Wednesday, January 15, 2025

Latest Posts

ನೀಟ್ ಮರುಪರೀಕ್ಷೆ ನಡೆಸಲು ಕೇಂದ್ರ ಒಪ್ಪಿಗೆ- ಟೆನ್ಶನ್ ಬಿಟ್ಟು ರೆಡಿಯಾಗಿ ಪರೀಕ್ಷೆಗೆ

- Advertisement -

ನವದೆಹಲಿ:  ಕಳೆದ ಭಾನುವಾರದಂದು ರೈಲು ವಿಳಂಬದಿಂದಾಗಿ ನೀಟ್  ಪರೀಕ್ಷೆ ಬರೆಯಲು ಮುಂದಾಗಿದ್ದ ವಿದ್ಯಾರ್ಥಿಗಳು ಇನ್ನು ಚಿಂತೆ ಮಾಡೋ ಅಗತ್ಯ ಇಲ್ಲ. ಯಾಕಂದ್ರೆ ಇದೀಗ ಮರುಪರೀಕ್ಷೆ ನಡೆಸೋದಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೌದು, ಕಳೆದ ಭಾನುವಾರ ಸಾಕಷ್ಟು ಕನಸು ಕಟ್ಟಿಕೊಂಡು ನೀಟ್ ಪ್ರವೇಶ ಪರೀಕ್ಷೆ ಬರೆಯೋದಕ್ಕೆ ಅಂತ ಕೊಪ್ಪಳ, ಬಳ್ಳಾರಿಯ ಅನೇಕ ವಿದ್ಯಾರ್ಥಿಗಳು ಹಂಪಿ ಎಕ್ಸ್ ಪ್ರೆಸ್ ರೈಲಲ್ಲಿ ಬೆಂಗಳೂರಿಗೆ ಬರ್ತಿದ್ರು. ಆದ್ರೆ ಗುಂತಕಲ್ ಹಾಗೂ ಕಲ್ಲೂರು ನಡುವೆ ಕಾಮಗಾರಿ ನಡಿಯುತ್ತಿದ್ರಿಂದ ಹಂಪಿ ಎಕ್ಸ್ ಪ್ರೆಸ್ ರೈಲು ಪರ್ಯಾಯ ಮಾರ್ಗದಲ್ಲಿ ಸಂಚರಿಸಿತ್ತು. ಇನ್ನು ಪರ್ಯಾಯ ಮಾರ್ಗ 120 ಕಿಮೀ ಹೆಚ್ಚುವರಿಯಾಗಿ ಸಾಗಿದ್ದರಿಂದ ರೈಲು ವಿಳಂಬಕ್ಕೆ ಕಾರಣವಾಯ್ತು. ಬೆಳಗ್ಗೆ ಏಳೂವರೆ ಗಂಟೆಗೆ ತಲುಪಬೇಕಿದ್ದ ರೈಲು ಎಂಟೂವರೆ ಗಂಟೆಗೆ ತಲುಪಿತ್ತು. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲುಪಲು ಲೇಟ್ ಆಗಿದ್ರಿಂದ ಅವರು ಅಂದು ಬರೀಬೇಕಿದ್ದ ಪರೀಕ್ಷೆಯಿಂದ ವಂಚಿತರಾಗಬೇಕಾಯ್ತು.

ಈ ಕುರಿತು ರೈಲ್ವೇ ಅಧಿಕಾರಿಗಳು ಕೇಂದ್ರಕ್ಕೆ ಮರುಪರೀಕ್ಷೆ ನಡೆಸಲು ಅನುವುಮಾಡಿಕೊಡುವಂತೆ ಶಿಫಾರಸು ಮಾಡಿದ್ರು. ಈ ನಿಟ್ಟಿನಲ್ಲಿ ಇದೀಗ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಟ್ಟೀಟ್ ಮಾಡೋ ಮೂಲಕ ಮರುಪರೀಕ್ಷೆ ನಡೆಸಲಾಗುವುದು ಅಂತ ಅಧಿಕೃತವಾಗಿ ತಿಳಿಸಿದ್ದಾರೆ. ಇನ್ನು ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ್ದ ಈ ಪರೀಕ್ಷೆ ಭಾರತದಾದ್ಯಂತ  ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇರುವ ಏಕೈಕ ಪರೀಕ್ಷೆಯಾಗಿದೆ.

- Advertisement -

Latest Posts

Don't Miss