www.karnatakatv.net: ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತವು ಇಂದು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಕೊರೊನಾ ಲಸಿಕೆ ವಿತರಣೆ ಪ್ರತ್ರಿಯೆ ಆರಂಭವಾಗಿ 9 ತಿಂಗಳಿನಲ್ಲಿ 100 ಕೋಟಿ ಡೋಸ್ ಲಸಿಕೆಯನ್ನು ವಿತರಿಸುವ ಮೂಲಕ ಜಗತ್ತಿನಲ್ಲಿ 2ನೇ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.
ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದು, ಇದರ ನಂತರ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಅತಿಹೆಚ್ಚು ಲಸಿಕೆ ವಿತರಿಸಿದ ದೇಶದ ಟಾಪ್-5 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. 130 ಕೋಟಿ ಭಾರತೀಯರ ಭಾರತೀಯ ವಿಜ್ಞಾನ, ಉದ್ಯಮ ಮತ್ತು ಸಾಮೂಹಿಕ ಮನೋಭಾವದ ವಿಜಯವನ್ನು ನೋಡುತ್ತಿದ್ದೇವೆ. 100 ಕೋಟಿ ಲಸಿಕೆಗಳನ್ನು ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಮತ್ತು ಈ ಸಾಧನೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು,” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಅದೇ ರೀತಿ ಕೊವಿಡ್-19 ಲಸಿಕೆ ವಿತರಣೆಯದಲ್ಲಿ ದೇಶದ ಸಾಧನೆ ಮತ್ತು ಈ ಸಾಧನೆಯಲ್ಲಿ ಶ್ರಮ ವಹಿಸಿ ಹೋರಾಡಿದ ಆರೋಗ್ಯ ಕಾರ್ಯಕರ್ತರ ಬಗ್ಗೆ ಕೇಂದ್ರ ಮತ್ತು ರಾಜ್ಯದ ನಾಯಕರು ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಕ್ರಿಯೆಯನ್ನು ಆರಂಭಿಸಿ 279 ದಿನಗಳು ಕಳೆದಿವೆ. ಆ ಮೂಲಕ ಲಸಿಕೆ ವಿತರಣೆಯಲ್ಲಿ ಭಾರತವು ಹೊಸ ದಾಖಲೆ ಬರೆದಿದೆ.
ಇದು ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ ಎಂದ ಪ್ರಧಾನಿ ಮೋದಿ “ಇಂದು ಭಾರತವು ಕೋವಿಡ್ 19 ವಿರುದ್ಧ ‘ಸುರಕ್ಷಾ ಕವಚ’ ಎಂದು 100 ಕೋಟಿ ಲಸಿಕೆಗಳನ್ನು ಹೊಂದಿದೆ. ಇದು ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ. ಲಸಿಕೆ ತಯಾರಕರು, ಆರೋಗ್ಯ ಕಾರ್ಯಕರ್ತರು ಮತ್ತು ಈ ಲಸಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ,” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.