Sunday, September 8, 2024

Latest Posts

I phone : ಖತರ್ನಾಕ್ ಲೇಡಿ! : ಮನೆ ಖರೀದಿಸಲು ಯುವತಿಯ ಅಡ್ಡದಾರಿ!

- Advertisement -

ಜೀವನದಲ್ಲಿ ಒಂದು ಮನೆ ಕಟ್ಟಿಸಬೇಕು.. ಸೈಟ್ ಖರೀದಿ ಮಾಡ್ಬೇಕು.. ಒಂದಿಷ್ಟು ಹಣ ಸಂಪಾದನೆ ಮಾಡ್ಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಇದೇ ಕಾರಣಕ್ಕೆ ಹಗಲು-ಇರುಳು ಎನ್ನದೆ ಕೋಟ್ಯಂತರ ಜನರು ಬೆವರು ಸುರಿಸಿ ದುಡಿಯುತ್ತಿದ್ದಾರೆ. ಇದರ ನಡುವೆಯೇ ಕೆಲವರು ಆಸ್ತಿ ಮಾಡೋದಕ್ಕೆ ಹಲವು ರೀತಿಯಲ್ಲಿ ಅಡ್ಡ ದಾರಿಗಳನ್ನು ಹಿಡಿದಿರುತ್ತಾರೆ.. ಹಾಗೆಯೇ, ಇಲ್ಲೋಬ್ಬ ಯುವತಿ ಮನೆ ಖರೀದಿ ಮಾಡೋದಕ್ಕೆ ಮಾಡಿದ ಹೈಡ್ರಾಮಾ ಹೇಳಿದ್ರೆ ನಿಮಗೆ ಒಂದು ಕ್ಷಣ ಅಚ್ಚರಿ ಆಗೋದ್ರಲ್ಲಿ ಅನುಮಾವೇ ಇಲ್ಲ..

ಬಡ ಕುಟುಂಬದಿಂದ ಬಂದ ಯುವತಿಯೊಬ್ಬಳಿಗೆ ಸ್ವಂತ ಮನೆ ಖರೀದಿಸಬೇಕು ಅನ್ನೋ ಆಸೆ ಇರುತ್ತೆ. ಇದೇ ಕಾರಣಕ್ಕೆ 20 ಯುವಕರನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿ ಅವರಿಂದ ದುಬಾರಿ ಬೆಲೆಯ ಐಫೋನ್​​ಗಳನ್ನು ಗಿಫ್ಟ್​​ ಆಗಿ ಪಡೆದುಕೊಂಡಿದ್ದಾಳೆ. ಬಳಿಕ ಎಲ್ಲ ಐ ಫೋನ್​​ಗಳನ್ನು 14 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟ ಮಾಡಿ ಡೌನ್​​ ಪೇಮೆಂಟ್​​ನಲ್ಲಿ ಹೊಸ ಮನೆ ಖರೀದಿಸಿದ್ದಾಳೆ.

ಆರಂಭದಲ್ಲಿ ಪ್ರೇಮಿಸುವ ನಾಟಕವಾಡಿದ್ದ ಯುವತಿ ಯಾವಾಗ ಐಫೋನ್ ಸಿಗುತ್ತೋ ಆಗ ಬ್ರೇಕ್ ಆಪ್ ಮಾಡಿಕೊಳ್ಳುತ್ತಿದ್ಳು. ಅಂದಹಾಗೆ, ಈ ಘಟನೆ ನಡೆದಿರುವುದು ಚೀನಾದಲ್ಲಿ. ಕೆಲ ದಿನಗಳ ಹಿಂದೆ ಯುವತಿ ಕುರಿತಾದ ಪೋಸ್ಟ್‌ನ್ನು @tech_grammm ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದ್ರೆ ಈ ಘಟನೆ 2016ರಲ್ಲಿ ನಡೆದಿತ್ತು. ಚೀನಾದ ಬ್ಲಾಗರ್ ಪ್ರೌಡ್‌ ಕಿಯಾಬಾ ಎಂಬವರು ಯುವತಿಯ ಕಥೆಯನ್ನು ರಿವೀಲ್ ಮಾಡಿದ್ದರು. 20 ಯುವಕರನ್ನು ವಂಚಿಸಿದ ಚೀನಾ ಮೂಲದ ಯುವತಿಯ ಹೆಸರು ಕ್ಷಿಯೋಲಿ. ಈ ಯುವತಿ ಬ್ಲಾಗರ್ ಆಗಿರುವ ಪ್ರೌಡ್‌ ಕಿಯಾಬಾ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಳು. ಸ್ನೇಹಿತರ ಮನವೊಲಿಸಿ ಹೇಗೆ ಐಫೋನ್ ಪಡೆದುಕೊಂಡೆ ಎಂಬ ವಿಚಾರವನ್ನು ಯುವತಿ ಹೇಳಿಕೊಂಡಿದ್ದಳು. ನಂತರ ಐಫೋನ್ ಮಾರಾಟ ಮಾಡಿದ್ದರಿಂದ ಮನೆಯೊಂದರ ಖರೀದಿಗೆ ಬೇಕಾಗುವಷ್ಟು ಡೌನ್‌ ಪೇಮೆಂಟ್ ಹಣವನ್ನು ಪಡೆದುಕೊಂಡಿದ್ದಳು ಎಂದು ಬ್ಲಾಗರ್ ಹೇಳಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ವಿಚಿತ್ರ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

- Advertisement -

Latest Posts

Don't Miss