Thursday, October 10, 2024

Latest Posts

ಯಡಿಯೂರಪ್ಪ ವಿರುದ್ಧ ಸಿಡಿದೇಳಲು 20 ಶಾಸಕರು ರೆಡಿ..!

- Advertisement -

ಬೆಂಗಳೂರು : ಹೈಕಮಾಂಡ್ ಕಾಡಿಬೇಡಿ ಕೊನೆಗೂ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಇದೇ ವೇಳೆ ಬಿಎಸ್ ವೈ ಸರ್ಕಾರಕ್ಕೆ ಬಯಸದೇ ಸಮಸ್ಯೆಗಳು ಸಹ ಎದುರಾಗೋದು ಗ್ಯಾರಂಟಿಯಾಗಿದೆ. ಮೊದಲ ಹಂತದಲ್ಲಿ 14-16 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.. ಈ 16ರ ಲಿಸ್ಟ್ ನಲ್ಲಿ ಇಲ್ಲದ 20 ಸಚಿವಾಕಾಂಕ್ಷಿಗಳು ಬಿಜೆಪಿ ಸರ್ಕಾರಕ್ಕೆ ತಲೆನೋವಾಗೋದು ಗ್ಯಾರಂಟಿಯಾಗಿದೆ.. ಬಿಜೆಪಿ ಹಿರಿಯ ಶಾಸಕ ವಿ ಸೋಮಣ್ಣ ಬಿಎಸ್ ವೈ ಕ್ಯಾಬಿನೆಟ್ ಸೇರೋದು ಡೌಟ್ ಅಂತ ಹೇಳಲಾಗ್ತಿದೆ ಸೋಮಣ್ಣ ಅನಂತ್ ಕುಮಾರ್ ಬೆಂಬಲಿಗ ಅನ್ನುವ ಕಾರಣಕ್ಕೆ ಯಡಿಯೂರಪ್ಪ ದೂರ ಮಾಡ್ತಿದ್ದಾರೆ ಎನ್ನಲಾಗ್ತಿದೆ.. ಬಹುತೇಕ ವಿ. ಸೋಮಣ್ಣ ಸಚಿವ ಸ್ಥಾನ ಸಿಗದಿದ್ದರೆ ಭಿನ್ನಮತೀಯರ ಸಾಲಿಗೆ ಮೊದಲ ಸೇರ್ಪಡೆಯಾಗಲಿದ್ದಾರೆ..

ಇನ್ನು ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದ ದೇವದುರ್ಗ ಶಾಸಕ ಶಿವನಗೌಡ ನಾಯಕ ಸಚಿವಾಕಾಂಕ್ಷಿ ಆದ್ರೆ ಸುರಪುರ ಶಾಸಕ ರಾಜೂಗೌಡಗೆ ಸಚಿವ ಸ್ಥಾನ ಕೊಡ್ತಿರುವ ಕಾರಣ ಶಿವನಗೌಡ ನಾಯಕ್ ಗೆ ಅವಕಾಶ ಕೈತಪ್ಪಲಿದೆ.. ಬೆಳಗಾವಿಯಲ್ಲಿ ಉಮೇಶ್ ಕತ್ತಿಗೆ ಸುಲಭವಾಗಿ ಸಚಿವ ಸ್ಥಾನ ದೊರಕಲಿದೆ ಅಂತ ಎಲ್ಲರೂ ಭಾವಿಸಿದ್ದಾರೆ. ಆದ್ರೆ, ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆಗಳೇ ಅವರಿಗೆ ಮುಳುವಾಗುವ ಸಾಧ್ಯತೆ ಇದೆ. ಒಂದು ವೇಳೆ ಉಮೇಶ್ ಕತ್ತಿ ಸಚಿವ ಸ್ಥಾನ ಕೈತಪ್ಪಿದ್ರೆ ಬಹಿರಂಗವಾಗಿ ಬಂಡೇಳೋದು ಗ್ಯಾರಂಟಿ. ಬೀದರ್ ಔರಾದ್ ನಿಂದ ನಿರಂತರವಾಗಿ ಆಯ್ಕೆಯಾಗುತ್ತಾ ಬಂದಿರುವ ಪ್ರಭು ಚವ್ಹಾಣ್ ಸಹ ಸಚಿವಾಕಾಂಕ್ಷಿ ಬಿಎಸ್ ವೈ ಲಿಸ್ಟ್ ನಲ್ಲಿ ಇವರ ಹೆಸರೇ ಇಲ್ಲ. ಹೀಗಾಗಿ ಔರಾದ್ ಶಾಸಕರು ಸಹ ಭಿನ್ನಮತೀಯ ಸಾಲಿಗೆ ಸೇರೋದು ಪಕ್ಕಾ ಆಗಿದೆ..

