www.karnatakatv.net :ಸಿನಿಮಾ ಥಿಯೇಟರ್ ಗಳಲ್ಲಿ ಶೇ.100ರಷ್ಟು ಆಸನ ಭರ್ತಿ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಕೋವಿಡ್ ಹರಡೋ ಭೀತಿಯಿಂದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಶೇ. 50ರಷ್ಟು ಆಸನಗಳ ಭರ್ತಿಗೆ ಮಾತ್ರ ಸರ್ಕಾರ ಆದೇಶ ನೀಡಿದೆ.
ಚಿತ್ರರಂಗಕ್ಕೆ ಕೋವಿಡ್ ತಂದಿಟ್ಟಿರೋ ಸಮಸ್ಯೆ ಒಂದೆರಡಲ್ಲ. ಒಂದೆಡೆ ಶೂಟಿಂಗ್ ಗೆ ನಿರ್ಬಂಧ ಹೇರಿದ್ರೆ, ಮತ್ತೊಂದೆಡೆ ಥಿಯೇಟರ್ ಗಳಲ್ಲಿ ಪ್ರೇಕ್ಷಕರ ಕೊರತೆ ತಲೆನೋವಾಗಿ ಕಾಡ್ತಿದೆ. ಈ ಮಧ್ಯೆ ಹೇಗೋ ಫಿಲ್ಮ್ ಶೂಟಿಂಗ್ ಮುಗಿಸಿ ಧೈರ್ಯ ಮಾಡಿ ಬಿಡುಗಡೆ ಮಾಡಲಾಗ್ತಿರೋ ಚಿತ್ರಗಳು ಅಷ್ಟೇನೂ ಕಲೆಕ್ಷನ್ ಮಾಡ್ತಿಲ್ಲ.ಈ ಎಲ್ಲಾ ಸಮಸ್ಯೆಗಳಿಗೂ ಇತಿಶ್ರೀ ಹಾಕಲು ರಾಜ್ಯ ಸರ್ಕಾರ ಚಿಂತನೆ ನಡೆಸ್ತಿದೆ. ಸಿನಿಮಾ ಥಿಯೇಟರ್ ಗಳಲ್ಲಿ ಶೇ.100 ರಷ್ಟು ಆಸನದ ಭರ್ತಿ ವಿಚಾರವಾಗಿ ಸಿಹಿ ಸುದ್ದಿ ನೀಡಲು ಸರ್ಕಾರ ಮುಂದಾಗಿದೆ.
ಇದೇ ವಿಚಾರವಾಗಿ ಇಂದು ಚಿತ್ರ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ ಸಚಿವ ಕೆ.ಸುಧಾಕರ್, ದಸರಾ ಹಬ್ಬಕ್ಕೂ ಮುನ್ನವೇ ಸಿನಿಮಾ ಹಾಲ್ ಗಳ ಸಂಪೂರ್ಣ ಸೀಟು ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಲಿದೆ ಅನ್ನೋ ಸೂಚನೆ ನೀಡಿದ್ದಾರೆ. ಈಗಾಗಲೇ ಸಿಎಂ ಬೊಮ್ಮಾಯಿಯವರೊಂದಿಗೆ ಚರ್ಚಿಸಿದ್ದು 2-3 ದಿನಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.