- Advertisement -
43 Dಬಾಸ್ ಫ್ಯಾನ್ಸ್ ಕೇಸ್
ಪೊಲೀಸ್ ತನಿಖೆ ಆರಂಭ
ದರ್ಶನ್ ಫ್ಯಾನ್ಸ್‌ಗಳು ಎಂದು ಕಾಮೆಂಟ್ ಮಾಡಿದ್ದವರ ವಿರುದ್ಧ ರಮ್ಯಾ ಕಾನೂನು ಸಮರಕ್ಕೆ ಶಂಖನಾದ ಮೊಳಗಿಸಿದ್ದಾರೆ. ಡಿ ಅಭಿಮಾನಿಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟಿದ್ದಾರೆ. ನಟಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಡಿ ಬಾಸ್ ಫ್ಯಾನ್ಸ್ ಅಂತ ಹೇಳಿಕೊಳ್ಳೋ ಕೆಲವು ಮಾನಗೇಡಿಗಳ ಮೊಂಡಾಟ, ಹುಚ್ಚಾಟ ಇದೇ ಮೊದಲೇನಲ್ಲ. ದರ್ಶನ್ ಬೇಲ್ ವಿಚಾರವಾಗಿ ಪೋಸ್ಟ್ ಮಾಡಿದ ನಟಿ ರಮ್ಯಾಗೆ ಆಶ್ಲೀಲ ಕಾಮೆಂಟ್ ಮಾಡಿದ ಕೆಲ ಲಜ್ಜೆಗೆಟ್ಟವರ ಕೃತ್ಯ ಸದ್ಯ ರಮ್ಯಾರನ್ನ ರಣಚಂಡಿಯಾಗಿಸಿದೆ.
ನಾನ್ ಯಾವನನ್ನ ಮಗನಿಗೂ ಹೆದರಲ್ಲ ಎಂದಿದ್ದರು. ಈ ಮೂಲಕ ಗಾಡ ನಿದ್ರೆಗೆ ಜಾರಿದ್ದ ಸ್ಯಾಂಡಲ್ವುಡ್ನ ಬಡಿದೆಬ್ಬಿಸೋ ಕೆಲಸ ಮಾಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಅಶ್ಲೀಲ ಸಂದೇಶ, ಕಾಮೆಂಟ್ಗಳ ದಾಖಲೆ ಸಮೇತ ಕಮಿಷನರ್‌ಗೆ ದೂರು ನೀಡಿರೋ ರಮ್ಯಾ ಈ ನೀಚರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಅಂತ ಮನವಿ ಮಾಡಿದ್ದಾರೆ.
ರಮ್ಯಾ ದೂರು ಬೆನ್ನಲ್ಲೇ ದರ್ಶನ್ ಫ್ಯಾನ್ಸ್‌ಗೆ ಸಂಕಷ್ಟ ಶುರುವಾಗಿದೆ. ದರ್ಶನ್ ಫ್ಯಾನ್ಸ್ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 43 ಇನ್ಸ್ಟಾ ಐಡಿ ಅಡ್ಮಿನ್ಗಳ ವಿರುದ್ಧ FIR ದಾಖಲಾಗಿದೆ. ಇವರ ಮೇಲೆ ಒಂದಲ್ಲ ಎರಡಲ್ಲ ಸಾಕಷ್ಟು ಸೆಕ್ಷನ್ ಅಡಿ ಎಫ್ಐಆರ್ ದಾಖಲಾಗಿದೆ.
ಯಾವೆಲ್ಲಾ ಸೆಕ್ಷನ್‌ಗಳು?
BNS 351(2): ಮಹಿಳೆ ಗೌರವಕ್ಕೆ ಧಕ್ಕೆಯಾಗುವ ಶಬ್ದ ಬಳಕೆ
351(3)- ಲೈಂಗಿಕ ಉದ್ದೇಶದಿಂದ ಕಿರುಕುಳ ನೀಡುವುದು
BNS 352- ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಮುಟ್ಟುವುದು
BNS ಸೆ. 75(1)(4): ಕ್ರಿಮಿನಲ್ ನಡತೆಗಳಲ್ಲಿ ಸಂಚು
BNS ಸೆ. 79- ಗಂಭೀರ ನಡತೆ ಆಧಾರದ ಗಂಭೀರ ಅಪರಾಧ
IT ಆ್ಯಕ್ಟ್ ಸೆ. 66 – Hacking/Illegal access ಕೂಡ ದಾಖಲು
ಕಂಪ್ಯೂಟರ್ ಸಿಸ್ಟಮ್‌ಗೆ ಕಾನೂನುಬಾಹಿರವಾಗಿ ಪ್ರವೇಶ
ಡೇಟಾ ಅಳಿಸುವುದು ಅಥವಾ ಬದಲಾಯಿಸುವುದು ಅಪರಾಧ
ಶಿಕ್ಷೆ: 3 ವರ್ಷವರೆಗೆ ಜೈಲು ಜೊತೆಗೆ ದಂಡ ವಿಧಿಸಲು ಅವಕಾಶ
ಸೆ. 67: ಅಶ್ಲೀಲ ಪೋಸ್ಟ್, ಫೋಟೋ, ವಿಡಿಯೋ ಅಪ್‌ಲೋಡ್
ಶಿಕ್ಷೆ: 3 ರಿಂದ 5 ವರ್ಷ ಜೈಲು ಶಿಕ್ಷೆ, ಭಾರೀ ದಂಡ ವಿಧಿಸಲು ಅವಕಾಶ
ಈ ಎಲ್ಲಾ ಸೆಕ್ಷನ್ ಗಳ ಮೇಲೆ ರಮ್ಯ ಅವರ ದೂರು ದಾಖಲಾಗಿದೆ. ಈಗಾಗಲೇ ಪೊಲೀಸರ ತನಿಖೆ ಶುರುವಾಗಿದ್ದು ಮುಂದೆ ಯಾವ ರೀತಿ ಕ್ರಮವಾಗುತ್ತದೆ. ರಮ್ಯಾ vs ದರ್ಶನ್ ಫ್ಯಾನ್ಸ್ ವಾರ್ ಎಲ್ಲಿಯವರೆಗ ಹೋಗುತ್ತೆ ಕಾದು ನೋಡಬೇಕಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ
- Advertisement -