ಬೆಂಗಳೂರು: ಶ್ರೀಲಂಕಾದ ಆತ್ಮಾಹುತಿ ಉಗ್ರರ ಅಟ್ಟಹಾಸದ ಬಳಿಕ ಇದೀಗ ಸಿಲಿಕಾನ್ ಸಿಟಿಯಲ್ಲೂ ಹಬ್ತಿದೆ ಗಾಳಿಸುದ್ದಿ. ನಾಲ್ವರು ಉಗ್ರರು ಬೆಂಗಳೂರಿನಲ್ಲಿದ್ದಾರೆ ಅನ್ನೋ ಗಾಳಿಸುದ್ದಿ ನಗರದ ಜನತೆಯನ್ನು ಕಂಗಾಲು ಮಾಡಿತ್ತು.
ಸಾಮಾಜಿಕ ಜಾಲತಾಣದಲ್ಲಿ ಮೂವರು ಯುವಕರು ಹಾಗೂ ಇಬ್ಬರು ಮಹಿಳೆಯರ ಫೋಟೋ ಲಗತ್ತಿಸಿ ಟೆರರಿಸ್ಟ್ ಅಂತ ಬರೆಯಲಾಗಿತ್ತು. ಅಲ್ಲದೆ ಈ ಐವರೂ ವೈಟ್ ಫೀಲ್ಡ್ ಮತ್ತು ಬೆಳ್ಳಂದೂರಿನಲ್ಲಿ ವಾಸವಿರೋದಾಗಿ ಕಿಡಿಗೇಡಿಳು ಬರೆದುಕೊಂಡಿದ್ರು. ಹಾಗೆ ಇನ್ನು ದಿನಗಳಲ್ಲಿ ಸ್ಫೋಟಕ್ಕೆ ಸಂಚುಮಾಡಿದ್ದಾರೆ ಅಂತ ಪೋಸ್ಟ್ ಮಾಡಿದ್ರು. ಇದು ರಾಜ್ಯದ ಜನತೆಯಲ್ಲಿ ತಲ್ಲಣ ಮೂಡಿಸಿತ್ತು. ಆದ್ರೆ ಇದೀಗ ಇದಕ್ಕೆ ಬೆಂಗಳೂರು ಪೊಲೀಸರು ಫುಲ್ ಸ್ಟಾಪ್ ಹಾಕಿದ್ದಾರೆ. ಇದು ಗಾಳಿ ಸುದ್ದಿ, ಸಾರ್ವಜನಿಕರು ಹೆದರುವ ಅವಶ್ಯಕತೆಯಿಲ್ಲ ಅಂತ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಸಿಲಿಕಾನ್ ಸಿಟಿ ಜನ ಈ ಗಾಳಿ ಸುದ್ದಿಗೆ ಹೆದರೋ ಅವಶ್ಯಕತೆಯಿಲ್ಲ, ಇಲ್ಲಿಗೆ ಉಗ್ರರ ನುಸುಳಿರೋ ಸುದ್ದಿ ಸುಳ್ಳು ಇಂತಹ ವದಂತಿಗಳಿಗೆ ಕಿವಿಗೊಡಬೇಡಿ ಅಂತ ಅಭಯ ನೀಡಿದ್ದಾರೆ.