Sunday, September 15, 2024

Latest Posts

ಕೊಹ್ಲಿಯನ್ನ ಮುದ್ದಾಡಿದ ಉರ್ವಶಿ..!

- Advertisement -

ಕ್ರೀಡೆ : ಮದುವೆ ಆಗಿ ಸುಮಾರು ಒಂದೂವರೆ ವರ್ಷ ಕಳೆದರೂ ಕೊಹ್ಲಿಗೆ ಹುಡುಗಿಯರ ಕಾಟ ತಪ್ಪಲಿಲ್ಲ. ಅದೆಷ್ಟೋ ಚೆಲುವೆಯರು ಇಂದಿಗೂ ಕೊಹ್ಲಿ ಕನಸಲ್ಲೇ ದಿನಕಳೆಯುತ್ತಿದ್ದಾರೆ. ಈ ಸಾಲಿನಲ್ಲಿ ಬಾಲಿವುಡ್ ಬೆಡಗಿಯರೇನು ಹಿಂದೆ ಬಿದ್ದಿಲ್ಲ. ಇತ್ತೀಚಿಗಷ್ಟೆ ನಟಿ ಉರ್ವಶಿ ರೌತೆಲ್ ಕೊಹ್ಲಿ ಯನ್ನ ಬಿಗಿದಪ್ಪಿ ಮುದ್ದಾಡಿದ್ದಾರೆ.

ಅರೇ ಇದನ್ನೆಲ್ಲಾ ನೋಡಿ ಅನುಷ್ಕಾ ಸುಮ್ಮನಿದ್ದಾರ..!? ಹೌದು ಅನುಷ್ಕಾ ಸುಮ್ಮನಿದ್ದಾರೆ. ತಮ್ಮ ಪಾಡಿಗೆ ತಾವು ಸಿನಿಮಾ ಶೂಟಿಂಗ್ ಒಂದರಲ್ಲಿ ಬ್ಯುಸಿ ಯಾಗಿದ್ದಾರೆ. ಯಾಕಂದ್ರೆ ಉರ್ವಶಿ ಮುದ್ದಾಡಿದ್ದು ನಿಜವಾದ ಕೊಹ್ಲಿ ಯನ್ನಲ್ಲ ಬದಲಾಗಿ ಕೊಹ್ಲಿ ಯ ಮೇಣದ ಆಕೃತಿಯನ್ನ. ಹೌದು.. ಮೇಣದ ಕಲಾಕೃತಿಗಳಿಗೆ ಫೇಮಸ್ ಆಗಿರುವ ಲಂಡನ್ ಮೆಡಮ್ ಟುಸ್ಸಾಡ್ಸ್ ನಲ್ಲಿ ವಿರಾಟ್ ಕೊಹ್ಲಿಯ ಪ್ರತಿಕೃತಿಯನ್ನ ನಿರ್ಮಿಸಲಾಗಿದೆ. ಸದ್ಯ ಈ ಮೇಣದ ಪ್ರತಿಮೆಯನ್ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಿದ್ದು, ವಿಶ್ವಕಪ್ ಮುಗಿಯುವವರೆಗೂ, ಅಂದರೆ ಜುಲೈ 14ರವರೆಗೂ ಲಾರ್ಡ್ಸ್ ನಲ್ಲಿರಲಿದೆ. ಸದ್ಯ ಇಲ್ಲಿಗೆ ಭೇಟಿ ನೀಡಿದ್ದ ಬಾಲಿವುಡ್ ನಟಿ, ಕೊಹ್ಲಿ ಪ್ರತಿಮೆಯನ್ನ ತಬ್ಬಿ ಮುದ್ದಾಡಿದ್ದಾರೆ. ಸದ್ಯ ಆ ಫೋಟೋ ಒಂದನ್ನ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ…

ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಎದುರಾಳಿಗಳ ಮೇಲೆ ಸವಾರಿ ಮಾಡಿರುವ ಕೊಹ್ಲಿ ಬಳಗ, ವಿಶ್ವ ಕಪ್ ಎತ್ತಿ ಹಿಡಿಯುವ ಸೂಚನೆ ನೀಡಿದೆ. ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ್ಫಾರ್ಮೆನ್ಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೇ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಫುಲ್ ಖುಷಿಯಾಗಿದ್ದಾರೆ. ಟೂರ್ನಿಯಲ್ಲಿ ಉತ್ತಮ ಓಪನಿಂಗ್ ಪಡೆದುಕೊಂಡಿರುವ ತಂಡ, ಒಟ್ಟು ಏಳು ಪಾಯಿಂಟ್ ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಒಟ್ಟು ನಾಲ್ಕು ಪಂದ್ಯಗಳಲ್ಲಿ ಒಂದು ಪಂದ್ಯ ಮಳೆ ಕಾರಣ ರದ್ದಾದ್ರೆ, ಉಳಿದ ಮೂರು ಪಂದ್ಯಗಳಲ್ಲಿ ಬ್ಲೂ ಬಾಯ್ಸ್ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

ಮಕ್ಕಳಾಡಿಸುತ್ತ ಕೂಡ ರಿಷಬ್ ಪಂತ್

- Advertisement -

Latest Posts

Don't Miss