National News:
ಜೈಪುರದಲ್ಲಿ ಬಾಲ್ಯವಿವಾವಾದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹಳ್ಳಿಯ ಸಂಪ್ರದಾಯದಂತೆ ರೇಖಾ ಎನ್ನುವ ಹುಡುಗಿ ಒಂದು ವರ್ಷ ವಯಸ್ಸಿದ್ದಾಗಲೆ ಆಕೆಗೆ ವಿವಾಹ ಮಾಡಿದ್ದಾರೆ. ಆಕೆ ಪ್ರೌಢಾವಸ್ಥೆಗೆ ಬಂದ ನಂತರ ಈ ಮದುವೆ ಮುರಿದು ಬಿದ್ದಿದೆ.
ರೇಖಾಳ ಅಜ್ಜ 2002ರಲ್ಲಿ ನಿಧನ ಹೊಂದಿದ್ದರು. ಆಗಿನ್ನು ರೇಖಾಳಿಗೆ ಕೇವಲ ಒಂದು ರ‍್ಷ ವಯಸ್ಸಾಗಿತ್ತು. ಅದೇ ಸಂರ‍್ಭದಲ್ಲಿ ರೇಖಾಳನ್ನು ಅದೇ ಗ್ರಾಮದ ಹುಡುಗನ ಜೊತೆ ಮದುವೆ ಮಾಡಿಸಿದ್ದರು. ಇದಾದ ನಂತರ ಆಕೆಯನ್ನು ಅತ್ತೆಮನೆಗೆ ಕಳಿಸಿರಲಿಲ್ಲ. ಬದಲಾಗಿ ಯಾವುದೇ ತೊಂದರೆಯಿಲ್ಲದೇ ತನ್ನ ಮನೆಯಲ್ಲೇ ಆಟವಾಡಿಕೊಂಡು ಚೆನ್ನಾಗಿ ಓದಿಕೊಂಡಿದ್ದಳು. ಅಷ್ಟೇ ಅಲ್ಲದೇ ಆಕೆಯ ಅತ್ತೆ ಮನೆಯಿಂದ ಯಾವುದೇ ತೊಂದರೆಯೂ ಆಗಿರಲಿಲ್ಲ. ಆಕೆಗೆ 18 ತುಂಬಿದಾಗ ಆಕೆಯ ಅತ್ತೆಯ ಮನೆಯವರು ಧರ‍್ಮಿಕ ವಿಧಿ ವಿಧಾನದಂತೆ ಮನೆ ತುಂಬಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದರಿಂದಾಗಿ ರೇಖಾಗೆ ಸಾಧನೆ ಮಾಡಬೇಕು ಎಂಬ ಕನಸಿಗೆ ಧಕ್ಕೆ ಉಂಟಾಯಿತು. ಇದರಿಂದಾಗಿ ಆಕೆ ಹುಡುಗನ ಮನೆಗೆ ಹೋಗಲು ನಿರಾಕರಿಸಿದ್ದಳು. ಅಷ್ಟೇ ಅಲ್ಲದೇ ತನಗೆ ಒಂದು ರ‍್ಷ ಇದ್ದಾಗ ಮದುವೆ ಆಗಿತ್ತು. ಈ ಮದುವೆಯನ್ನು ನಾನು ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು ರೇಖಾ. ಮದುವೆ ವಿರೋಧಿಸಿದ್ದಕ್ಕೆ ಹುಡುಗನ ಮನೆಯವರು ಜಾತಿ ಪಂಚಾಯಿತಿಯನ್ನು ಕರೆದರು. ಅಷ್ಟೇ ಅಲ್ಲದೇ ಮದುವೆಯನ್ನು ನಿರಾಕರಿಸಿದ್ದಕ್ಕೆ 10 ಲಕ್ಷ ರೂ. ದಂಡವನ್ನು ಹಾಕಿ ಆಕೆಯ ಕುಟುಂಬಕ್ಕೆ ಬೆದರಿಕೆ ಒಡ್ಡಿದ್ದರು. ಈ ಘಟನೆಯ ಬಳಿಕ ರೇಖಾ ಸಹಾಯಕ್ಕಾಗಿ ಮ್ಯಾನೇಜಿಂಗ್ ಟ್ರಸ್ಟಿಯನ್ನು ಸಂಪರ್ಕಿಸಿದ್ದಾಳೆ.ಆಗ ಟ್ರಸ್ಟ್‌ನವರು ಬಾಲ್ಯವಿವಾಹ ರದ್ದುಗೊಳಿಸುವಂತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲಿ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಪ್ರದೀಪ್ ಕುಮಾರ್ ಮೋದಿ ಅವರು ಮದುವೆಯನ್ನು ರದ್ದುಗೊಳಿಸಿ ಎಂದು ಪ್ರಕಟಿಸಿದ್ದಾರೆ.
“ತಾಕತ್ತಿದ್ದರೆ ಬಿಜೆಪಿಯವರನ್ನು ತಡೆಯಿರಿ ನೋಡೋಣ” : ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ ಸವಾಲ್
ರೈಲು ಹಳಿಯಲ್ಲಿ ಸಿಲುಕಿದಾತ ಬದುಕಿ ಬಂದ…! ರೈಲ್ವೇ ನಿಲ್ದಾಣದಲ್ಲಿ ಹೀಗೊಂದು ಪವಾಡ…!