political story
ಈಗಾಗಲೆ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರು ಕೋಲಾರದಲ್ಲಿ ಈ ಬಾರಿಯ ವಿದಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಲಿದ್ದಾರೆ.ಎಂದು ಅವರೆ ಸ್ವತಃ ಘೋಷಣೆ ಯನ್ನು ಮಾಡಿಯಾಗಿದೆ. ಇದರ ಬೆನ್ನಲ್ಲೆ ಬಿಜೆಪಿಯಿಂದ ಯಾರು ಈ ಬಾರಿ ಕಣಕ್ಕಿಳಿಯಲಿದ್ದಾರೆ ಎನ್ನುವ ಅನುಮಾನಕ್ಕೆ ಬಿಜೆಪಿ ನಾಯಕರು ತೆರೆ ಎಳೆದಿದ್ದಾರೆ.
ತೋಟಗಾರಿಕೆ ಸಚಿವರಾಗಿರುವ ಮತ್ತು ಕೋಲಾರ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಮುನಿರತ್ನರವರು ಈ ಬಾರಿ ಕೋಲಾರ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ದೆ ಮಾಡಲಿದ್ದಾರೆ ಎಂದು ಬಿಜೆಪಿ ನಾಯುಕರೆ ಬಹಿರಂಗಪಡಿಸಿದ್ದಾರೆ. ಈ ಕಾರಣದಿಂದಾಗಿ ಸಿದ್ದರಾಮಯ್ಯ ವಿರುದ್ದ ಮುನಿರತ್ನ ಕಣಕ್ಕಿಳಿಯುವುದು ಖಚಿತವಾಗಿದೆ.
ಈ ಹಿಂದೆ ಹಲವು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿ ಸಿದ್ದರಾಮಯ್ಯನವರು ಗರಡಿಯಲ್ಲಿ ಪಳಗಿದ್ದ ಸಚಿವ ಮುನಿರತ್ನರವರು ಬಿಜೆಪಿ ಪಕ್ಷ ಸೇರಿಕೊಂಡು ಈ ಬಾರಿಯ ಚುನಾವಣೆಯಲ್ಲಿ ಗುರುವಿನ ವಿರುದ್ದವೆ ತಿರುಗಿ ನಿಂತಿದ್ದಾರೆ. ಇದು ಬಿಜೆಪಿ ನಾಯಕರು ಸಿದ್ದರಾಮಯ್ಯನವರನ್ನು ಚುನಾವಣೆಯಲ್ಲಿಪರಾಭವಗೊಳಿಸಲು ಹೂಡಿರುವ ತಂತ್ರಗಾರಿಕೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.