Saturday, March 15, 2025

Latest Posts

ಕೌನ್​ ಬನೇಗಾ ಕರೋಡ್ಪತಿ ಶೋ: ಬಚ್ಚನ್ ಸಂಭಾವನೆ ಎಷ್ಟು ಗೊತ್ತಾ?

- Advertisement -

ಕೌನ್​ ಬನೇಗಾ ಕರೋಡ್ಪತಿ ಶೋ.. ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಜನರು ಈ ಕಾರ್ಯಕ್ರಮವನ್ನು ವೀಕ್ಷಿಸುವುದಕ್ಕೆ ಕಾದು ಕುಳಿತಿರುತ್ತಾರೆ. ಇನ್ನು ಈ ಶೋನ ಮೇನ್ ಅಟ್ರಾಕ್ಷನ್​ ಅಂದ್ರೆ ಬಿಗ್ ಬಿ ಅಮಿತಾಬ್​ ಬಚ್ಚನ್​.
ಜನಪ್ರಿಯವಾದ ಕೌನ್​ ಬನೇಗಾ ಕರೋಡ್ಪತಿ ಸೀಸನ್​ 16 ಶುರುವಾಗಿದ್ದು, 81 ವರ್ಷದ ಅಮಿತಾಬ್ ಬಚ್ಚನ್ , ಕೌನ್ ಬನೇಗಾ ಕರೋಡ್ಪತಿ 16 ರ ಹೋಸ್ಟ್ ಆಗಿ ಮರಳಿದ್ದಾರೆ. ಇನ್ನು ಕಾಮನ್​ ಆಗಿ ಎಲ್ಲರಲ್ಲೂ ಮೂಡುವ ಪ್ರಶ್ನೆ ಏನಂದ್ರೆ, ಈ ಶೋಗೆ ಬಚ್ಚನ್ ಪಡೆಯೋ ಸಂಭಾವನೆ ಎಷ್ಟು ಅನ್ನೋದು..
2000 ದಲ್ಲಿ ಶುರುವಾದ ಈ ಕಾರ್ಯಕ್ರಮವನ್ನ ಇಲ್ಲಿಯವರೆಗೂ ಬಿಗ್​ ಬಿ ಒಬ್ಬರೆ ನಡೆಸಿಕೊಡುತ್ತಿದ್ದಾರೆ. ಹಾಗಾದರೆ ಅಮಿತಾಬ್​ ಬಚ್ಚನ್​ ಒಂದು ಸೀಸನ್​​ಗೆ ಎಷ್ಟು ಸಂಭಾವನೆ ಪಡೀತಾರೆ. ಸದ್ಯ ಇವಾಗ ಒಂದು ಎಪಿಸೋಡ್​ಗೆ ಎಷ್ಟು ಸಂಭಾವನೆ ತೆಗೆದುಕೊಳ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಸದ್ಯ ಕೌನ್ ಬನೇಗಾ ಕರೋಡ್ಪತಿ ಸೀಸನ್ 16ರ ಒಂದು ಎಪಿಸೋಡ್​ಗೆ ಅಮಿತಾಭ್ ಬಚ್ಚನ್ 5 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ವರದಿಯಾಗಿದೆ. ಮೊದಲ ಸೀಸನ್​ನಿಂದ ಇಲ್ಲಿಯವರೆಗೆ ಬಚ್ಚನ್ ಎಷ್ಟೆಷ್ಟು ವೇತನ ಪಡೆದಿದ್ದಾರೆ ಅನ್ನೋದನ್ನ ನೋಡೋದಾದ್ರೆ..
ಕೆಬಿಸಿ 1 ಸೀಸನ್ – ₹ 25 ಲಕ್ಷ
ಕೆಬಿಸಿ 2 ₹ 25 ಲಕ್ಷ
ಕೆಬಿಸಿ 4 – ₹ 50 ಲಕ್ಷ
ಕೆಬಿಸಿ 5 – ₹ 50 ಲಕ್ಷ
ಕೆಬಿಸಿ 6 – ₹ 1.5 ಕೋಟಿ ಮತ್ತು ₹ 2 ಕೋಟಿ
ಕೆಬಿಸಿ 7 – ₹ 1.5 ಕೋಟಿ ಮತ್ತು ₹ 2 ಕೋಟಿ
ಕೆಬಿಸಿ 8 – ₹ 2 ಕೋಟಿ
ಕೆಬಿಸಿ 9 – ₹ 2.9 ಕೋಟಿ
ಕೆಬಿಸಿ 10 – ₹ 3 ಕೋಟಿ
ಕೆಬಿಸಿ 11 – ₹ 3.5 ಕೋಟಿ
ಕೆಬಿಸಿ 12 – ₹ 3.5 ಕೋಟಿ
ಕೆಬಿಸಿ 13 – ₹ 3.5 ಕೋಟಿ
ಕೆಬಿಸಿ 14 – ₹ 4 ರಿಂದ ₹ 5 ಕೋಟಿ
ಕೆಬಿಸಿ 15 – ₹ 4 ಮತ್ತು ₹ ನಡುವೆ 5 ಕೋಟಿ
ಕೆಬಿಸಿ 16 – ₹ 5 ಕೋಟಿ