ವಿವಾದಾತ್ಮಕ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ನಾನು ಆಕಾಂಕ್ಷಿ ಅಂತ ಹೇಳಿದ್ದಾರೆ ಆದ್ರೆ ಅವರಿಗೆ ಸಚಿವ ಸ್ಥಾನ ಸಾಧ್ಯತೆ ತೀರಾ ಕಡಿಮೆ. ದಾವಣಗೆರೆಯ ಶಾಸಕ ಎಸ್. ಎ ರವೀಂದ್ರ ನಾಥ್, ಹೊನ್ನಾಳಿಯ ರೇಣುಕಾಚಾರ್ಯ, ಜಗಳೂರಿನ ಎಸ್.ವಿ ರಾಮಚಂದ್ರ, ಸಹ ಸಚಿವ ಸ್ಥಾನದ ಆಕಾಂಕ್ಷಿಗಳು ಇವರಿಗೆ ಸಚಿವ ಸ್ಥಾನ ಸಿಗದಿದ್ರೆ ಬಹಿರಂಗವಾಗಿ ಬುಸುಗುಟ್ಟೋದು ಪಕ್ಕಾ ಆಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿಗೆ ಅವಕಾಶ ಸಿಗೋದು ಡೌಟ್. ರಾಮುಲುಗೆ ಪ್ರಬಲ ಖಾತೆ ಸಿಕ್ಕಿದ್ರೆ ಸೋಮಶೇಖರ್ ರೆಡ್ಡಿ ಸೈಲೆಂಟ್ ಆಗಿರ್ತಾರೆ ಇಲ್ಲದಿದ್ರೆ ಅಸಮಾಧಾನ ಗ್ಯಾರಂಟಿ. ಇನ್ನು ಹರಪನಳ್ಳಿ ಶಾಸಕ ಕರುಣಾಕರ ರೆಡ್ಡಿ ಒಂದು ರೀತಿ ಸದಾ ಅತೃಪ್ತ ಶಾಸಕರೇ..

ಇನ್ನು ಚಿತ್ರದುರ್ಗ ವಿಚಾರಕ್ಕೆ ಬಂದ್ರೆ ಹಿರಿಯ ಶಾಸಕ ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್ ಗೂಳಿ ಹಟ್ಟಿ ಶೇಖರ್ ಸಚಿವಕಾಂಕ್ಷಿಗಳು, ಪೂರ್ಣಿಮಾಗೆ ಯಾದವ ಕೋಟಾ ಹಾಗೂ ಮಹಿಳಾ ಕೋಟಾದಡಿ ಸಚಿವ ಸ್ಥಾನ ಗ್ಯಾರಂಟಿ. ಉಳಿದ ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್ ಗೆ ಮಂತ್ರಿ ಭಾಗ್ಯ ಕನಸಿನ ಮಾತು. ಹೀಗಾಗಿ ಇವರಿಬ್ಬರು ಅಸಮಾಧಾನದ ಗುಂಪಿಗೆ ಸೇರೋದು ಗ್ಯಾರಂಟಿ  ಇನ್ನುತುಮಕೂರು ಜಿಲ್ಲೆಯಲ್ಲಿ ಮಾಧುಸ್ವಾಮಿಗೆ ಸಚಿವ ಸ್ಥಾ ನ ಗ್ಯಾರಂಟಿ. ಇನ್ನುಳಿದಂತೆ ಯಾರೂ ಪ್ರಬಲ ಆಕಾಂಕ್ಷಿಗಳು ಇಲ್ಲ..

