ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಸುತ್ತಿರೋ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಮುಹೂರ್ತ ಇಂದು ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಟೈಟಲ್ ನಿಂದಲೇ ಥ್ರಿಲ್ ಆಗಿರೋ ಡಿ ಬಾಸ್ ಫ್ಯಾನ್ಸ್ ಈ ಚಿತ್ರ ಯಾವಾಗಪ್ಪಾ ಸೆಟ್ಟೇರುತ್ತೆ ಅಂತ ಕಾತುರರಾಗಿದ್ರು. ಆದ್ರೀಗ ಚಿತ್ರ ಸೆಟ್ಟೇರಿದ್ದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ಇನ್ನು ಪೋಸ್ಟರ್ ನಲ್ಲಿ ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು , ರಾವಣನ ಮುಂದೆ ಗೆಲ್ಲೋದು ಗೊತ್ತು ಅನ್ನೋ ಕ್ಯಾಪ್ಶನ್ ಇದ್ದ ಪೋಸ್ಟರ್ ಗೆ ಅಭಿಮಾನಿಗಳು ಫಿದಾ ಆಗಿದ್ರು. ಈ ಬಗ್ಗೆ ಕೇಳಿದ ಪ್ರಶ್ನೆಗೆ ನಟ ದರ್ಶನ್, ನಾನು ಚಿತ್ರದಲ್ಲಿ ರಾಮ ಆಗಿರ್ತೀನಾ, ರಾವಣನಾಗಿರ್ತೀನಾ ಅನ್ನೋದನ್ನ ಇನ್ನೊಂದು ವರ್ಷದಲ್ಲಿ ರಿಲೀಸ್ ಆಗಲಿರೋ ಸಿನಿಮಾದಲ್ಲೇ ಗೊತ್ತಾಗುತ್ತೆ ನೋಡಿ ಅಂತ ಹೇಳಿದ್ದಾರೆ. ಇದೇ ವೇಳೆ ಈ ಚಿತ್ರಕ್ಕೆ ನಟಿ ಐಶ್ವರ್ಯಾ ರೈ ನಟಿಸ್ತಾರಾ ಅನ್ನೋ ಪತ್ರಕರ್ತರ ಪ್ರಶ್ನೆಯನ್ನು ದರ್ಶನ್ ಅಲ್ಲಗಳೆದ್ರು.
ಇನ್ನು ರಾಬರ್ಟ್ ಚಿತ್ರದ ಶೂಟಿಂಗ್ ಗಾಗಿ ದಚ್ಚು ಅನ್ನವನ್ನ ಕಂಪ್ಲೀಟ್ ಆಗಿ ತ್ಯಜಿಸಿದ್ದು ಸ್ಟ್ರಿಕ್ಟ್ ಡಯಟ್ ಫಾಲೋ ಮಾಡ್ತಿದ್ದಾರಂತೆ. ಈ ಚಿತ್ರಕ್ಕೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ.