Tuesday, July 1, 2025

Latest Posts

BENGALURU : ಬೋರ್‌ ಫೇಲಾಯ್ತಾ? ಮುಚ್ಚದಿದ್ರೆ, 1 ವರ್ಷ ಜೈಲು

- Advertisement -

ಇನ್ಮಂದೆ ತೆರೆದ ಹಾಗೂ ವಿಫಲ ಕೊಳವೆ ಬಾವಿಗಳನ್ನು ಮುಚ್ಚದೆ ಇದ್ದಲ್ಲಿ ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವುದು ನಿಶ್ಚಿತವಾಗಿದೆ. ತಪ್ಪಿತಸ್ಥರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರು. ದಂಡ ವಿಧಿಸಬಹುದಾದ ಕರ್ನಾಟಕ ಅಂತರ್ಜಲ ತಿದ್ದುಪಡಿ ವಿಧೇಯಕ 2024ಕ್ಕೆ ಮಂಗಳವಾರ ವಿಧಾನ ಪರಿಷತ್‌ನಲ್ಲೂ ಅಂಗೀಕಾರ ದೊರೆಯಿತು.

ಸೋಮವಾರವಷ್ಟೇ ವಿಧಾನಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿತ್ತು. ಮಂಗಳವಾರ ಮೇಲ್ಮನೆಯಲ್ಲಿ ಸಭಾ ನಾಯಕರೂ ಆದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದರು.

ಪಕ್ಷಾತೀತವಾಗಿ ಹಲವು ಸದಸ್ಯರು ಪರ್ಯಾಲೋಚನೆಯಲ್ಲಿ ಪಾಲ್ಗೊಂಡು ವಿಧೇಯಕದಲ್ಲಿ ರೈತರಿಗೆ ಮಾರಕವಾ ಗುವ ಕೆಲ ಅಂಶಗಳಿದ್ದು ಅವುಗಳನ್ನು ಕೈಬಿಡುವಂತೆ ಸರ್ಕಾ ರಕ್ಕೆ ಸಲಹೆ ನೀಡಿದರು. ಸದಸ್ಯರ ಅಭಿಪ್ರಾಯ ಸಲಹೆ ಗಳನ್ನು ನಿಯಮ ರೂಪಿಸುವಲ್ಲಿ ಪರಿಗಣಿಸುವುದಾಗಿ ಸಚಿವರು ಭರವಸೆ ನೀಡಿದರು.

 

ಬಳಿಕ ಸಭಾಪತಿ ಪೀಠದಲ್ಲಿದ್ದ ಪ್ರಾಣೇಶ್ ಅವರು ಧ್ವನಿಮತದ ಮೂಲಕ ವಿಧೇಯಕಕ್ಕೆ ಅನುಮೋದನೆ ಪಡೆದರು. ಪರ್ಯಾಲೋಚನೆ ವೇಳೆ ಮಾತನಾಡಿದ ಬಿಜೆಪಿ ಸದಸ್ಯರಾದ ಗೋವಿಂದರಾಜು, ನವೀನ್, ಡಾ.ಧನಂಜಯ ಸರ್ಜಿ, ಪ್ರತಿಪಕ್ಷನಾಯಕ ಛಲವಾದಿನಾರಾಯಣಸ್ವಾಮಿ, ಕಾಂಗ್ರೆಸ್‌ನ ಐವನ್ ಡಿಸೋಜ, ಉಮಾಶ್ರೀ ಮತ್ತಿತರರು, ತೆರೆದ ಕೊಳವೆ ಬಾವಿ ಮುಚ್ಚುವ ಹಾಗೂ ಒಂದು ವೇಳೆ ಮುಚ್ಚದೆ ಯಾವುದಾದರೂ ಸಾವು ನೋವಿನ ಅವಘಡ ಗಳು ಸಂಭವಿಸಿದರೆ ಅದಕ್ಕೆ ರೈತರನ್ನು ನೇರ ಹೊಣೆಗಾರ ರನ್ನಾಗಿ ಮಾಡಬಾರದು. ಬೋರ್ವೆಲ್ ಏಜೆನ್ಸಿಯವರನ್ನು ತಪ್ಪಿತಸ್ಥರನ್ನಾಗಿ ಮಾಡಬೇಕು. ಇಲ್ಲದೆ ಹೋದರೆ ಇದು ರೈತರಿಗೆ ಸಮಸ್ಯೆಯಾಗುತ್ತದೆ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಬೋಸರಾಜು ಅವರು, ಸದಸ್ಯರ ಅಭಿಪ್ರಾಯ ಹಾಗೂ ಸಲಹೆಗಳನ್ನು ವಿಧೇಯಕ ಅನುಷ್ಠಾನಕ್ಕೆ ನಿಯಮ ರೂಪಿಸುವಾಗ ಪರಿಗಣಿಸಲಾಗುವುದು ಅಂತ ಭರವಸೆ ನೀಡಿದರು.

ಕೊಳವೆ ಬಾವಿ ಕೊರೆಯಲು ಇಚ್ಛಿಸುವವರು ಸಂಬಂ ಧಪಟ್ಟ ಸ್ಥಳೀಯ ಪ್ರಾಧಿಕಾರಗಳಿಗೆ 15 ದಿನ ಮುಂ ಚಿತವಾಗಿ ಮಾಹಿತಿ ನೀಡಬೇಕು. ಡ್ರಿಲ್ಲಿಂಗ್ ಏಜೆನ್ಸಿ ಮತ್ತು ಇಂಪ್ಲಿಮೆಂಟಿಂಗ್ ಏಜೆನ್ಸಿಗಳು ಕೊಳವೆ ಬಾವಿಗಳನ್ನು ಸ್ಟೀಲ್ ಕ್ಯಾಪ್ ಹಾಕಿ ನಟ್ ಬೋಲ್ಟ್ ಗಳಿಂದ ಮುಚ್ಚಬೇಕು, ಕೊಳವೆ ಬಾವಿ ಕೊರೆದ 24 ಗಂಟೆಯೊಳಗೆ ಮುಚ್ಚಿರುವ ಬಗ್ಗೆ ಫೋಟೋ ತೆಗೆದು ಸುರಕ್ಷಿತವಾಗಿ ಮುಚ್ಚಿರುವುದನ್ನು ಸ್ಥಳೀಯ ಅಧಿಕಾರಿಗಳು ತಪಾಸಣೆ ಮಾಡಿ ದೃಢೀಕರಿಸಬೇಕು. ಈ ಬಗ್ಗೆ ಜಂಟಿ ಘೋಷಣೆಯನ್ನು ಸ್ಥಳೀಯ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ವಿಫಲ ಕೊಳವೆ ಬಾವಿಯನ್ನು ಕೆಸರು ಮಣ್ಣು, ಕಲ್ಲುಗಳಿಂದ ಮುಚ್ಚಿ, ಮುಳ್ಳುಗಳನ್ನು ಹಾಕಬೇಕು, 22 ಅಳತೆಯ ದಿಬ್ಬವನ್ನು ನಿರ್ಮಿಸಿ ಬೇಲಿ ಹಾಕಬೇಕು ಎಂಬ ನಿಯಮಗಳಿವೆ.

- Advertisement -

Latest Posts

Don't Miss