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಗೇರಿ ಸ್ವೀಕರ್ ಆಗಿರುವ ಹಿನ್ನಲೆ ಉಳಿದ ಶಾಸಕರು ರೇಸ್ ನಲ್ಲಿ ಇಲ್ಲ.ಯಲ್ಲಾಪುರದ ಅನರ್ಹ ಶಾಸಕ ಶಿವರಾಂ ಹೆಬ್ಬಾರ್ ಮುಂದೆ ಸಚಿವರಾಗೋದು ಗ್ಯಾರಂಟಿ ಹಿನ್ನೆಲೆ ಯಾವುದೇ ಸಮಸ್ಯೆ ಇಲ್ಲ. ಉಡುಪಿಯಲ್ಲಿ 5 ಬಿಜೆಪಿ ಶಾಸಕರಿದ್ದ ಕಾರ್ಕಳ ಸುನೀಲ್ ಕುಮಾರ್, ಕುಂದಾಪುರದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಪ್ರಬಲ ಆಕಾಂಕ್ಷಿಗಳು ಆರ್ ಎಸ್ ಎಸ್ ಓಕೆ ಅಂದ್ರೆ ಇಬ್ಬರಿಗೂ ಅದೃಷ್ಟ ಖುಲಾಯಿಸಲಿದೆ.. ಒಂದು ವೇಳೆ ಹಾಲಾಡಿ ಗೆ ಸಚಿವ ಸ್ಥಾನ ಸಿಗದಿದ್ದರೆ ಅಸಮಾಧಾನ ಗ್ಯಾರಂಟಿ. ದಕ್ಷಿಣ ಕನ್ನಡದಲ್ಲಿ 8ರಲ್ಲಿ 7 ಬಿಜೆಪಿ ಶಾಸಕರಿದ್ದು. ಸುಳ್ಯ ಶಾಸಕ ಅಂಗಾರ ಲಾಟರಿ ಹೊಡೆದಂತೆ ಅದೃಷ್ಟ ಖುಲಾಯಿಸಬಹುದು. ಸಚಿವ ಸ್ಥಾನ ಕೊಡದಿದ್ದರೆ ಯಾವುದೇ ಸಮಸ್ಯೆ ಇಲ್ಲ. ಇನ್ನು ಚಿಕ್ಕಮಗಳೂರಿನಲ್ಲಿ ಸಿ,ಟಿ ರವಿ ಹಾಗೂ ಮೂಡಿಗೆರೆ ಕುಮಾರಸ್ವಾಮಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಿ,ಟಿ ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಅಥವಾ ಸಚಿವ ಸ್ಥಾನ ಗ್ಯಾರಂಟಿ. ಮೂಡಿಗೆರೆಯ ಎಂ.ಪಿ ಕುಮಾರಸ್ವಾಮಿಗೆ ಯಾವುದೇ ಅವಕಾಶ ಸಿಗೋದಿಲ್ಲ.

