- Advertisement -
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ದಂಧೆ ಪ್ರಕರಣ ದಿನಕ್ಕೊಂದು ಸ್ಟಾರ್ ಕಲಾವಿದರ ಮುಖವಾಡ ಕಳಿಚ್ತಾ ಇದೆ. ಪ್ರಕರಣ ಕೈಗೆತ್ತಿಕ್ಕೊಂಡಿರೋ ಸಿಸಿಬಿ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದೆ. ಇತ್ತ ಸಿಎಂ ಯಡಿಯೂರಪ್ಪ ಸಹ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಗ್ಯಾರೆಂಟಿ ಅಂತಾ ವಾರ್ನಿಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ದಂಧೆ ಪ್ರಕರಣವನ್ನ ಸಿಸಿಬಿ ಸಮರ್ಥವಾಗಿ ನಿಭಾಯಿಸುತ್ತಿದೆ. ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗೋ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಡ್ರಗ್ ದಂಧೆ ತಡೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಅಲ್ಲದೇ ಯುವಜನತೆ ಈ ದಂಧೆಗೆ ಬಲಿಯಾಗದಂತೆ ತಡೆಯುವ ಸಲುವಾಗಿ ಕಾಲೇಜು ಮಟ್ಟದಲ್ಲೇ ಜಾಗೃತಿ ಮೂಡಿಸೋ ಕಾರ್ಯ ಮಾಡ್ತೇವೆ ಅಂತಾ ಹೇಳಿದ್ರು.
- Advertisement -