Saturday, July 5, 2025

Latest Posts

10 ವರ್ಷದ ಬಾಲಕನ ದಾರುಣ ಅಂತ್ಯ:ಬಾಲಕನ ಮೇಲೆ ಹರಿದ ಕಾರು

- Advertisement -

10 ವರ್ಷದ ಬಾಲಕನ ಮೇಲೆ ಕಾರು ಹರಿದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಪುಟ್ಟ ಬಾಲಕನ ದುರಂತದಿಂದ ಆ ಬಾಲಕನ ಕುಟುಂಬ ಮಾತ್ರವಲ್ಲ, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

10 ವರ್ಷದ ಅಗಸ್ತ್ಯ ಕನಮಡಿ ಎಂಬ ಬಾಲಕ ಶಾಲೆಯಿಂದ ಮನೆಗೆ ಹೋಗುತ್ತಿದ್ದ. ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಕಾರು ಅವನ ಮೇಲೆ ಹರಿದಿದೆ. ಬಾಲಕನಿಗೆ ಗಂಭೀರವಾಗಿ ಕಾರು ಬಡಿದ ಪರಿಣಾಮ, ಬಾಲಕನು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಈ ಘಟನೆ ನೋಡಿದವರು ಆಘಾತಕ್ಕೊಳಗಾದರು. ಜನರು ತಕ್ಷಣವೇ ಪೊಲೀಸ್ ಇಲಾಖೆ ಮತ್ತು ಆಂಬ್ಯುಲೆನ್ಸ್‌ಗೆ ಮಾಹಿತಿ ನೀಡಿದ್ದಾರೆ.

ಅಪಘಾತದ ನಂತರ, ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಇಲ್ಲಿಯ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದರು.
ಆರೋಪಿಯ ಹೆಸರು ರಾಹುಲ್ ಹುಂಡೇಕರ್. ಪೊಲೀಸರು ಈಗಾಗಲೇ ಆತನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಪೊಲೀಸರ ಪ್ರಕಾರ, ವೇಗದ ನಿಯಂತ್ರಣವಿಲ್ಲದ ಚಾಲನೆ ಇದಕ್ಕೆ ಕಾರಣವಾಗಿದೆ. ಇನ್ನೂ ತನಿಖೆ ನಡೆಯುತ್ತಿದ್ದು, ಕಾರು ಚಾಲಕ ಮದ್ಯಪಾನ ಮಾಡಿದ್ದನಾ ಅಥವಾ ದಾರಿಯಲ್ಲಿ ಅಸಾವಧಾನತೆಯಿಂದ ಚಾಲನೆ ಮಾಡಿದ್ದನಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಮೃತ ಬಾಲಕ ಅಗಸ್ತ್ಯ ಕನಮಡಿ, ರಡ್ಡೆರಟ್ಟಿ ಗ್ರಾಮದ ನಿವಾಸಿಯಾಗಿದ್ದು, ಕೇವಲ 4ನೇ ತರಗತಿಯಲ್ಲಿ ಓದುತ್ತಿದ್ದ. ಶಾಂತ ಸ್ವಭಾವದ, ಎಲ್ಲರಿಗೂ ಇಷ್ಟವಾಗುತ್ತಿದ್ದ ಈ ಬಾಲಕ ಶಾಲೆಯಿಂದ ಮನೆಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು , ಮನೆಗೆ ಮತ್ತೆ ಬಾಲಕ ಬರುವುದಿಲ್ಲ ಅನ್ನೋ ಖಾಲಿತನ ಮನೆಯ ಮೇಲೆ ಆವರಿಸಿಕೊಂಡಿದೆ.

 

 

- Advertisement -

Latest Posts

Don't Miss