ವನಂಗಾನ್ ಚಿತ್ರದಿಂದ ನಟ ಸೂರ್ಯ ಔಟ್.. ನಿರ್ದೇಶಕ ಬಾಲ ಹೇಳಿದ್ದೇನು??
ಎರಡು ದಶಕಗಳ ನಂತರ ವನಂಗಾನ್ ಚಿತ್ರದ ಮೂಲಕ ನಟ ಸೂರ್ಯ ಹಾಗೂ ನಿರ್ದೇಶಕ ಬಾಲ ಜೋಡಿ ಒಂದಾಗ ಬೇಕಿತ್ತು..
ಕಥೆ ಇಷ್ಟವಿಲ್ಲ ಎಂದು ಸೂರ್ಯ ಹೊರ ನಡೆದಿಲ್ಲ, ಗೆಳೆಯ ಸೂರ್ಯನಿಗೆ ಈ ಕಥೆ ಸೂಕ್ತವಲ್ಲ ಎಂದು ಸ್ವತಃ ಬಾಲಾ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.ವನಂಗಾನ್ ಚಿತ್ರವನ್ನು ನನ್ನ ಪುಟ್ಟ ಸಹೋದರ ಸೂರ್ಯನಿಗೆ ನಿರ್ದೇಶನ ಮಾಡಬೇಕು ಅನ್ನೋ ಮನಸ್ಸು ಇತ್ತು. ಆದರೆ ಕಥೆಯಲ್ಲಿ ಕೊಂಚ ಬದಲಾವಣೆಗಳು ಆಗಿರುವ ಕಾರಣ ಈ ಕಥೆ ಸೂರ್ಯನಿ ಸೂಟ್ ಆಗುತ್ತಾ ಇಲ್ವೋ ಅನ್ನೋ ಯೋಚನೆ ನನಗೆ ಶುರುವಾಗಿತ್ತು, ಅವರಿಗೆ ಇಷ್ಟ ಆಗುವ ಕಥೆ ತಯಾರಿ ಮಾಡುವೆ. ಸೂರ್ಯ ಅವರಿಗೆ ನನ್ನ ಮೇಲೆ ಸಂಪೂರ್ಣ ನಂಬಿಕೆ ಇದೆ,ಮುಂಬರುವ ದಿನಗಳಲ್ಲಿ ಸೂರ್ಯ ಅವರ ಜೊತೆ ನಾನು ಕೆಲಸ ಮಾಡಲು ಇಷ್ಟ ಪಡುವೆ. ‘ನಂದಾ ಸಿನಿಮಾದಲ್ಲಿ ನಾನು ನೋಡಿದ ಸೂರ್ಯ ಅವರಿಗೂ ಪಿತಾಮಗನ್ ಸಿನಿಮಾದಲ್ಲಿ ನಟಿಸಿರುವ ಸೂರ್ಯ ಅವರಿಗೂ ಏನೂ ಬದಲಾಗಿಲ್ಲ.
ಮೇ ತಿಂಗಳಿನಲ್ಲಿ ಬಾಲಾ ಮತ್ತು ಸೂರ್ಯ ಒಟ್ಟಿಗೆ ಸೇರಿ ವನಂಗಾನ್ ಹೆಸರಿನ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಆರಂಭವಾಗಿತ್ತು.