ಹಾಸನ : ಕಪ್ಪುತಲೆ ಹುಳು ಬಾಧೆಯಿಂದ ಕಂಗೆಟ್ಟಿದ್ದ ತೆಂಗು ಬೆಳೆಗಾರರ ನೆರವಿಗೆ, ತೋಟಗಾರಿಕಾ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ತೆಂಗು ಬೆಳೆಯನ್ನು ಕಾಡುತ್ತಿರುವ, ಕಪ್ಪುತಲೆ ಹುಳು ಬಾಧೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ತಿದೆ. ಈ ನಿಟ್ಟಿನಲ್ಲಿ 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ, ತೆಂಗು ಬೆಳೆ ಸಮೀಕ್ಷೆ ಮಾಡಲಾಗ್ತಿದೆ.
ಖಾಸಗಿ ಸಂಸ್ಥೆಗಳ ಮೂಲಕ ಬೆಳೆ ಸಮೀಕ್ಷೆಗೆ ನಿರ್ಧರಿಸಿದ್ದು, ಇದಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗ್ತಿದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ, 25 ಲಕ್ಷ ರೂ. ಅನುದಾನ ಬಳಕೆಗೆ ಚಿಂತಿಸಿದೆ.
ಕಪ್ಪುತಲೆ ಹುಳು ಬಾಧೆಯಿಂದ, ತೆಂಗಿನ ಮರಗಳು ನಾಶವಾಗ್ತಿವೆ. ತುರ್ತುಗಮನ ಹರಿಸುವಂತೆ ರೈತರು ಆಗ್ರಹಿಸಿದ್ರು. ಜನಪ್ರತಿನಿಧಿಗಳು ಕೂಡ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ರು. ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ, ಅಧ್ಯಯನ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ ಪರಿಹಾರ ಕ್ರಮಗಳ ಕುರಿತು ಪ್ರಸ್ತಾವನೆ ಸಲ್ಲಿಸಲು ಆದೇಶಿಸಿದ್ದಾರೆ. ಹೀಗಾಗಿ ತೋಟಗಾರಿಕಾ ಇಲಾಖೆ ಸಮೀಕ್ಷಾ ಪ್ರಕ್ರಿಯೆ ಕೈಗೊಂಡಿದೆ. ಮತ್ತು ಸಸ್ಯ ಸಂರಕ್ಷಣಾ ಕ್ರಮಗಳ ಕುರಿತು, ತಜ್ಷರ ಅಭಿಪ್ರಾಯ ಪಡೆಯಲಾಗ್ತಿದೆ.
ರಾಜ್ಯದ 7.04 ಲಕ್ಷ ಹೆಕ್ಟೇರ್ ತೆಂಗಿನ ಪ್ರದೇಶದ ಪೈಕಿ, 42 ಸಾವಿರ ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದೆ. ಈಗಾಗಲೇ ತೋಟಗಾರಿಕಾ ನಿರ್ದೇಶನಾಲಯವು, ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಕಪ್ಪುತಲೆ ಹುಳು ರೋಗ ಬಾಧೆ ಉಲ್ಬಣಿಸದಂತೆ, ಕ್ರಮಕ್ಕೆ ತೋಟಗಾರಿಕಾ ಇಲಾಖೆ ಮುಂದಾಗಿದೆ.