ಕಲಬುರಗಿ: ಶರಣಬಸಪ್ಪ ಅಪ್ಪರ ನಾಡು ಕಲಬುರಗಿ, ಮಹಾಶಿವರಾತ್ರಿ (Mahashivaratri) ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ವಿವಿಯ ಅಮೃತ ಸರೋವರ ಆವರಣದಲ್ಲಿ ಈ ಬಾರಿಯೂ ಆಕರ್ಷಕ ಬೃಹತ್ ಶಿವಲಿಂಗವು ದರ್ಶನಕ್ಕೆ ಸಿದ್ಧವಾಗಿದೆ. ಕಲಬುರಗಿಯ ಬ್ರಹ್ಮಕುಮಾರಿ ಆಶ್ರಮ ಸಾರ್ವಜನಿಕರನ್ನು ಆಧ್ಯಾತ್ಮದ ಕಡೆಗೆ ಸೆಳೆಯಲು ಪ್ರತಿವರ್ಷ ಮಹಾಶಿವರಾತ್ರಿಯಂದು ವಿಭಿನ್ನ ಹಾಗೂ ವಿಷೇಶವಾಗಿ ಆಚರಿಸುತ್ತ ಬಂದಿದೆ. ಅದರಂತೆ ಈ ಬಾರಿಯು ಶೇಂಗಾದಿಂದ ಬೃಹತ್ ಶಿವಲಿಂಗವನ್ನು ತಯಾರಿಸುವ ಮೂಲಕ ಗಮನ ಸೆಳೆದಿದೆ.ಈ ಹಿಂದೆ ತೆಂಗಿನಕಾಯಿ, ತೂಗರಿ, ಮುತ್ತು, ಅಡಿಕೆ ಹೀಗೆ ನಾನಾ ರೀತಿಯ ಶಿವಲಿಂಗ ನಿರ್ಮಾಣ ಮಾಡುವ ಮುಖಾಂತರ ಆಶ್ರಮ ಮನೆಮಾತಾಗಿದೆ. ಈ ಬಾರಿಯೂ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವತಯಾರಿಸಲಾದ 25 ಅಡಿ ಎತ್ತರದ ಕಂಗೊಳಿಸುತ್ತಿರುವ ಶಿವಲಿಂಗ ನೋಡುಗರ ಭಕ್ತಿಭಾವ ಉಕ್ಕಿಸುವಂತಿದೆ.ಇನ್ನು ಈ ಶಿವಲಿಂಗದವನ್ನು ತಯಾರು ಮಾಡುವುದಕ್ಕೆ ಬರೋಬ್ಬರಿ 8 ಕ್ವಿಂಟಾಲ್ ಶೇಂಗಾ ಕಾಳುಗಳನ್ನು ಬಳೆಸಲಾಗಿದೆ.
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?