ಅಮಿತಾಭ್​ ಬಚ್ಚನ್ ಕೆಬಿಸಿ ಪಯಣವನ್ನ ಶುರು ಮಾಡಿದ ಹೊಸತರಲ್ಲಿ ಅವರ ಕೆರಿಯರ್ ಅಷ್ಟೊಂದು ಉತ್ತುಂಗದಲ್ಲಿರಲಿಲ್ಲ. ಈ ಶೋ ಒಂದು ಬ್ರಿಟಿಷ್ ಶೋ ಆಗಿದ್ದು, ಹೂ ವಾಂಟ್ಸ್​ ಟು ಬಿ ಎ ಮಿಲಿಯನೇರ್​? ನ ಡಬ್ಬಿಂಗ್​ ಆಗಿತ್ತು. ಫಸ್ಟ್​ ಸೀಸನ್​ ಅದ್ಭುತವಾದ ಯಶಸ್ಸು ಕಂಡಿತು. ಈ ಶೋ ಅಮಿತಾಭ್ ಅವರನ್ನು ಪ್ರತಿ ಮನೆ ಮನೆಗೂ ಕರೆದೊಯ್ದಿತು. ಜೊತೆಗೆ ಅಲ್ಲಿಂದ ಅವರ ಕೆರಿಯರ್​ ಅನ್ನ ಪುನರುಜ್ಜೀವನಗೊಳಿಸಿತು.
ಬಳಿಕ ಎರಡನೇ ಸೀಸನ್​ಗೂ ​​ಕೂಡ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಅವರ ಅನಾರೋಗ್ಯದ ಕಾರಣದಿಂದ ಅವರು ಹಿಂದೆ ಸರಿಯಬೇಕಾಯಿತು. ನಂತರ ಆ ಜಾಗಕ್ಕೆ ಕಿಂಗ್ ಖಾನ್​ ಶಾರುಖ್​ ಖಾನ್​ ಸೀಸನ್​ 3ರಲ್ಲಿ ನಿರೂಪಕರಾಗಿ ಬಂದರು. ಶೋ ಏನೋ ಚೆನ್ನಾಗಿಯೇ ಮೂಡಿ ಬಂತು, ಆದ್ರೆ ಜನಪ್ರಿಯತೆ ಹಾಗೂ ಅಭಿಮಾನಿಗಳ ಬೇಡಿಕೆ ಮೇರೆಗೆ ಸೀಸನ್​ 4ರಲ್ಲಿ ತಮ್ಮ ಹೋಸ್ಟಿಂಗ್​ಗೆ ಮರಳಿದರು.
ಒಟ್ನಲ್ಲಿ ಕಳೆದ 10 ವರ್ಷಗಳಿಂದ ಬಚ್ಚನ್ ಕೆಬಿಸಿ ನಡೆಸಿಕೊಡುತ್ತಿದ್ದಾರೆ. ಕೆಬಿಸಿ 16ನೇ ಸೀಸನ್​ನ ಪ್ರತಿಯೊಂದು ಎಪಿಸೋಡ್​ಗೆ ಬಚ್ಚನ್ 5 ಕೋಟಿ ಪಡೆಯುತ್ತಿದ್ದಾರೆ. ಈ ಮೂಲಕ ಬಾಲಿವುಡ್​ನ ಅತಿ ಹೆಚ್ಚು ಸಂಭಾವನೆ ಪಡೀತಾರೆ ನಿರೂಪಕರಾಗಿದ್ದಾರೆ.

*ಸ್ವಾತಿ.ಎಸ್.

- Advertisement -

Latest Posts

Don't Miss