Sunday, October 13, 2024

Latest Posts

ಸಿಎಂ ಕಚೇರಿ ಮುತ್ತಿಗೆ ಯತ್ನ – ಬಿಜೆಪಿ ನಾಯಕರು ಅರೆಸ್ಟ್..!

- Advertisement -

ಜಿಂದಾಲ್ ಗೆ ಭೂಮಿ‌ ಮಾರಾಟ ಮಾಡದಂತೆ ಜೊತೆಗೆ ರೈತರ ಸಾಲ ಮನ್ನಾ ಮಾಡಿಲ್ಲ ಅಂತ ಆರೋಪಿಸಿ ಬಿಜೆಪಿ ನಾಯಕರು ಎತಡು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಇಂದು ಅಂತ್ಯವಾಗಿದೆ..

ಇಂದು ಬೆಳಗ್ಗೆ 100ಕ್ಕೂ ಹೆಚ್ಚು ಶಾಸಕರು, 25 ಸಂಸದರು, ವಿಧಾನಪರಿಷತ್, ರಾಜ್ಯಸಭಾ ಸದಸ್ಯರು ಸೇರಿದಂತೆ BBMPಯ 100 ಕಾರ್ಪೋರೇಟರ್ ಗಳು ಜೊತೆ ಸಾವಿರಾರು ಕಾರ್ಯಕರ್ತರು ಬಿಎಸ್ ವೈ ನೇತೃತ್ವದಲ್ಲಿ ಸಿಎಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಈ ವೇಳೆ ಶಿವಾನಂದ ಸರ್ಕಲ್ ವರೆಗೂ ಬಂದ ಮೆರವಣಿಗೆ ಯನ್ನ ತಡೆದ ಪೊಲೀಸರಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನ ಬಂಧಿಸಿದ್ರು. ನಂತರ ಶಾಸಕರು, ಸಂಸದರು ಬಂಧನಕ್ಕೊಳಾಗಾದ್ತು.. ಈ ವೇಳೆ ತಳ್ಳಾಟ ಉಂಟಾಗಿ ಮಾಜಿ ಡಿಸಿಎಂ ಆರ್. ಅಶೋಕ್ ಕೈಗೆ ಗಾಯವಾಯ್ತು..

ಸುಮಲತಾ ಅಬ್ಬರ, ವಿರೋಧಿಗಳು ತತ್ತರ.!

ಮೊದಲು ಪ್ರತಿಭಟನಾ ಸ್ಥಳಕ್ಕೆ ಸಿಎಂ ಕುಮಾರಸ್ವಾಮಿ ಸೂಚನೆ ಹಿನ್ನೆಲೆ ಸಚಿವ ವೆಂಕಟರಾವ್ ನಾಡಗೌಡ ಬಿಎಸ್ ವೈ ಭೇಟಿಯಾಗಿ ನಿಮ್ಮ ಎಲ್ಲಾ ಬೇಡಿಕೆ ಕುರಿತು ಚರ್ಚಿಸಲು ಸಿಎಂ ಸಿದ್ಧವಿದ್ದು ತಾವು ಸಮಯ ನಿಗದಿ ಮಾಡುವಂತೆ ಬಿಎಸ್ ವೈಗೆ ಕುಮಾರಸ್ವಾಮಿ ಮನವಿ ಮಾಡಿದ್ರು. ಆದ್ರೆ ಇದ್ಯಾವುದಕ್ಕೂ ಸ್ಪಂದಿಸದ ಯಡಿಯೂರಪ್ಪ ಸಿಎಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಬಂಧನಕ್ಕೊಳಗಾಗಿದ್ದಾರೆ..

ಏನೇ ಆಗಲಿ ಬಹಳ ದಿನಗಳ ನಂತರ ಬಿಜೆಪಿ ನಾಯಕರು ವಿರೋಧ ಪಕ್ಷದ ಕೆಲಸವನ್ನ ಸಮರ್ಥವಾಗಿ ಮಾಡ್ತಿದ್ದೇವೆ ಅನ್ನೋದನ್ನ ಈ ಮೂಲಕ ಸಾಬೀತು ಮಾಡಿದ್ದಾರೆ.

- Advertisement -

Latest Posts

Don't Miss