Thursday, May 30, 2024

Latest Posts

ರಿಲೀಸ್ ಆಗಿದೆ ಯಶ್-ರಾಧಿಕಾ ಪುತ್ರಿಯ ಫೋಟೋ- ಯಾರ ಹಾಗಿದೆ ಗೊತ್ತಾ ಮುದ್ದು ಪುಟಾಣಿ?

- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ನ ಸ್ಟಾರ್ ಜೋಡಿ ಯಶ್ ಮತ್ತು ರಾಧಿಕಾ ದಂಪತಿ ಪುತ್ರಿಯನ್ನು ನೋಡೋ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿದೆ. ಹೌದು ಅಕ್ಷಯ ತೃತೀಯ ದಿನದಂದು ನಾನು ನಮ್ಮ ನಿಜವಾದ ನಿಧಿಯನ್ನ ನಿಮ್ಮ ಮುಂದೆ ಇಡಲಿದ್ದೇವೆ ಅಂತ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದ ರಾಧಿಕಾ ಪಂಡಿತ್ ಇಂದು ಹೇಳಿದಂತೆಯೇ ತಮ್ಮ ಪುಟ್ಟ ದೇವತೆಯ ಫೋಟೋ ರಿಲೀಸ್ ಮಾಡಿದ್ದಾರೆ. ಮಗು ನೋಡಲು ಸಖತ್ ಕ್ಯೂಟ್ ಆಗಿದ್ದು ಇಂಟರ್ನೆಟ್ ನಲ್ಲಿ ಟ್ರೆಂಡಿಂಗ್ ಆಗ್ತಿದೆ.

ಮಗು ರಾಧಿಕಾ ಪಂಡಿತ್ ತರ ಇದ್ಯೋ ಇಲ್ಲಾ ಯಶ್ ಹಾಗೆ ಇದ್ಯೋ ಅನ್ನೋ ಕ್ಯೂರಿಯಾಸಿಟಿ ಇಟ್ಟುಕೊಂಡಿದ್ದ ಅಭಿ ಮಾನಿಗಳ ಪ್ರಶ್ನೆಗೆ ಇದೀಗ ತೆರೆ ಬಿದ್ದಿದ್ದು ಫುಲ್ ಖುಷ್ ಆಗಿದ್ದಾರೆ.  ಮಗುವಿನ ಮುಖ ನೋಡಿದ್ದಾಯ್ತು… ಇದೀಗ ಈ ಪುಟಾಣಿಗೆ ಏನಂತಾ ಹೆಸ್ರಿಡ್ತಾರೋ ಅಂತ ಕಾತರುರಾಗಿದ್ದ ಅಭಿಮಾನಿಗಳು ಸದ್ಯಕ್ಕೆ ತಾವೇ ಯಶಿಕಾ ಅಂತ ನಾಮಕರಣ ಮಾಡಿಕೊಂಡಿದ್ರು. ಆದ್ರೆ ಮುದ್ದು ಪುಟಾಣಿಗೆ ಸ್ಟಾರ್ ದಂಪತಿ ಏನಂತ ಹೆಸ್ರಿಡ್ತಾರೋ ಅಂತ ಅಭಿಮಾನಿಗಳು ಕ್ಯೂರಿಯಸ್ ಆಗಿದ್ದಾರೆ.

ತಮ್ಮ ಪುಟ್ಟ ರಾಜಕುಮಾರಿಗೆ ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ ‘ಬೇಬಿ ವೈಆರ್’ ಅಂತ ಕರೆಯೋಣ ಅಂತ ನಟ ಯಶ್ ಹೇಳಿಕೊಂಡಿದ್ದಾರೆ.

- Advertisement -

Latest Posts

Don't Miss