Sunday, September 8, 2024

Latest Posts

ನವಂಬರ್ ನಲ್ಲಿ ಭರ್ಜರಿ ಹುಡ್ಗನ ಅದ್ಧೂರಿ ಕಲ್ಯಾಣ..! ಧ್ರುವ ಮದುವೆಗೆ ಯಾರೆಲ್ಲಾ ಬರ್ತಾರೆ ಗೊತ್ತಾ.?

- Advertisement -

ಧ್ರುವ ಸರ್ಜಾ ಅಭಿಮಾನಿಗಳು ಸದ್ಯ ಪೊಗರು ಸಿನಿಮಾ ನೋಡೋದಿಕ್ಕೆ ಫುಲ್ ಎಕ್ಸೈಟ್ ಆಗಿದ್ದಾರೆ. ಇದರ ನಡುವೆಯೇ ಅದ್ಧೂರಿ ಹುಡ್ಗ ಸ್ವೀಟ್ ನ್ಯೂಸ್ ವೊಂದು ಕೊಟ್ಟಿದ್ದಾರೆ. ಪ್ರೇರಣಾ ಜೊತೆ ಭರ್ಜರಿಯಾಗಿ ಎಂಗೇಜ್ ಮಾಡಿಕೊಂಡಿರೋ ಆ್ಯಕ್ಷನ್ ಪ್ರಿನ್ಸ್ ಗೆ ಎಲ್ಲೆಡೆಯಿಂದ ಕೇಳಿ ಬರ್ತಿರೋದು ಅದೊಂದೇ ಒಂದು ಪ್ರಶ್ನೆ. ಧ್ರುವ ನಿಮ್ಮ ಮದುವೆ ಯಾವಾಗಾ? ಅಂತಾ ಹೋದಲ್ಲಿ ಬಂದಲ್ಲಿ ಧ್ರುವಗೆ ಇದೇ ಪ್ರಶ್ನೆ.

ಸದ್ಯ ಧ್ರುವ ಸರ್ಜಾ ಪೊಗರು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗ್ಲೇ 80 ರಷ್ಟು ಪೊಗರು ಶೂಟಿಂಗ್ ಕಂಪ್ಲೀಟ್ ಆಗಿದೆ. ಸದ್ಯದಲ್ಲಿಯೇ ಶೂಟಿಂಗ್ ಮುಗಿಸಿಕೊಂಡು ಮದುವೆಗೆ ತಯಾರಗಲಿದ್ದಾರಂತೆ ಆ್ಯಕ್ಷನ್ ಪ್ರಿನ್ಸ್.

ಈಗಾಗ್ಲೇ ಧ್ರುವ ಹಾಗೂ ಪ್ರೇರಣಾ ಮನೆಯಲ್ಲಿ ಮದುವೆ ಪ್ರಿಪರೇಷನ್ ನಡೆಯುತಿದ್ದು, ಬಟ್ಟೆ ಖರೀದಿಯಲ್ಲೇ ಜೋರಾಗಿ ನಡೆಯುತಿದೆಯಂತೆ. ನಿಶ್ಚಿತಾರ್ಥದಷ್ಟೇ ವಿವಾಹ ಕೂಡ ಗ್ರ್ಯಾಂಡ್ ಆಗಿ ನೇರವೇರಲಿದೆಯಂತೆ. ಅಲ್ಲದೇ ಹಸುಗಳ ಮಧ್ಯೆ ಧ್ರುವಾ ಸರ್ಜಾ ಮದುವೆ ‌ನಡೆಯಲಿದೆಯಂತೆ. ಅದು ಸರ್ಜಾರ ಮೈಸೂರು ಫಾರ್ಮ್ ಹೌಸ್ ನಲ್ಲಿ ಇಲ್ಲ ಬೆಂಗಳೂರಿನಲ್ಲಿ ಧ್ರುವಾ ಮದುವೆ ನಡೆಯಲಿದೆಯಂತೆ. ನವಂಬರ್ 23 ಹಾಗೂ 24ಕ್ಕೆ ಪೊಗರು ಹುಡ್ಗನ ಕಲ್ಯಾಣ ನಡೆಯಲಿದ್ದು, ಈ ಅದ್ಧೂರಿ ಕಲ್ಯಾಣೋತ್ಸವಕ್ಕೆ ಸ್ಯಾಂಡಲ್ ವುಡ್, ಟಾಲಿವುಡ್ ಹಾಗೂ ಕಾಲಿವುಡ್ ಇಂಡಸ್ಟ್ರೀ ಸೆಲೆಬ್ರೆಟಿಗಳು ಆಗಮಿಸಲಿದ್ದಾರೆ.

- Advertisement -

Latest Posts

Don't Miss