Monday, December 23, 2024

Latest Posts

ಜಾಲಿ ರೈಡ್ ಹೋಗಿದ್ದ ‘ಸಾರಥಿ’ ಟೀಂ ಕಂಬ್ಯಾಕ್.. ಕೇರಳ ಯಾತ್ರೆ ನಡುವೆ ದರ್ಶನ್ ಮಾಡಿದ್ದೇನು ಗೊತ್ತಾ..?

- Advertisement -

ಸಿನಿಮಾ ಶೂಟಿಂಗ್ ಇಲ್ಲದೇ ರಿಲ್ಯಾಕ್ಸ್ ಮೂಡ್ ನಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಚ್ಚುಮೆಚ್ಚಿನ ಗೆಳೆಯರೊಂದಿಗೆ ಜಾಲಿ ರೈಡ್ ಮಾಡ್ತಿದ್ದಾರೆ. ಮಡಿಕೇರಿ ಟ್ರಿಪ್ ಮುಗಿಸಿ ಕೇರಳ ಯಾತ್ರೆ ಹೋಗಿದ್ದ ಸಾರಥಿ ಟೀಂ ಅಲ್ಲಿಂದ ಕಂಬ್ಯಾಕ್ ಮಾಡಿದೆ. ಜಸ್ಟ್ ಜಾಲಿ ರೈಡ್ ಗೆ ಮಾತ್ರ ದಚ್ಚು ಅಂಡ್ ಟೀಂ ಕೇರಳ ಹೋಗಿರಲಿಲ್ಲ. ಆ ಹಿಂದೆ ಒಂದು ಉದ್ದೇಶ ಕೂಡ ಇದೆ. ಅದೇನಪ್ಪ ಅಂದ್ರೆ ಪರಿಸರ ಸಂರಕ್ಷಣೆ.

ದರ್ಶನ್ ಎಲ್ಲೇ  ರೈಡ್ ಹೋದ್ರು ಅಲ್ಲಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ಕೊಡ್ತಾರೆ. ಅದರಂತೆ ಟ್ರಿಪ್ ಹೋದಾ ಜಾಗದಲ್ಲಿ ಸ್ನೇಹಿತರ ಜೊತೆ ಕೂಡಿ ಸಸಿ ನೆಡುವ ಕೆಲಸ ಮಾಡ್ತಾರೆ. ದೇವರನಾಡು ಕೇರಳ ಯಾತ್ರೆಯಲ್ಲೂ ದರ್ಶನ್ ಇಂತದ್ದೇ ಒಂದು ಕೆಲಸ ಮಾಡಿದ್ದಾರೆ. ಇಡೀ ಗಜಪಡೆ ಟೀಂ ಗಿಡ ನೆಡುವ ಮೂಲಕ ಗ್ರೀನ್ ಇಂಡಿಯಾ ಚಾಲೆಂಜ್ ನಲ್ಲಿ ಭಾಗಿಯಾಗಿದ್ದಾರೆ.

ನಟ ಪ್ರಜ್ವಲ್ ದೇವರಾಜ್, ಯಶಸ್ ಸೂರ್ಯ, ನಿರ್ಮಾಪಕ ಉಮಾಪತಿ ಸೇರಿದಂತೆ 20ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ದರ್ಶನ್ ಜಾಲಿ ರೈಡ್ ಹೋಗಿದ್ದರು.

- Advertisement -

Latest Posts

Don't Miss