- Advertisement -
ಕರ್ನಾಟಕ ಟಿವಿ : ಸಂಪುಟ ವಿಸ್ತರಣೆ ಮಾಡಿದ್ರೂ ಯಡಿಯೂರಪ್ಪಗೆ ಖಾತೆ ಕಿರಿಕ್ ತಪ್ಪಿಲ್ಲ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ನಾಲ್ವರಿಗೆ ಸಚಿವ ಸ್ಥಾನ ನೀಡಿ ಸರ್ಕಾರ ಉಳಿಸಿಕೊಳ್ಳೋಣ ಅಂತ ಸಲಹೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಅನರ್ಹರಿಗೆ ಮೋಸ ಮಾಡಬಾರದು
ಇನ್ನು ಕೆಲಸ ಸಚಿವರ ಸಲಹೆಗೆ ಯಡಿಯೂರಪ್ಪ ಉತ್ತರಿಸುತ್ತಾ ಅನರ್ಹ ಶಾಸಕರ ರಾಜೀನಾಮೆಯಿಂದ ನಾವು ಸರ್ಕಾರ ರಚಿಸಿದ್ದೇವೆ. ಯಾವುದೇ ಕಾರಣಕ್ಕೂ 17 ಶಾಸಕರ ಕೈಬಿಡಬಾರದು ಅಂತ ಯಡಿಯೂರಪ್ಪ ಹೇಳಿದ್ದಾರೆ. ಇಂದು ಸಚಿವರಿಗೆ ಖಾತೆ ಹಂಚಲಾಗುತ್ತೆ ಅಂತ ಹೇಳಲಾಗ್ತಿತ್ತು ಆದ್ರೆ ಇಂದು ಖಾತೆ ಹಂಚಿಕೆಯಾಗಿಲ್ಲ. ಈ ನಡುವೆ ಅಮಿತ್ ಶಾ ಮೂವರಿಗೆ ಡಿಸಿಎಂ ಸ್ಥಾನ ನೀಡೋ ಲೆಕ್ಕಾಚಾರ ಯಡಿಯೂರಪ್ಪ ಗೆ ತಲೆನೋವು ಉಂಟು ಮಾಡಿದೆ.
- Advertisement -