ಚಿನ್ನ ಅಂದ್ರೆ ಯಾರಿಗ ಯಾನೆ ಇಷ್ಟ ಆಗಲ್ಲಾ ಹೇಳಿ. ಅದರಲ್ಲಂತೂ ನಮ್ಮ ಹೆಣ್ಮಕ್ಕಳಿಗೆ ಚಿನ್ನದ ಮೇಲೆ ಮೋಹ ಹೆಚ್ಚು. ಈಗಂತೂ ಚಿನ್ನದ ದರ ಗಗನಕ್ಕೇರಿದೆ. ಆದ್ರೆ 1947ರ ಸ್ವಾತಂತ್ರ್ಯ ಸಮಯದಲ್ಲಿ ಚಿನ್ನಕ್ಕೆ ಬೇಡಿಕೆಯೇ ಇರಲಿಲ್ಲ. ಆಗಿನ ರೇಟ್ ಗೆ ಈಗ ಒಂದು ಚಾಕಲೇಟ್ ಸಿಗೋದು ಕೂಡ ಕಷ್ಟ.
ಹೌದು ನೀವು ಕೇಳ್ತಿರೋದು ಸತ್ಯ. 1947ರಲ್ಲಿ ಕೇವಲ ₹88.60 ಇದ್ದ 10 ಗ್ರಾಂ ಚಿನ್ನದ ಬೆಲೆ 2025ರಲ್ಲಿ ₹1,00,000 ದಾಟಿದೆ. ಹಣದುಬ್ಬರ, ಬೇಡಿಕೆ ಹೆಚ್ಚಳ, ಜಾಗತಿಕ ಅಸ್ಥಿರತೆಗಳು ಈ ಏರಿಕೆಗೆ ಕಾರಣ. ಕೋವಿಡ್ ನಂತರ ಚಿನ್ನದ ಬೆಲೆ ದ್ವಿಗುಣಗೊಂಡಿದೆ.
ಹಾಗಾದ್ರೆ 1947ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು? ಅನ್ನೋದನ್ನ ನೋಡೋದಾದ್ರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ, 10 ಗ್ರಾಂ ಶುದ್ಧ ಚಿನ್ನದ ದರ ಕೇವಲ ₹88.60 ಮಾತ್ರವಾಗಿತ್ತು. ಊಹೆ ಮಾಡ್ಕೊಳಿ ಆ ಸಮಯದಲ್ಲಿ ಚಿನ್ನ ಹೇಗಿತ್ತು ಅಂದ್ರೆ ಇಂದು ಸಿಗುವಂತಹ ಚಾಕೊಲೇಟ್ ಬೆಲೆಗೆ ಸಮಾನವಾಗಿತ್ತು. ಅಷ್ಟೆ ಅಲ್ಲ, ಆ ಕಾಲದಲ್ಲಿ ₹1,000ಗೆ ಸುಮಾರು 1.1 ಕೆ.ಜಿ ಚಿನ್ನವನ್ನು ಖರೀದಿಸಬಹುದಾಗಿತ್ತು. ಆದ್ರೆ ಇಂದು ಮನೆಗೆ ಬೇಕಾಗಿರುವಂತಹ ದಿನಸಿ ಸಾಮಗ್ರಿಗಳು ಕೂಡ ಖರೀದಿಸೋಕೆ ಆಗಲ್ಲ.
1947 ರಿಂದ 2025ರವರೆಗೆ ಚಿನ್ನದ ಬೆಲೆ ಏರಿಳಿತ ಕಂಡಿದೆ. ಹಾಗಾದ್ರೆ (10 ಗ್ರಾಂ ನ 24 ಕ್ಯಾರೆಟ್ ವರ್ಷದ ಚಿನ್ನದ ಬೆಲೆ ನೋಡೋದಾದ್ರೆ 1947 ರಲ್ಲಿ ₹88.62, 1964 ರಲ್ಲಿ ₹63.25, 1970 ರಲ್ಲಿ ₹184, 1975 ₹540, 1980 ರಲ್ಲಿ ₹1,330, 1985 ರಲ್ಲಿ ₹2,13, 1990 ರಲ್ಲಿ ₹3,200, 1995 ರಲ್ಲಿ ₹4,680, 2000 ರಲ್ಲಿ ₹4,400 ರೂಪಾಯಿ ಇತ್ತು. ಅದೇರೀತಿ 2005 ರಲ್ಲಿ ₹7,000, 2010 ರಲ್ಲಿ ₹18,500, 2015 ರಲ್ಲಿ ₹26,343, 2020 ರಲ್ಲಿ ₹48,651, 2021 ರಲ್ಲಿ ₹48,720, 2022 ರಲ್ಲಿ ₹52,670, 2023 ರಲ್ಲಿ ₹65,330, 2024 ರಲ್ಲಿ ₹77,913, 2025 ಅಂದ್ರೆ ಇಲ್ಲಿಯವರೆಗೂ ₹1,00,000 ಆಗಿದೆ.
ಆಶ್ಚರ್ಯಕರ ಸಂಗತಿಯೆಂದರೆ, ಸ್ವಾತಂತ್ರ್ಯದ ನಂತರ ತಕ್ಷಣ ಚಿನ್ನದ ಬೆಲೆ ಏರಿಕೆಯಾಗದೇ, ಪ್ರಾರಂಭಿಕ 17 ವರ್ಷಗಳ ಕಾಲ ಇಳಿಕೆಯಿಂದಲೇ ಕೂಡಿತ್ತು. 1947ರಲ್ಲಿ ₹88.60 ಇದ್ದ ದರ, 1964ರ ಹೊತ್ತಿಗೆ ₹63ಕ್ಕೆ ಇಳಿಯಿತು. ಆದರೆ 1967ರಿಂದ ಬಳಿಕ ಚಿನ್ನದ ದರ ₹100 ದಾಟಿ, ಮತ್ತೆ ಏರಿಕೆಯಾಗತೊಡಗಿತು.
₹88 ರೂಪಾಯಿ ಇದ್ದ ಚಿನ್ನದ ದರ ₹1 ಲಕ್ಷದವರೆಗೆ ಏರಿಕೆಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಈಗ 78 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ದೇಶದ ಆರ್ಥಿಕತೆಯ ಪ್ರಗತಿ ಮತ್ತು ಬದಲಾದ ಖರೀದಿ ಶಕ್ತಿ ಚಿನ್ನದ ಬೆಲೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಿಸಿದೆ. 2025ರ ಆಗಸ್ಟ್ ವೇಳೆಗೆ 24 ಕ್ಯಾರೆಟ್ ಶುದ್ಧ ಚಿನ್ನದ ದರ ₹1,00,023 ತಲುಪಿದ್ದು, ತಜ್ಞರ ಅಭಿಪ್ರಾಯದಂತೆ ಈ ವರ್ಷದ ಅಂತ್ಯದವರೆಗೆ ₹1,05,000 ದಾಟುವ ಸಾಧ್ಯತೆ ಇದೆ.