ಭಾರತ ವಿರುದ್ಧ ಹೀನಾಯವಾಗಿ ಸೋಲು ಕಂಡಿರುವ ಪಾಕ್ ಕ್ರಿಕೆಟ್ ತಂಡ ವ್ಯಾಪಕ ಟೀಕೆಗೆ ಗುರಿಯಾಗಿದೆ.. ಪಾಕಿಸ್ತಾನ ಆಟಗಾರರನ್ನ ಭಾರತೀಯ ಕ್ರಿಕೆಟ್ ಪ್ರೇಮಿಗಳು ಟ್ರೋಲ್ ಮಾಡ್ತಿದ್ರೆ, ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಅಕ್ಷರಶಃ ರೊಚ್ಚಿಗೆದ್ದಿದ್ದಾರೆ.. ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡ ಸರ್ಫರಾಜ್ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.. ತಂಡದ ಆಟಗಾರರು ಸಹ ಸರ್ಫರಾಜ್ ಆಯ್ಕೆಯನ್ನ ಟೀಕಿಸಿದ್ದಾರೆ..
ಈ ನಡುವೆ ಪಾಕ್ ತಂಡದ ಕ್ಯಾಪ್ಟನ್ ಸರ್ಫರಾಜ್ ಅಹ್ಮದ್ ಡ್ರೆಸ್ಸಿಂಗ್ ರೂಂನಲ್ಲಿ ತಂಡದ ಸದಸ್ಯರಿಗೆ ಫುಲ್ ವಾರ್ನ್ ಮಾಡಿದ್ದಾರೆ.. ಪಾಕಿಸ್ತಾನಕ್ಕೆ ವಾಪಸ್ ನಾನೊಬ್ಬನೇ ಹೋಗ್ತಿಲ್ಲ.. ನೀವೂ ಕೂಡ ಬರ್ತೀರಾ ಅದು ನೆನಪಿರಲಿ.. ಭಾರತದ ವಿರುದ್ಧ ಸೋತಿರುವ ಕೆಟ್ಟ ನೆನಪನ್ನ ಮರೆತುಬಿಡಿ ಉಳಿದ ಪಂದ್ಯಗಳ ಕಡೆ ಗಮನ ಕೊಡಿ. ಆ ಪಂದ್ಯಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳೋಣ ಇಲ್ಲದಿದ್ರೆ ಪಾಕಿಸ್ತಾನಕ್ಕೆ ನಾವು ಕಾಲಿಟ್ಟಾಗ ಆಗುವ ಅನಾಹುತವನ್ನ ಯಾರೂ ತಡೆಗಟ್ಟಲು ಸಾಧ್ಯವಿಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ..
ಭಾರತದ ವಿರುದ್ಧ ಸೋಲಿನ ನಂತರ ಪಾಕಿಸ್ತಾನದಲ್ಲಿ ಹಲವೆಡೆ ಟಿವಿಗಳನ್ನ ಒಡೆದು ಹಾಕಿ ಸರ್ಫರಾಜ್ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.. ಈಗ ಉಳಿದ ಪಂದ್ಯಗಳನ್ನ ಗೆದ್ದರೇ ರೊಚ್ಚಿಗೆದ್ದಿರುವ ಅಭಿಮಾನಿಗಳನ್ನ ಸಮಾಧಾನ ಮಾಡಬಹುದು ಅನ್ನೋ ಸರ್ಫರಾಜ್ ಮಾತು.. ಏನೇ ಆಗಲಿ ಸರ್ಫರಾಜ್ ಪಾಕಿಸ್ತಾನಕ್ಕೆ ಕಾಲಿಟ್ಟ ಮೇಲೆ ಏನು ಕಾದಿದೆಯೋ ಅನ್ನೋ ಭಯದಲ್ಲಿ ಇರುವ ಆಗಿದೆ..
ಯಸ್ ವೀಕ್ಷಕರೇ ಸರ್ಫರಾಜ್ ಎಚ್ಚರಿಕೆಗೆ ಬಗ್ಗಿ ಪಾಕ್ ತಂಡ ಉಳಿದ ಪಂ.ದ್ಯಗಳನ್ನ ಗೆಲ್ಲುತ್ತಾ..? ಇಲ್ಲ ಹೀನಾಯವಾಗಿ ಸೋತು ವಿಶ್ವಕಪ್ ನಿಂದ ಮರಳುತ್ತಾ..? ಈ ಬಗ್ಗೆ ಕಾಮೆಂಟ್ ಮಾಡಿ..
ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ
ನಮಗೆ ಕಾಶ್ಮೀರ ಬೇಡ, ಕೊಹ್ಲಿ ಕೊಟ್ಟುಬಿಡಿ..!