- Advertisement -
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಗೀತಾ ಇದೇ 27ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಕನ್ನಡ ಪರ ಹೋರಾಟದ ಜೊತೆ ಲವ್ ಸ್ಟೋರಿ ಇರೋ ಈ ಸಿನಿಮಾದಲ್ಲಿ ಗಣೇಶ್ ಮಿಂಚಲು ರೆಡಿಯಾಗಿದ್ದಾರೆ. ಮುಂಗಾರು ಮಳೆಯಂತಹ ಮತ್ತೊಂದು ಹಿಟ್ ಪಡೆಯೋ ನಿರೀಕ್ಷೆಯಲ್ಲಿರೋ ಗಣಪನಿಗೆ ಕಿಚ್ಚ ಸುದೀಪ್ ವಿಷ್ ಮಾಡಿದ್ದಾರೆ.
ಗೀತಾ ಟ್ರೈಲರ್ ಉತ್ತಮವಾಗಿ ಮೂಡಿ ಬಂದಿದೆ. ಚಿತ್ರದ ಕಾನ್ಸೆಪ್ಟ್ ಕ್ಯೂರಿಯಾಸಿಟಿ ಹುಟ್ಟಿಸುವಂತಿದೆ. ಇದೇ ತಿಂಗಳು 27ಕ್ಕೆ ತೆರೆಗೆ ಬರುತ್ತಿರುವ ಗೀತಾ ಸಿನಿಮಾಗೆ ಮತ್ತು ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಕಿಚ್ಚನ ಶುಭಾಷಯಕ್ಕೆ ಗಣೇಶ್ ಕೂಡ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೇ ಕಿಚ್ಚನ ಪೈಲ್ವಾನ್ ಸಿನಿಮಾ ರಿಲೀಸ್ ಆದಾಗ ಗಣೇಶ್ ಕೂಡ ವಿಷ್ ಮಾಡಿದ್ರು.
- Advertisement -