ರಾಜ್ಯದಲ್ಲಿ ಮಳೆಯಿಂದಾಗಿ 12 ಮಂದಿ ಸಾವು, 430 ಜಾನುವಾರು ಬಲಿ – ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಸುರಿದಂತ ಅಕಾಲಿಕ ಮಳೆಯಿಂದಾಗಿ ಇಲ್ಲಿಯವರೆಗೆ 12 ಮಂದಿ ಸಾವನ್ನಪ್ಪಿದ್ದಾರೆ. 430 ಜಾನುವಾರುಗಳು ಸಾನ್ನಪ್ಪಿವೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಮಳೆ ಹಾನಿ ಸಂಬಂಧ ಮಾಹಿತಿ ಪಡೆದರು. ಈ ಸಭೆಯ ಬಳಿಕ ಮಾತನಾಡಿದ ಅವರು, ಮಳೆಯಿಂದಾಗಿ 1,431 ಮನೆಗಳಿಗೆ ನೀರು ನುಗ್ಗಿದೆ. 4242 ಮನೆಗಳಿಗೆ ಭಾಗಶಹ ಹಾನಿಗೊಂಡಿವೆ ಎಂದರು.

ಬೇಸಿಗೆ ಮಳೆಯಿಂದಾಗಿ ಬೆಳೆದು ನಿಂತಿದ್ದಂತ 7,010 ಹೆಕ್ಟೇರ್ ಕೃಷಿ ಬೆಳೆ, 5736 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೊಂಡಿದೆ. ಡಿಸಿಗಳು, ಕಾರ್ಯದರ್ಶಿಗಳು ಮುಂದಿನ ಎರಡು ಮೂರು ದಿನ ಅಧಿಕಾರಿಗಳು ಕಡ್ಡಾಯ ಸ್ಥಳ‌ ಪರಿಶೀಲನೆ ಮಾಡಬೇಕು. ಮುಖ್ಯ ಕಾರ್ಯದರ್ಶಿ ಗೆ ಸ್ಥಳ ಭೇಟಿ ಬಗ್ಗೆ ಕಡ್ಡಾಯ ವರದಿ ಸಲ್ಲಿಸಬೇಕು. ಯಾವುದೇ ಅಧಿಕಾರಿಗಳಿಗೂ ಮುಂದಿನ 15 ದಿನ ರಜೆ ಇಲ್ಲ ಎಂಬುದಾಗಿ ಖಡಕ್ ಸೂಚನೆ ನೀಡಿದರು.

About The Author