ರಾತ್ರಿ 9 ಗಂಟೆಯವರೆಗೂ ದೊರೆಯಲಿದೆ ಅಂಛೆ ಸೌಲಭ್ಯ

ಬೆಂಗಳೂರು ಸಂಜೆ ಅಂಚೆ ಕಛೇರಿ

ಅಂಚೆ ಕಛೇರಿಗಳಲ್ಲಿ ಸಾರ್ವಜನಿಕರಿಗೆ  ಹೆಚ್ಚಿನ ಮತ್ತು ಉತ್ತಮ ಸೌಲಭ್ಯ ಒದಗಿಸಲು  ಬೆಂಗಳೂರಿನ ಎಂಜಿ ರೋಡ್ ನಲ್ಲಿ  ಇರುವ ಅಂಛೆ ಕಛೇರಿಯಲ್ಲಿ  ವಾರದಲ್ಲಿ ಆರು ದಿನವೂ ಮಧ್ಯಾನ ಒಂದು ಘಂಟೆಯಿಂದ ರಾತ್ರಿ ಒಂಬತ್ತು ಘಂಟೆಯ ವರೆಗೂ ತೆರೆಯಲಾಗುತ್ತದೆ. ಕೌಂಟರ್ ಮುಚ್ಚುವ ಸಮಯ 3.30 ವರೆಗೆ ಇದೆ. ನಂತರ 9 ಗಂಟೆಯವರೆಗೂ ಹಿರಿಯ ನಾಗರೀಕರಿಗಾಗಿಯೇ ಮೀಸಲಿರುತ್ತದೆ.

ಉತ್ತಮ ಸೌಲಭ್ಯ ಒದಲಿಸಲು ಸ್ಪೀಡ್ ಪೋಸ್ಟ್, ಸ್ಪೀಡ್ ಪಾರ್ಸಲ್, ಆಧಾರ್ ಕಾರ್ಡ್ ಸೇವೆ, ಫೋಟೋ ಕಾರ್ಡ್ ಸೇವೆ, ಹಾಗೂ ಇನ್ನಿತರ ಸೌಲಭ್ಯಗಳನ್ನು  ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಒದಗಿಸಲು ತ್ವರಿತವಾಗಿ ಜನರಿಗೆ ಅನೂಕೂಲವಾಗುವ ರೀತಿಯಲ್ಲಿ  ಸೇವೆ ಒದಗಿಸಲು ಅಂಚೆಕಛೇರಿ ಮುಂದಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹಲವಾರು  ಸಂಜೆ ಅಂಚೆ ತೆರಯುವ ಗುರಿ ಹೊಂದಿದ್ದೇವೆ ಎಂದು ಅಂಚೆ ಸಹಾಯಕರಾದ ವಿನಯ್ ಶ್ರೇಯಸ್ ಹೇಳಿದರು.

ಮೂರು ರಾಜ್ಯಗಳ ಚುನಾವಣೆಗೆ ಡೇಟ್ ಫಿಕ್ಸ್!

ವಿಯೆಟ್ನಾಂ ಅಧ್ಯಕ್ಷ ರಾಜೀನಾಮೆ..!

ಪುಟ್ಟ ಹುಡುಗಿಯ ಮಸ್ತ್ ಮಸ್ತ್ ಡ್ಯಾನ್ಸ್ !

About The Author