Sunday, March 3, 2024

Latest Posts

ಫೋನಿ ಸಂತ್ರಸ್ತರಿಗೆ ತಮ್ಮ ಒಂದು ವರ್ಷದ ಸಂಬಳ ನೀಡೋದಾಗಿ ಘೋಷಿಸಿದ ಒಡಿಶಾ ಸಿಎಂ

- Advertisement -

ಭುವನೇಶ್ವರ: ಒಡಿಶಾಕ್ಕೆ ಅಪ್ಪಳಿಸಿದ ಫಣಿ ಚಂಡಮಾರುತದಿಂದ ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ತಮ್ಮ ಒಂದು ವರ್ಷದ ಸಂಬಳ ನೀಡುವುದಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಘೋಷಿಸಿದ್ದಾರೆ. ಫಣಿ ಸೈಕ್ಲೋನ್​ನಿಂದ ಇದುವರೆಗೆ ರಾಜ್ಯದಲ್ಲಿ 34 ಮಂದಿ ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದಾರೆ. ಅಲ್ಲದೇ ಜನರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನನ್ನ ಒಂದು ವರ್ಷದ ಸಂಬಳವನ್ನು ಸಂತ್ರಸ್ತರಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಈಗಾಗಲೇ ರಾಜ್ಯ ಸರ್ಕಾರದಿಂದ ಪರಿಹಾರ ಕಾರ್ಯಗಳಿಗೆ 381 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು ,ಪ್ರಧಾನಿ ನರೇಂದ್ರ  ಮೋದಿ ನಿನ್ನೆ ಹಾನಿಗೊಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ರು. ಅಲ್ಲದೆ ಹೆಚ್ಚುವರಿಯಾಗಿ ಕೇಂದ್ರದಿಂದ 1000 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್​ ಕೂಡ ಪ್ರಧಾನಿ ಮೋದಿ ಘೋಷಿಸಿದ್ದಾರೆ ಅಂತ ಸಿಎಂ ಪಾಟ್ನಾಯಕ್ ತಿಳಿಸಿದ್ರು.

- Advertisement -

Latest Posts

Don't Miss