Saturday, December 21, 2024

Latest Posts

ಸಿದ್ದು ಪರ ಇಂದೂ ಮುಂದುವರೆದ ಬ್ಯಾಟಿಂಗ್- ಕಾಗಿನೆಲೆ ಸ್ವಾಮೀಜಿ ಹೇಳಿಕೆಗೆ ವಿಶ್ವನಾಥ್ ಜೈ

- Advertisement -

ಹಾವೇರಿ: ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸಹಮತ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ವಿಶ್ವನಾಥ್, ಮಠಾಧಿಪತಿಗಳೂ ಕೂಡ ಮತದಾರರೇ, ಅವರು ಮತದಾರರಾಗಿ ಹೇಳೋದ್ರಲ್ಲಿ ತಪ್ಪೇನಿಲ್ಲ. ಯಾವುದೇ ಪಕ್ಷದ ಪರ ವೋಟು ಹಾಕಿ ಅಂತ ಹೇಳೋದು ತಪ್ಪು. ಆದ್ರೆ ಯಾರೋ ಒಬ್ರು ಸಿಎಂ ಆಗಲಿ ಅನ್ನೋದ್ರಲ್ಲಿ ತಪ್ಪಿಲ್ಲ ಅಂತ ವಿಶ್ವನಾಥ್ ಹೇಳಿದ್ರು. ಇನ್ನು ಸ್ವತಃ ಸಿದ್ದರಾಮಯ್ಯನವರೇ ಸಿಎಂ ಖುರ್ಚಿ ಖಾಲಿ ಇಲ್ಲ, ಮುಂದೆ ಜನಾಶೀರ್ವಾದ ಇದ್ರೆ ಸಿಎಂ ಆಗ್ತೀನಿ ಅಂತ ನಾಂದಿ ಹಾಡಿದ್ದಾರೆ ಅಂತ ವಿಶ್ವನಾಥ್ ಇದೇ ವೇಳೆ ಹೇಳಿದ್ರು.

ನಿನ್ನೆ ಬಳ್ಳಾರಿಯ ಹೂವಿನಹಡಗಲಿಯಲ್ಲಿ ನಡೆದ ಏಳುಕೋಟಿ ಭಕ್ತ ಕುಟೀರ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ – ‘ಸಿದ್ದರಾಮಯ್ಯನವರ ಕೊಡುಗೆಯನ್ನ ಜನರ ಅರ್ಥಮಾಡಿಕೊಳ್ಳದೆ ಕಳೆದ ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದ ಜನರಿಗೀಗ ತಪ್ಪಿನ ಅರಿವಾಗಿದೆ. ಸಿದ್ದರಾಮಯ್ಯನವರು ಮತ್ತೊಮ್ಮೆ ಸಿಎಂ ಆಗೋದು ನಿಶ್ಚಿತ’ ಅಂತ ಹೇಳಿದ್ದರು.

- Advertisement -

Latest Posts

Don't Miss