Sunday, March 3, 2024

Latest Posts

ಗೋಡೆ ಕುಸಿದು 17 ಮಂದಿ ದಾರುಣ ಸಾವು..!

- Advertisement -

ಮಹಾರಾಷ್ಟ್ರ: ರಾಜ್ಯಾದ್ಯಂತ ವ್ಯಾಪಕವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಶೆಡ್ ಮೇಲೆ ಕಾಂಪೌಂಡ್ ಕುಸಿದು 17 ಮಂದಿ ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ.

ಪುಣೆಯ ಕೊಂಢ್ವಾ ಪ್ರದೇಶದಲ್ಲಿ ಮಳೆಯಿಂದಾಗಿ ಅಪಾರ್ಟ್ ಮೆಂಟ್ ನ ಗೋಡೆ ಪಕ್ಕದಲ್ಲಿದ್ದ ಶೆಡ್ ಗಳ ಮೇಲೆ ಕುಸಿದ ಪರಿಣಾಮ ನಾಲ್ವರು ಮಕ್ಕಳೂ ಸೇರಿದಂತೆ ಒಟ್ಟು 17 ಮಂದಿ ಕಾರ್ಮಿಕರು ಅಸುನೀಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಎನ್ ಡಿ ಆರ್ ಎಫ್ ತಂಡ ಅವಶೇಷದಡಿ ಸಿಲುಕಿ ನರಳಾಡುತ್ತಿದ್ದ ಮೂವರ ರಕ್ಷಿಸಿದ್ದಾರೆ. ಇನ್ನು ಮೃತರೆಲ್ಲರೂ ಬಿಹಾರ ಮತ್ತು ಪಶ್ಚಿಮ ಬಂಗಾಳ ಮೂಲದ ಕಟ್ಟಡ ಕಾರ್ಮಿಕರಾಗಿದ್ದು ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರದ ಭರವಸೆ ನೀಡಿದೆ. ಘಟನೆಗೆ ಕನ್ಸ್ ಟ್ರಕ್ಷನ್ ಕಂಪನಿಯ ನಿರ್ಲಕ್ಷ್ಯವೇ ಕಾರಣ ಅಂತ ಹೇಳಲಾಗ್ತಿದ್ದು, ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇವರು ಇಷ್ಟು ಕಮ್ಮಿ ಬೆಲೆಗೆ ಪೆಟ್ರೋಲ್ ಮಾರಾಟ ಮಾಡ್ತಿರೋದ್ಯಾಕೆ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=ii4UGQ3fUtY
- Advertisement -

Latest Posts

Don't Miss