್ ಬಾಸ್ ನೋಡುತ್ತಿದ್ದ ವೀಕ್ಷಕರಿಗೆ ಇದೊಂದು ಸಕ್ಕತ್ ಸೀನ್ ಆಗಿ ನೆನಪಲ್ಲಿ ಇರೋದಂತು ಪಕ್ಕ

ಇನ್ನು ಕೊನೆಯಲ್ಲಿ “ಸುದೀಪಣ್ಣ ಗಿಲ್ಲಿಗೆ ಏನಾದ್ರು ಹೇಳಿ” ಅಂತ ಕಿಚ್ಚ ಕೇಳಿದ್ದಕ್ಕೆ, “ಅಣ್ಣ ಬ್ಯಾಡ ಅಣ್ಣ ಭಯ ಆಗುತ್ತೆ” ಅಂತ ಸೈಲೆಂಟ್ ಆಗ್ಬಿಟ್ರು ಗಿಲ್ಲಿ, ಒಟ್ನಲ್ಲಿ ಕಿಚ್ಚನ ಎದುರೇ ಕಿಚ್ಚನ ಸ್ಟೈಲ್ ಅನ್ನ ಅನುಕರಣೆ ಮಾಡೋ ಪ್ರಯತ್ನವನ್ನ ಗಿಲ್ಲಿ ಅಚ್ಚುಕಟ್ಟಾಗಿ ಮಾಡಿ,ನಾಡಿನ ಜನತೆ,ಬಿಗ್ ಬಾಸ್ ಮನೆ ಮಂದಿ ಜೊತೆಗೆ ಸ್ವತಃ ಕಿಚ್ಚನಿಗೂ ಸಕ್ಕತ್ ಎಂಟರ್ಟೈನ್ಮೆಂಟ್ ಕೊಟ್ರು……

ವರದಿ : ಗಾಯತ್ರಿ ಗುಬ್ಬಿ

- Advertisement -

Latest Posts

Don't Miss