Saturday, September 21, 2024

Latest Posts

1953 ರೂಪಾಯಿ ನಾಪತ್ತೆ: ಬಿಜೆಪಿ ಎಂಎಲ್‌ಸಿ ಅರುಣ್ ಆರೋಪ

- Advertisement -

Political News: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದ ಬಳಿಕ, ಸಾಲು ಸಾಲು ಭ್ರಷ್ಟಾಚಾರದ ಪ್ರಕರಣಗಳು ಹೊರಬೀಳುತ್ತಿದೆ. ವಾಾಲ್ಮಿಕಿ ನಿಗಮದ ಭ್ರಷ್ಟಾಚಾರ, ಮುಡಾ ಹಗರಣ, ಇವೆಲ್ಲವೂ ಕಾಂಗ್ರೆಸ್ ನಾಯಕರ ತಲೆಬಿಸಿ ಮಾಡಿದೆ. ಅಲ್ಲದೇ ಸಿಎಂ ಕುರ್ಚಿ ಅಲುಗಾಡಿಸಿದೆ. ಇದೀಗ ಹೊಸತೊಂದು ಸುದ್ದಿ ಅಂದ್ರೆ 1953 ಕೋಟಿ ರೂಪಾಯಿ ನಾಪತ್ತೆಯಾಗಿದೆಯ ಈ ಬಗ್ಗೆ ಕರ್ನಾಟಕ ಟಿವಿ ಜೊತೆ, ಎಂಎಲ್‌ಸಿ ಅರುಣ್ ಕುಮಾರ್ ಅವರು ಮಾತನಾಡಿದ್ದಾರೆ.

ಬೆಳಗಾವಿ ಅಧಿವೇಷನದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ, ಸಿದ್ದರಾಮಯ್ಯನವರೇ ಸಿಎಂ ಆಗಿದ್ದರು ಮತ್ತು ವಿತ್ತಸಚಿವರೂ ಆಗಿದ್ದರು. ಈ ವೇಳೆ ಎಂಎಲ್‌ಸಿ ಅರುಣ್ ಅವರಿಗೆ, ವಿತ್ತ ಸಚಿವರಿಗೆ ಕೆಲವೊಂದು ಪ್ರಶ್ನೆ ಕೇಳುವ ಅವಕಾಶವಿತ್ತು. ಈ ವೇಳೆ ಅರುಣ್ ಅವರು, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ನಲ್ಲಿ ಬಳಸದೇ ಉಳಿದ ಹಣವೆಷ್ಟು ಎಂದು ಕೇಳಿದ್ದರು.

ಜೊತೆಗೆ ನಿಗಮಗಳಲ್ಲೂ ಬಳಸದೇ ಉಳಿದ ಹಣವೆಷ್ಟು ಎಂದು ಪ್ರಶ್ನಿಸಿದ್ದರು. ಇದಕ್ಕೆ ಸಿದ್ದರಾಮಯ್ಯನವರು ಒಟ್ಟು 1953 ಕೋಟಿ ಹಣ ಬಳಕೆಯಾಗದೇ ಉಳಿದಿದೆ. ಇದು ಕಾನೂನುಬದ್ಧವಾಗಿ ಜಮೆಯಾಗುತ್ತಿದೆ ಎಂದು ಉತ್ತರಿಸಿದ್ದರು.

ಬಳಕೆಯಾಗದ ಮೊತ್ತ, ಸಂಚಿತ ನಿಧಿಗೆ ಸೇರಬೇಕು ಅನ್ನೋದು ನಿಯಮ. ಆದರೆ ಸಂಚಿತ ನಿಧಿಗೆ ದುಡ್ಡು ಸೇರಿಲ್ಲ ಅನ್ನೋದು ಅರುಣ್ ಅವರ ಆರೋಪ. ಅಲ್ಲದೇ, ಸಿದ್ದರಾಮಯ್ಯ ಅವರು ನಾನು ಅಂದು ಕೇಳಿದ ಪ್ರಶ್ನೆಗೆ ಸರಿಯಾಗಿ ವಿವರಣೆ ನೀಡಲಿಲ್ಲ. ಹಾರಿಕೆಯ ಉತ್ತರ ನೀಡಿದ್ದಾರೆಂದು ಆರೋಪಿಸಿದ್ದಾರೆ. ಈ ಬಗ್ಗೆ ಪೂರ್ತಿ ಸಂದರ್ಶನ ನೋಡಬೇಕಿದ್ದಲ್ಲಿ ವೀಡಿಯೋ ನೋಡಿ.

- Advertisement -

Latest Posts

Don't Miss