Thursday, December 26, 2024

Latest Posts

ನನ್ನ ಸಭಾಪತಿ ಅವಧಿಯಲ್ಲಿಯೇ 13 ಜನರ ರಾಜೀನಾಮೆ ಅಂಗೀಕಾರ: ಸಭಾಪತಿ ಹೊರಟ್ಟಿ ಬಿಚ್ಚಿಟ್ಟ ಅಂಕಿಅಂಶ

- Advertisement -

Hubli News: ಹುಬ್ಬಳ್ಳಿ: ಸಿ.ಪಿ.ಯೋಗೇಶ್ವರ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ವ ಇಚ್ಚೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಈ ಬಗ್ಗೆ ಅವರನ್ನು ಕೇಳಿದೆ ಏನಾದರೂ ಬೆದರಿಕೆ, ಒತ್ತಡ ಇದೆಯೇ..? ಎಂದು ಏನಿಲ್ಲಾ ಸ್ವ ಇಚ್ಛೆಯಿಂದ ರಾಜೀನಾಮೆ ಕೊಡುತ್ತಿದ್ದೇನೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ರಾಜೀನಾಮೆ ಅಂಗೀಕಾರ ಮಾಡಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿ ಅವರು, ಸಿ.ಪಿ.ಯೋಗೇಶ್ವರ ರಾಜೀನಾಮೆ ಹಿಡಿದು ಇಲ್ಲಿಯವರೆಗೆ 13ಜನ ರಾಜೀನಾಮೆ ಕೊಟ್ಟಿದ್ದಾರೆ. ಮೊದಲು ಎರಡು ಮೂರು ರಾಜೀನಾಮೆ ಅಂದರೇ ಹೆಚ್ಚು. ಆದರೆ ಈಗ ಹದಿಮೂರು ಜನರು ರಾಜೀನಾಮೆ ಕೊಟ್ಟಿದ್ದಾರೆ ಎಂದರು.

ಬಹಳಷ್ಟು ಜನ ನನಗೆ ಪೋನ್ ಮಾಡಿದ್ದಾರೆ. ಅದೆಲ್ಲವೂ ಹೇಳುವ ಹಾಗಿಲ್ಲ. ನಾನು ಸಂವಿಧಾನದ ಹುದ್ದೆಯಲ್ಲಿರುವ ಕಾರಣ ನಾನು ಯಾವುದನ್ನು ಹೇಳುವ ಹಾಗಿಲ್ಲ. ನಾನು ಸಭಾಪತಿ ಆಗಿರುವ ಅವಧಿಯಲ್ಲಿಯೇ 13 ಜನ ರಾಜೀನಾಮೆ ಕೊಟ್ಟಿದ್ದಾರೆ.‌ 13ಜನರ ರಾಜೀನಾಮೆ ಅಂಗೀಕಾರ ಮಾಡಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

- Advertisement -

Latest Posts

Don't Miss