ಡ್ರ್ಯಾಗನ್ ರಾಷ್ಟ್ರ ಚೀನಾಗೆ ಅಮೆರಿಕ ದೊಡ್ಡ ಶಾಕ್ ನೀಡಿದ್ದು 1000 ಚೀನಾ ನಾಗರಿಕರ ವೀಸಾವನ್ನ ರದ್ದು ಮಾಡಿದೆ.

ರಾಷ್ಟ್ರದ ಭದ್ರತೆಯ ಕಾರಣವೊಡ್ಡಿರೋ ಅಮೆರಿಕ, ರಾಷ್ಟ್ರಕ್ಕೆ ಎಂಟ್ರಿ ಕೊಟ್ಟಿರೋ 1000 ಚೀನಿ ವಿದ್ಯಾರ್ಥಿಗಳು ಹಾಗೂ ರಿಸಚರ್ಸ್ ವೀಸಾಗಳನ್ನ ರದ್ದುಗೊಳಿಸಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಚೀನಾ ಗೃಹ ಸಚಿವಾಲಯದ ಅದ್ಯಕ್ಷ ಚಾಡ್ ವೋಲ್ಫ್ ಅಮೆರಿಕಕ್ಕೆ ಎಂಟ್ರಿ ಕೊಟ್ಟಿರೋ ಚೀನಾ ವಿದ್ಯಾರ್ಥಿಗಳು ಹಾಗೂ ರಿಸಚರ್ಸ್ಗಳಲ್ಲಿ ಕೆಲವರು ಚೀನಾ ಸೇನೆ ಜೊತೆ ಲಿಂಕ್ ಹೊಂದಿದ್ದಾರೆ ಎಂಬ ಮಾಹಿತಿ ಇದೆ. ಹಾಗೂ ಇವರು ದೇಶದ ಮಾಹಿತಿಯನ್ನ ಚೀನಾಗೆ ನೀಡ್ತಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಈ ಕ್ರಮ ಕೈಗೊಂಡಿದ್ದೇವೆ ಅಂತಾ ಹೇಳಿದ್ರು.



