ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಚರ್ಚೆ ತೀವ್ರಗೊಂಡಿದೆ. ಈ ಹಿನ್ನೆಲೆ, ಕಾಂಗ್ರೆಸ್ ಹೈಕಮಾಂಡ್ ದೊಡ್ಡ ಇಕ್ಕಟ್ಟಿಗೆ ಸಿಲುಕಿದೆ. ಡಿ.ಕೆ.ಶಿ ಅವರ ನಾಯಕತ್ವ ಬೇಡಿಕೆ ಮತ್ತು ‘ನವೆಂಬರ್ ಕ್ರಾಂತಿ’ ವದಂತಿಗಳು ಪಕ್ಷದ ಒಳಾಂಗಣದಲ್ಲಿ ಬಿಸಿ ಹುಟ್ಟಿಸಿದರೂ—ಎಐಸಿಸಿ ಸದ್ಯಕ್ಕೆ ಯಥಾಸ್ಥಿತಿ ‘ಬೆಸ್ಟ್’ ಎಂಬ ನಿರ್ಧಾರಕ್ಕೆ ಬಂದಿದೆ. ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆ ಕಾಲಭೇದಕ್ಕೆ ತಳ್ಳಲಾಗಿದೆ.
ಡಿಕೆ ಸಹೋದರರು ದಿಲ್ಲಿಯಲ್ಲಿ ಬೇಟಿ ನೀಡಿ ಬಲವಾದ ಒತ್ತಡ ಹೇರಿದ್ದರೂ, ಮಲ್ಲಿಕಾರ್ಜುನ ಖರ್ಗೆ ಸಮಾಧಾನದ ಮಂತ್ರ ನೀಡಿದ್ದು, ಡಿಸೆಂಬರ್ ಮೊದಲ ವಾರ ಆರಂಭವಾಗುವ ಸಂಸತ್ ಅಧಿವೇಶನದ ಬಳಿಕ ಮಾತ್ರ ಸಮಾಲೋಚನೆ ಸಾಧ್ಯವೆಂದು ಹೇಳಿದ್ದಾರೆ. ಡಿಸೆಂಬರ್ 8ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವುದರಿಂದ ಯಾವುದೇ ಬದಲಾವಣೆ ತಕ್ಷಣ ಸಂಭವಿಸುವ ಲಕ್ಷಣಗಳು ಇಲ್ಲ.
ಇದರ ನಡುವೆ ನವೆಂಬರ್ ಕ್ರಾಂತಿ, ಸಿಎಂ ಬದಲಾವಣೆ ವದಂತಿಗಳಿಗೆ ಸ್ವತಃ ಸಿದ್ದರಾಮಯ್ಯ, ಮುಂದಿನ ಬಜೆಟ್ ನಾನೇ ಮಂಡಿಸ್ತೀನಿ ಎಂದು ಪರೋಕ್ಷವಾಗಿ ಫುಲ್ ಸ್ಟಾಪ್ ಹಾಕಿದ್ದಾರೆ. ಈ ಹೇಳಿಕೆ ಮೂಲಕ ತಾವೇ ಮುಂದುವರೆದು ಸಿಎಂ ಆಗಿರುತ್ತೇನೆ ಎಂಬ ಭಾರೀ ಸಂದೇಶ ನೀಡಿದಂತಾಗಿದೆ. ಹೀಗಾಗಿ—ಬದಲಾವಣೆ ಕುತೂಹಲ ಇನ್ನೂ ಮುಂದುವರಿದು, ಅಂತಿಮ ನಿರ್ಧಾರಕ್ಕೆ ಕಾದು ನೋಡಬೇಕು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

