ಡಿ.ಕೆ. ಶಿವಕುಮಾರ್‌ಗೆ ಹೈಕಮಾಂಡ್ ಗ್ಯಾರಂಟಿ, 10 ನಿಮಿಷದ ಮೀಟಿಂಗ್ ಸೋನಿಯಾ ಮೆಸೇಜ್

Not all heroes wear capes ಅನ್ನೋ ಒಂದು ಮಾತಿದೆ. ಹೀಗಂದ್ರೆ ಎಲ್ಲಾ ಹೀರೋಗಳು ನಿಲುವಂಗಿ ತೊಡೋದಿಲ್ಲ ಅಂತ ಅರ್ಥ. ಇನ್ನೂ ಸಿಂಪಲ್ಲಾಗಿ ಹೇಳಬೇಕು ಎಂದರೇ ಯಶ್ ಸಿನಿಮಾ ಡೈಲಾಗ್ ನೆನಪಿಸಬಹುದು. ಅಣ್ತಮ್ಮ..! ಇಲ್ಲಿ ಯಾರು ಹೀರೊಗಳನ್ನ ಹುಟ್ಟಾಕಲ್ಲ.. ನಮಗ್ ನಾವೇ ಹೀರೋ ಆಗ್ಬೇಕು ಅನ್ನೋ ಮಾತು ನಿಜವಾಗುತ್ತಿದೆ. KPCC President, Deputy Chief Minister of Karnataka ಡಿ.ಕೆ ಶಿವಕುಮಾರ್ ಇದೇ ಸಿದ್ಧಾಂತವನ್ನೇ ನೆಚ್ಚಿಕೊಂಡಂತೆ ಕಾಣುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನ ಗೆದ್ದೇ ಗೆಲ್ತೀವಿ ಅಂತ ಮೊದಲೇ ಭವಿಷ್ಯ ನುಡಿದು ಅದಕ್ಕಾಗಿ ದುಡಿದಿದ್ದು, ದಣಿದಿದ್ದು ಕನಕಪುರ ಬಂಡೆ ಅನ್ನೋದನ್ನ ಡಿಕೆ ಬಣ ಕಡ್ಡಿ ತುಂಡಾಗೋ ರೀತಿಯಲ್ಲಿ ಹೇಳುತ್ತಿದೆ. ಹಾಗಾಗಿಯೇ ಸಿದ್ದರಾಮಯ್ಯ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಅನ್ನೋ ಮಹತ್ವದ ಮೆಸೇಜ್ ರವಾನಿಸುತ್ತಿದ್ದಾರೆ.

ಅತ್ತ ಅಹಿಂದ ನಾಯಕ, ಕರ್ನಾಟಕ ಕಾಂಗ್ರೆಸ್ ಏಕೈಕ ಮಾಸ್ ಲೀಡರ್ ಸಿದ್ದರಾಮಯ್ಯ ಕೂಡ ಜಗ್ಗೋದಿಲ್ಲ, ಬಗ್ಗೋದಿಲ್ಲ ಅಂತ ಹಠಕ್ಕೆ ಬಿದ್ದಿದ್ದಾರೆ. ಇನ್ನು, ಅತಿ ಹೆಚ್ಚು ಶಾಸಕರ ಬೆಂಬಲ ಇರೋ ಸಿದ್ದರಾಮಯ್ಯ ನಂಗೆ ನಂಬರ್ ಗಳೇ ಲೆಕ್ಕ ಇಲ್ಲಣ್ಣೋ ಅಂತ ಶಿವಣ್ಣನ ರೇಂಜಿನಲ್ಲಿ ಸ್ಟ್ರಾಂಗ್ ಆಗಿದ್ದಾರೆ. ಆದರೇ, ದೆಹಲಿ ಗೇಮ್ ಬೇರೆಯದ್ದೇ ಮಾತು ಹೇಳುತ್ತಿದೆ. ಈ ಸಲ ಡಿಕೆ ಶಿವಕುಮಾರ್ ಸ್ಟ್ರಾಟರ್ಜಿ ಕುರ್ಚಿ ಕದನದ ಚದುರಂಗದಾಟದಲ್ಲಿ ಚೆಕ್​ ಮೆಟ್ ಇಟ್ಟಂತೆ ಕಾಣುತ್ತಿದೆ. ರಾಷ್ಟ್ರೀಯ ಕಾಂಗ್ರೆಸ್ ನ ಪ್ರಭಾವಿ ನಾಯಕರಾದ ಜೈರಾಮ್ ರಮೇಶ್ (Jairam Ramesh) ಹಾಗೂ ಪವನ್ ಖೇರಾ (Pawan Khera) Opposition in Lok Sabha ರಾಹುಲ್ ಗಾಂಧಿ (Rahul Gandhi) ಅವರಿಗೆ ನೀಡಿರೋ ಎರಡು ರಿಪೋರ್ಟ್ ಬಂಡೆಗೆ ಪಟ್ಟಾಭಿಷೇಕದ ಮುನ್ಸೂಚನೆ ನೀಡಿವೆ ಎಂದೇ ದೆಹಲಿ ವಲಯದಲ್ಲಿ ಸದ್ದು ಮಾಡುತ್ತಿದೆ.