ಹಾಸನದಲ್ಲಿ ಪ್ರೀತಂಗೌಡಗೆ ಈ ಬಾರಿ ಸಂಪುಟ ಸೇರುವ ಸೌಭಾಗ್ಯ ಇಲ್ಲ. ಬೆಂಗಳೂರಿನಲ್ಲಿ ರಾಜಾಜಿನಗರ ಶಾಸಕ ಸಚಿವ ಸ್ಥಾನ ಪಡೆಯುವ ಉದ್ದೇಶದಿಂದಲೇ ಸ್ಪೀಕರ್ ಸ್ಥಾನ ತಿರಸ್ಕರಿಸಿದ್ದಾರೆ ಅನ್ನುವ ಮಾತಿದೆ. ಆದ್ರೆ ಈ ಬಾರಿ ಸುರೇಶ್ ಕುಮಾರ್ ಸಂಪುಟ ಸೇರೋದು ಡೌಟ್ ಅಂತ ಹೇಳಲಾಗ್ತಿದೆ. ಸುರೇಶ್ ಕುಮಾರ್ ಬದಲಾಗಿ ಮೈಸೂರಿನ ರಾಮದಾಸ್ ಅಥವಾ ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಸಚಿವರಾಗುವ ಸಾಧ್ಯತೆ ಇದೆ. ಇನ್ನು ಬೊಮ್ಮನಹಳ್ಳಿಯ ಸತೀಶ್ ರೆಡ್ಡಿ, ಯಲಹಂಕದ ವಿಶ್ವನಾಥ್ ಗೆ ಸಚಿವರಾಗುವ ಆಸೆ ಇದ್ದರೂ ಬಹಿರಂಗವಾಗಿ ಎಲ್ಲೂ ಬೇಡಿಕೆ ಇಟ್ಟಿಲ್ಲ.ಸಿವಿ ರಾಮನ್ ನಗರದ ರಘು ನಾಲ್ಕು ಬಾರಿ ಶಾಸಕರಾಗಿದ್ರು ಸಂಬಂಧಿ ಅರವಿಂದ ಲಿಂಬಾವಳಿಗೆ ಅವಕಾಶ ನೀಡುವ ಹಿನ್ನೆಲೆ ರಘು ಸಚಿವ ಸ್ಥಾನ ವಂಚಿತರಾಗ್ತಾರೆ ಎನ್ನಲಾಗ್ತಿದೆ. ಅಂತಿಮವಾಗಿ ಅಪ್ಪಚ್ಚುರಂಜನ್, ಬೋಪಯ್ಯ ಇಬ್ಬರು ಸಚಿವಕಾಂಕ್ಷಿಗಳು ಆದ್ರೆ ಇಬ್ಬರಿಗೂ ಸ್ಥಾನ ಸಿಗೋದು ಡೌಟ್. ಆದ್ರೆ ಇವರಿಬ್ಬರು ಅಸಮಾಧಾನ ವ್ಯಕ್ತಪಡಿಸಬಹುದೇ ವಿನಃ ಬಂಡಾಯವೇಳೋದು ಡೌಟು.

ಸಿ.ಪಿ ಯೋಗೀಶ್ವರ್ ಶಾಸಕರಾಗಿ ಗೆಲ್ಲದಿದ್ದರೂ ಆಪರೇಷನ್ ಕಮಲದ ಪ್ರಮುಖ ರೂವಾರಿ ಹೀಗಾಗಿ ಎಂಎಲ್ ಸಿ ಆಗಿ ಸಚಿವ ಸ್ಥಾನಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಸಿ.ಪಿ ಯೋಗೀಶ್ವರ್ ಗೆ ಸಚಿವ ಸ್ಥಾನ ಸಿಗದಿದ್ದರೆ ಮುಂದೆ ಸರ್ಕಾರ ಉಳಿಸಲು ಅಗತ್ಯ ಆಪರೇಷನ್ ನಿಂದ ದೂರ ಉಳಿದು ಸರ್ಕಾರ ಸಮಸ್ಯೆಗೆ ಸಿಲುಕಲು ಕಾರಣವಾಗುವ ಸಾಧ್ಯತೆ ಇದೆ.. ಒಟ್ಟಾರೆ ಬಿಎಸ್ ವೈ ಎಷ್ಟೆ ಕಷ್ಟಪಟ್ಟು ಅಮಿತ್ ಶಾ ಒಪ್ಪಿಸಿ ಸಂಪುಟ ವಿಸ್ತರಣೆ ಮಾಡಿದ್ರು ಭಿನ್ನಮತ ಆಗದಂತೆ ನೋಡಿಕೊಳ್ಳಲು ಬಿಎಸ್ ವೈಗೆ ಸಾಧ್ಯವಾದೋದಿಲ್ಲ.. ಡಿ.ಕೆ ಶಿವಕುಮಾರ್, ಹೆಚ್ಡಿ ಕುಮಾರಸ್ವಾಮಿ ಸಹ  ಬಿಜೆಪಿಯಲ್ಲಿನ ಭಿನ್ನಮತಕ್ಕಾಗಿಯೇ ಕಾದು ಕುಳಿತಿದ್ದಾರೆ.. ನಿಧಾನವಾಗಿ ಅಸಮಾಧಾನಗೊಂಡವರನ್ನ ಸಂಪರ್ಕಿಸಿ ಸರ್ಕಾರ ಉರುಳಿಸುವ ಸಾಧ್ಯತೆ ಇದೆ.

- Advertisement -

Latest Posts

Don't Miss