ದೆಹಲಿಯ ಘಾಜಿಪುರ್‌ನಲ್ಲಿ ಆರ್‌ಡಿಎಕ್ಸ್ನಿಂದ ಪ್ಯಾಕ್ ಮಾಡಲಾದ ಸ್ಫೋಟಕ ಸಾಧನ ಪತ್ತೆಯಾಗಿತ್ತು. ಈ ಬಗ್ಗೆ ತನಿಕೆ ನಡೆಸಿದ ಪೊಲೀಸ್ ಅಧಿಕಾರಿಗಳು ಮತ್ತು ಗುಪ್ತಚರ ಇಲಾಖೆ ಮಾಹಿತಿಯೊಂದನ್ನು ನೀಡಿದೆ.
ಪಾಕಿಸ್ತಾನಿ ಸಂಘಟನೆಗಳು ಭೂ ಮತ್ತು ಸಮುದ್ರ ಮಾರ್ಗಗಳನ್ನು ಬಳಸಿಕೊಳ್ಳುತ್ತವೆ, ಅದರಲ್ಲೂ ಮಾದಕ ದ್ರವ್ಯಗಳು ಸಾಗಣೆಯಾಗುವ ಮಾರ್ಗದಲ್ಲಿಯೇ ಇವುಗಳನ್ನು ಪಾಕಿಸ್ತಾನದಿಂದ ಭಾರತಕ್ಕೆ ಕಳುಹಿಸಲಾಗುತ್ತದೆ ಎಂದು ಹೇಳಿದೆ.
ಘಾಜಿಪುರದಲ್ಲಿ ಪತ್ತೆಯಾದ ಐಇಡಿ ರಿಮೋಟ್ ನಿಯಂತ್ರಿತ ಟೈಮರ್ ಇತ್ತು. 8 ನಿಮಿಷದ ನಂತರ ಸ್ಫೋಟಿಸುವಂತೆ ಫಿಕ್ಸ್ ಮಾಡಲಾಗಿತ್ತು. ಎಂದಿದ್ದಾರೆ, ಇದರಂತೆಯೇ ಭಾರತಕ್ಕೆ ಅಪಾರ ಪ್ರಮಾಣದಲ್ಲಿ ಬಾಂಬ್ ಐಇಡಿ, ಗ್ರೆನೀಡ್‌ಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಎಂಬ ಮಾಹಿತಿ ಲಭ್ಯವಾಗಿದೆ. ಅಫ್ಘಾನಿಸ್ತಾನದಿಂದ ಹೆರಾಯಿನ್ ಮತ್ತು ಅಫೀಮುಗಳಂತ ಡ್ರಗ್‌ಗಳನ್ನು ಕಳ್ಳಸಾಗಣೆ ಮಾಡುವ ಮಾರ್ಗದಲ್ಲೇ ಈ ಐಇಡಿಯಂಥ ಸ್ಫೋಟಕಗಳನ್ನು ಸಾಗಿಸುವ ಕೆಲಸವಾಗುತ್ತಿದೆ. ಎಂದಿದ್ದಾರೆ.
ಡ್ರಗ್ಸ್ ಸ್ಮಗ್ಲಿಂಗ್ ಮಾರ್ಗದಲ್ಲೇ ಸ್ಫೋಟಕಗಳ ಸಾಗಣೆ ;ಗುಪ್ತಚರ ಇಲಾಕೆಯಿಂದ ಮಾಹಿತಿ
- Advertisement -
- Advertisement -