ದೆಹಲಿ ಭೇಟಿ ವೇಳೆ ಸೋನಿಯಾ ಗಾಂಧಿ ಡಿಕೆ ಶಿವಕುಮಾರ್ ಅವರಿಗೆ ಮಹತ್ವದ ಸಂದೇಶದೊಂದಿಗೆ ಅಭಯ ನೀಡಿದ್ದಾರೆ ಅನ್ನೋ ಸುದ್ದಿ ಕೇಳಿಯೇ ಸಿದ್ದರಾಮಯ್ಯ ಬಣ ಅಚ್ಚರಿಕೊಂಡಿದೆ. 10 ನಿಮಿಷಗಳ ಮಹತ್ವದ ಮೀಟಿಂಗ್ ನಲ್ಲಿ ಸೋನಿಯಾ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ನ್ಯಾಷನಲ್ ಹೆರಾಲ್ಡ್ ಕೇಸ್ ಜೊತೆ ಅಧಿಕಾರ ಹಂಚಿಕೆಯ ಚರ್ಚೆಯೂ ನಡೆದಿದೆ ಎನ್ನಲಾಗುತ್ತಿದೆ. ರಾಹುಲ್ ಗಾಂಧಿಯನ್ನೇ ನೆಚ್ಚಿಕೊಂಡಿರೋ ಸಿದ್ದರಾಮಯ್ಯ ಟೀಮ್ ಜರ್ಮನಿ ಪ್ರವಾಸಕ್ಕೂ ಮುನ್ನ ರಾಹುಲ್ ಗಾಂಧಿ ನಾಯಕತ್ವದ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಇಡಲಿದ್ದಾರೆ. ಇದೇ ಸಂಗತಿ ಸಿದ್ದರಾಮಯ್ಯ ಬಣದಲ್ಲೂ ಮಹತ್ವದ ಪ್ಲಾನುಗಳನ್ನು ರೂಪಿಸಿಕೊಳ್ಳೋ ತವಕದಲ್ಲೇ ಕೌಂಟರ್ ಅಟ್ಯಾಕ್ ಸ್ಕೆಚ್ ಸಿದ್ಧಪಡಿಸುತ್ತಿದೆ. ಆದರೇ, ತಟಸ್ಥವಾಗಿ ಉಳಿದಿರೋ ಶಾಸಕರು ಹಾಗೂ ಅವರೊಂದಿಗೆ ನಿಂತಿರೋ ಎಐಸಿಸಿ ಸಾರಥಿ Mallikarjun Kharge ಎಲ್ಲವನ್ನೂ ಸುಮ್ಮನೆ ನೋಡುತ್ತಿದ್ದಾರೆ. ಆದರೇ, ಡಿಕೆ ಬಣವಂತೂ ಡೇಟ್ ಫಿಕ್ಸ್ ಆಗಿದೆ ಅನ್ನೋ ಹೊಸ ಗ್ಯಾರಂಟಿಯೊಂದಿಗೆ ಒಳಗೊಳಗೇ ಸಂಭ್ರಮಿಸುತ್ತಿದೆ.

⦁ ಗುಪ್ತ್ ಕುಮಾರ್

About The Author