Saturday, March 2, 2024

Latest Posts

ಕಾಂಗ್ರೆಸ್ ನ ಮತ್ತೆರಡು ವಿಕೆಟ್ ಪತನ- ಶಾಸಕ ಸುಧಾಕರ್, ಎಂ.ಟಿ.ಬಿ ನಾಗರಾಜ್ ರಾಜೀನಾಮೆ..!

- Advertisement -

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಉಂಟಾಗಿರೋ ಬಿಕ್ಕಟ್ಟು ಮತ್ತಷ್ಟು ಕಗ್ಗಾಂಟಾಗುತ್ತಿದ್ದು ಇಂದು ಕಾಂಗ್ರೆಸ್ ನ ಇಬ್ಬರು ಶಾಸಕರು ರಾಜೀನಾಮೆ ನೀಡಿ ದೋಸ್ತಿಗೆ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ದೋಸ್ತಿಗಳು ಕಣ್ ಕಣ್ ಬಿಡುವಂತಾಗಿದೆ.

ಮಂತ್ರಿಗಿರಿ ಕೈ ತಪ್ಪಿದ ಹಿನ್ನೆಲೆಯಲ್ಲಿ ದೋಸ್ತಿ ವಿರುದ್ಧ ಅಸಮಾಧಾನಗೊಂಡು ರೆಬೆಲ್ ಆಗಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಸುಧಾಕರ್ ಸ್ಪೀಕರ್ ಕಚೇರಿಗೆ ಆಗಮಿಸಿ ರಾಜೀನಾಮೆ ನೀಡಿದ್ದಾರೆ, ಇವರೊಂದಿಗೆ ಹೊಸಕೋಟೆ ಕೈ ಶಾಸಕ ಎಂ.ಟಿ.ಬಿ ನಾಗರಾಜ್ ಕೂಡ ರಾಜೀನಾಮೆ ನೀಡಿದ್ದಾರೆ. ಆದ್ರೆ ಸಚಿವಸ್ಥಾನಾಕಾಂಕ್ಷಿಯಾಗಿದ್ದ ಶಾಸಕ ಸುಧಾಕರ್ ಗೆ ರಾಜ್ಯ ಮಾಲಿನ್ಯ ನಿಂಯತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಬಳಿಕ ಭಿನ್ನ ಮತ ಶಮನವಾಗಿದ್ದಂತೆ ಕಂಡುಬಂದಿತ್ತು. ಆದ್ರೆ ಸುಧಾಕರ್ ಈ ನಡೆ ಕಾಂಗ್ರೆಸ್ ನಾಯಕರನ್ನು ಕಂಗಾಲಾಗಿಸಿದೆ.

ಇನ್ನು ಸ್ಪೀಕರ್ ಗೆ ರಾಜೀನಾಮೆ ಸಲ್ಲಿಕೆ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹಾಗೂ ಮತ್ತಿತರ ಕಾಂಗ್ರೆಸ್ ಮುಖಂಡರು ಶಾಸಕ ಸುಧಾಕರ್ ರವರನ್ನು ಸಮಾಧಾನಪಡಿಸಲು ಮುಂದಾದಾಗ ಅಲ್ಲಿ ಜಟಾಪಟಿಯೇ ಏರ್ಪಟ್ಟಿತ್ತು. ಇನ್ನು ಇಂದು ಬೆಳಗ್ಗೆಯೇ ಮುಂಬೈ ನಲ್ಲಿರೋ ಅತೃಪ್ತರು ಇನ್ನೂ 4 ಮಂದಿ ಶಾಸಕರು ರಾಜೀನಾಮೆ ನೀಡಿ ನಮ್ಮನ್ನು ಸೇರಲಿದ್ದಾರೆ ಅಂತ ಹೇಳಿದ್ದ ಮಾತು ಇದೀಗ ನಿಜವಾಗುವಂತೆ ಕಾಣುತ್ತಿದೆ.

ಸರ್ಕಾರ ಪತನವಾಗೋದು ಖಚಿತ..?!ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=9BtwV3TVOkA
- Advertisement -

Latest Posts

Don't Miss