ರಾಜ್ಯದಲ್ಲಿ ಇಂದು 139 ಮಂದಿಗೆ ಕೋವಿಡ್, ಬೆಂಗಳೂರಿನಲ್ಲಿ 100ರ ಗಡಿದಾಟಿದ ಕೇಸ್

ಬೆಂಗಳೂರು: ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ ಹೊಸದಾಗಿ 139 ಮಂದಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ ಬೆಂಗಳೂರು ನಗರದಲ್ಲಿ 132, ಬೆಂಗಳೂರು ಗ್ರಾಮಾತಂರ, ಚಿಕ್ಕಮಗಳೂರು, ದಾವಣಗೆರೆ, ಕೋಲಾರ ಮತ್ತು ರಾಮನಗರ ಜಿಲ್ಲೆಯಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ ಎಂದು ತಿಳಿಸಿದೆ.

ಕಳೆದ 24 ಗಂಟೆಯಲ್ಲಿ 139 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ತಿಳಿದು ಬಂದ ಕಾರಣ, ಸೋಂಕಿತರ ಸಂಖ್ಯೆ 39,46,874ಕ್ಕೆ ಏರಿಕೆಯಾಗಿದೆ. ಇಂದು 55 ಜನರು ಸೇರಿ 39,05,096 ಜನರು ಗುಣಮುಖರಾದ ಕಾರಣ ಇದೀಗ 1679 ಸಕ್ರೀಯ ಸೋಂಕಿತರು ಇರೋದಾಗಿ ಹೇಳಿದೆ.

About The Author